ಅಭಿಮಾನಿಗಳಿಗೆ Naa Ninna Bidalaare ದುರ್ಗಾ ಗುಡ್​ನ್ಯೂಸ್​ : ಅಮ್ಮನ ಸನ್ನಿಧಿಯಲ್ಲಿ ರಿಷಿಕಾ ಹೇಳಿದ್ದೇನು

Published : Jul 05, 2026, 06:54 PM IST

'ನಾ ನಿನ್ನ ಬಿಡಲಾರೆ' ಧಾರಾವಾಹಿಯ ದುರ್ಗಾ ಪಾತ್ರದಿಂದ ಖ್ಯಾತರಾದ ನಟಿ ರಿಷಿಕಾ, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರು 'ರಿಷಿಕಾ ಬೈ ರಿಷಿಕಾ' ಎಂಬ ತಮ್ಮದೇ ಬ್ರ್ಯಾಂಡ್​ನಡಿ ಸೀರೆ ವ್ಯಾಪಾರವನ್ನು ಆರಂಭಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ಎಲ್ಲರ ಬೆಂಬಲ ಕೋರಿದ್ದಾರೆ.

PREV
16
ನಾ ನಿನ್ನ ಬಿಡಲಾರೆ ದುರ್ಗಾ

ನಟಿ ರಿಷಿಕಾ ಎನ್ನುವುದಕ್ಕಿಂತ ನಾ ನಿನ್ನ ಬಿಡಲಾರೆಯ ದುರ್ಗಾ ಎಂದರೆ ಎಲ್ಲರಿಗೂ ತಿಳಿದುಬಿಡುತ್ತದೆ. ಈ ಸೀರಿಯಲ್​ನಲ್ಲಿ ಪೆದ್ದು ಪೆದ್ದಾಗಿ ನಟಿಸಿ ಈಗ ಪ್ರಬುದ್ಧ ಪತ್ನಿಯಾಗಿರುವ ದುರ್ಗಾಳ ರಿಯಲ್​ ಹೆಸರು ರಿಷಿಕಾ.

26
ಗುಡ್​ನ್ಯೂಸ್​

ನಟಿ ರಿಷಿಕಾ ಅವರು ಇದೀಗ ಅಭಿಮಾನಿಗಳಿಗೆ ಗುಡ್​ನ್ಯೂಸ್​​ ಕೊಟ್ಟಿದ್ದಾರೆ. ತಾವು ಸೀರೆಯ ವ್ಯಾಪಾರ ಶುರು ಮಾಡುವುದಾಗಿ ನಟಿ ಹೇಳಿಕೊಂಡಿದ್ದಾರೆ. ದೇವಿಯ ಸನ್ನಿಧಿಗೆ ಬಂದು ಮೊದಲ ಸೀರೆಯನ್ನು ದೇವಿಗೆ ಅರ್ಪಿಸುವ ಮೂಲಕ ತಮ್ಮ ಪ್ರಯಾಣವನ್ನು ರಿಷಿಕಾ ಆರಂಭಿಸಿದ್ದಾರೆ.

36
ಸೀರೆ ವ್ಯಾಪಾರ

ರಿಷಿಕಾ ಬೈ ರಿಷಿಕಾ ಎನ್ನುವ ಬ್ರ್ಯಾಂಡ್​ನಲ್ಲಿ ಸೀರೆ ವ್ಯಾಪಾರ ಮಾಡುತ್ತಿದ್ದು, ಸೀರಿಯಲ್​ನಂತೆಯೇ ಇದಕ್ಕೂ ಸಪೋರ್ಟ್ ಮಾಡುವಂತೆ ನಟಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.

46
ನಟಿಯ ಕುರಿತು

ಇನ್ನು ನಟಿಯ ಕುರಿತು ಹೇಳುವುದಾದರೆ, ಮೂಲತಃ ಮಲೆನಾಡು ಶಿವಮೊಗ್ಗದವರಾದ ಇವರು, ಹುಟ್ಟಿ ಬೆಳೆದೆಲ್ಲಾ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ರಿಷಿಕಾ ಇಂಜಿನಿಯರಿಂಗ್ ಪದವೀಧರೆ. ಇಂಜಿನಿಯರಿಂಗ್ ಕೆಲಸಕ್ಕೆ ಸೇರುವ ಬದಲು ನಟನೆಯತ್ತ ಮುಖ ಮಾಡಿದರು. 2012 ರಿಂದ ಬಣ್ಣದ ಲೋಕದಲ್ಲಿ ಸಕ್ರಿಯವಾಗಿರುವ ಈ ನಟಿಯ ವೃತ್ತಿ ಬದುಕಿಗೆ ಇವರ ತಾಯಿಯೇ ಬೆನ್ನೆಲುಬಾಗಿ ನಿಂತಿದ್ದಾರೆ.

56
ಸೀರಿಯಲ್​ ಪ್ರಯಾಣ

ನಾನಿನ್ನ ಬಿಡಲಾರೆ ಸೀರಿಯಲ್​ ರಿಷಿಕಾಗೆ ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸೀರಿಯಲ್​ನಲ್ಲಿ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

66
50 ಸಾವಿರ ಫಾಲೋವರ್ಸ್​

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಈ ಚೆಲುವೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 50 ಸಾವಿರ ಫಾಲೋವರ್ಸ್ ಇದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories