ನಂಬರ್ 1 ಧಾರಾವಾಹಿ ಹೀರೋನ ಹೆಂಡತಿಗೆ 'ಗಂಡನಿಗಿಂತ ಹೆಂಗಸರೇ ಇಷ್ಟವಂತೆ'! ಡಿವೋರ್ಸ್ ಹಂತಕ್ಕೆ ಹೋದ ದಾಂಪತ್ಯ!

Published : Jul 05, 2026, 06:11 PM IST

ದೇಶದ ನಂ.1 ಕಿರುತೆರೆ ಧಾರಾವಾಹಿ ನಟನ ಸುಂದರ ಹೆಂಡತಿ ನನಗೆ ಹುಡ್ಗೀರು ಅಂದ್ರೆ ಇಷ್ಟ, ನಾನು ಬೈಸೆಕ್ಸುವಲ್ ಎಂದು ಹೇಳುವ ಮೂಲಕ ಗಂಡ ಹಾಗೂ ಅಭಿಮಾನಿಗಳ ಮನಸ್ಸಿಗೆ ಶಾಕ್ ನೀಡಿದ್ದಾಳೆ. ಯಾರೀ ಸುಂದರಿ, ಆಕೆಯ ಹಿನ್ನೆಲೆಯ ಮಾಹಿತಿ ಇಲ್ಲಿದೆ ನೋಡಿ.

PREV
18

ಸಿನಿಮಾ ಹಾಗೂ ಕಿರುತೆರೆ ನಟ-ನಟಿಯರ ಜೀವನ ತೆರೆದ ಪುಟದಂತಾಗಿರುತ್ತದೆ. ಸಮಾಜದ ಮುಂದೆ ಸೆಲೆಬ್ರಿಟಿ ಎನಿಸಿಕೊಂಡವರು ವೈಯಕ್ತಿಕ ಜೀವನದ ಗುಟ್ಟುಗಳನ್ನು ಕೂಡ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ರೀತಿ ದೇಶದ ನಂ.1 ಕಿರುತೆರೆ ಧಾರಾವಾಹಿ ನಟನ ಸುಂದರ ಹೆಂಡತಿ ನನಗೆ ಹುಡ್ಗೀರು ಅಂದ್ರೆ ಇಷ್ಟ, ನಾನು ಬೈಸೆಕ್ಸುವಲ್ ಎಂದು ಹೇಳುವ ಮೂಲಕ ಗಂಡ ಹಾಗೂ ಅಭಿಮಾನಿಗಳ ಮನಸ್ಸಿಗೆ ಶಾಕ್ ನೀಡಿದ್ದಾಳೆ.

28

ಹಿಂದಿ ಕಿರುತೆರೆಯ 'ಅನುಪಮಾ' ಧಾರಾವಾಹಿಯ ಮೂಲಕ ಮನೆಮಾತಾಗಿರುವ ನಂಬರ್ 1 ಸೀರಿಯಲ್ ಹೀರೋ ಗೌರವ್ ಖನ್ನಾ (Gaurav Khanna) ಅವರ ವೈಯಕ್ತಿಕ ಜೀವನ ಈಗ ಬೀದಿಗೆ ಬಂದಿದೆ. ಅವರ ಪತ್ನಿ ಆಕಾಂಕ್ಷಾ ಚೋಮಲಾ (Akanksha Chamola) ಅವರು ರಿಯಾಲಿಟಿ ಶೋವೊಂದರಲ್ಲಿ ತಮ್ಮ ಜೀವನದ ಅತ್ಯಂತ ಸ್ಫೋಟಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. 'ನನಗೆ ಹುಡುಗಿಯರೆಂದರೆ ಇಷ್ಟ, ನಾನು ಬೈಸೆಕ್ಸುವಲ್' ಎಂದು ಹೇಳುವ ಮೂಲಕ ಆಕಾಂಕ್ಷಾ ಇಡೀ ದೇಶವೇ ಬೆರಗಾಗುವಂತೆ ಮಾಡಿದ್ದಾರೆ.

38

ರಿಯಾಲಿಟಿ ಶೋನಲ್ಲಿ ರಹಸ್ಯ ಬಯಲು:

'ಲಾಕ್ ಅಪ್: ಸಚ್ ಯಾ ಸಜಾ' (Lock Upp) ಎಂಬ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿರುವ ಆಕಾಂಕ್ಷಾ ಚೋಮಲಾ, ತಮ್ಮ ವೈಯಕ್ತಿಕ ಜೀವನದ ಮೂರು ರಹಸ್ಯಗಳನ್ನು ಬಿಟ್ಟುಕೊಡಬೇಕಾಗಿತ್ತು. ಈ ವೇಳೆ ಸಹ-ಸ್ಪರ್ಧಿ ಶ್ರೇಯಾ ಕಲ್ರಾ ಅವರು ಆಕಾಂಕ್ಷಾ ಅವರ ಬೈಸೆಕ್ಸುವಲ್ (Bisexual) ವಿಷಯವನ್ನು ಬಹಿರಂಗಪಡಿಸಿದರು. ಇದರಿಂದ ಮೊದಲು ಕಂಗಾಲಾದ ಆಕಾಂಕ್ಷಾ, ನಂತರ ಈ ಸತ್ಯವನ್ನು ಒಪ್ಪಿಕೊಂಡರು.

48

ಹುಡುಗಿಯರ ಜೊತೆ ಸಂಬಂಧವಿತ್ತು ಎಂದ ಆಕಾಂಕ್ಷಾ:

ತಮ್ಮ ಲೈಂಗಿಕ ಆಸಕ್ತಿಯ ಬಗ್ಗೆ ಮಾತನಾಡಿದ ಆಕಾಂಕ್ಷಾ, 'ನಾನು ಮದುವೆಗೆ ಮುಂಚೆ ಬೈಸೆಕ್ಸುವಲ್ ಆಗಿದ್ದೆ. ನನಗೆ ಹುಡುಗಿಯರೆಂದರೆ ತುಂಬಾ ಇಷ್ಟ. ಕೆಲವು ಹುಡುಗಿಯರ ಜೊತೆ ನಾನು ಸಂಬಂಧದಲ್ಲೂ ಇದ್ದೆ. ಅವರ ಜೊತೆ ದೈಹಿಕವಾಗಿ ಅಷ್ಟೇನೂ ಹತ್ತಿರವಾಗದಿದ್ದರೂ, ಭಾವನಾತ್ಮಕವಾಗಿ ನಾನು ಅವರ ಜೊತೆ ಇರುತ್ತಿದ್ದೆ. ಪುರುಷ ಪ್ರಧಾನ ಪ್ರಪಂಚದಲ್ಲಿ ನನಗೆ ಮಹಿಳೆಯರ ಜೊತೆ ಇರುವುದು ಸುರಕ್ಷಿತ ಎನಿಸುತ್ತದೆ. ಮಹಿಳೆಯರ ಶಕ್ತಿಯನ್ನು (Feminine Energy) ನಾನು ಪ್ರೀತಿಸುತ್ತೇನೆ' ಎಂದು ನೇರವಾಗಿ ಹೇಳಿಕೊಂಡಿದ್ದಾರೆ. ಈ ಮಾತುಗಳನ್ನು ಕೇಳಿ ವೀಕ್ಷಕರು ಮತ್ತು ಅವರ ಅಭಿಮಾನಿಗಳು ದಂಗಾಗಿದ್ದಾರೆ.

58

ಗೌರವ್ ಖನ್ನಾ ಜೊತೆ ವಿಚ್ಛೇದನ:

ಇಷ್ಟೇ ಅಲ್ಲದೆ, ಗೌರವ್ ಖನ್ನಾ ಮತ್ತು ಆಕಾಂಕ್ಷಾ ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಕಹಿ ಸತ್ಯವೂ ಬಯಲಾಗಿದೆ. ತಾವು ವಿಚ್ಛೇದನ ಪಡೆಯುತ್ತಿರುವುದಾಗಿ ಆಕಾಂಕ್ಷಾ ಘೋಷಿಸಿದ್ದಾರೆ.

68

'ನಮ್ಮಿಬ್ಬರ ಗುರಿಗಳು ಬೇರೆ ಬೇರೆಯಾಗಿವೆ. ಗೌರವ್ ಖನ್ನಾಗೆ ಮಕ್ಕಳಾಗಬೇಕು ಎಂಬ ಆಸೆ ಇದೆ. ಆದರೆ ನನಗೆ ತಾಯಿಯಾಗುವ ಯಾವುದೇ ಆಸೆ ಇಲ್ಲ. ಮದುವೆಯಾದ ಹೊಸತರಲ್ಲಿ ಈ ಬಗ್ಗೆ ಏನೂ ಅನ್ನಿಸಿರಲಿಲ್ಲ, ಆದರೆ ಈಗ ನಾನು ತಾಯ್ತನಕ್ಕೆ ಲಾಯಕ್ಕಲ್ಲ ಎನಿಸುತ್ತಿದೆ. ಗೌರವ್ ಅವರ ಆಸೆಗೆ ನಾನು ಅಡ್ಡಿಯಾಗಬಾರದು ಎಂದು ಈ ನಿರ್ಧಾರಕ್ಕೆ ಬಂದಿದ್ದೇವೆ' ಎಂದು ಭಾವುಕರಾಗಿ ನುಡಿದಿದ್ದಾರೆ.

78

ಕಣ್ಣೀರಿಟ್ಟ ನಟಿ, ಬೆಂಬಲಕ್ಕೆ ನಿಂತ ಗಂಡ:

ತಮ್ಮ ವೈಯಕ್ತಿಕ ವಿಷಯವನ್ನು ಶೋನಲ್ಲಿ ಬಯಲು ಮಾಡಿದ ಶ್ರೇಯಾ ವಿರುದ್ಧ ಆಕಾಂಕ್ಷಾ ಆಕ್ರೋಶ ಹೊರಹಾಕಿದ್ದಾರೆ. 'ನಾನು ಆಕೆಗೆ ವೈಯಕ್ತಿಕವಾಗಿ ಹೇಳಿದ ಮಾತನ್ನು ಆಕೆ ಟಿವಿಯಲ್ಲಿ ಹೇಳಿ ನನ್ನ ಮಾನ ಹರಾಜು ಹಾಕಿದ್ದಾಳೆ' ಎಂದು ಕಣ್ಣೀರಿಟ್ಟಿದ್ದಾರೆ.

88

ಆದರೆ, ಈ ಎಲ್ಲಾ ಬೆಳವಣಿಗೆಗಳ ನಡುವೆ ಪತಿ ಗೌರವ್ ಖನ್ನಾ ಮಾತ್ರ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ. 'ಆಕಾಂಕ್ಷಾ ಏನೇ ಹೇಳಿರಲಿ, ಆಕೆ ನನ್ನ ಪತ್ನಿ. ನಾನು ಯಾವಾಗಲೂ ಆಕೆಯನ್ನು ಬೆಂಬಲಿಸುತ್ತೇನೆ. ಆಕೆಗೆ ಒಳ್ಳೆಯದಾಗಲಿ' ಎಂದು ಹೇಳುವ ಮೂಲಕ ಗೌರವ್ ತಮ್ಮ ದೊಡ್ಡ ಗುಣ ಮೆರೆದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆಕಾಂಕ್ಷಾ ಅವರ ಈ 'ಬೈಸೆಕ್ಸುವಲ್' ಹೇಳಿಕೆ ಮತ್ತು ವಿಚ್ಛೇದನದ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories