‘ಮುದ್ದು ಸೊಸೆ’ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್…. ವೀಕ್ಷಕರು ಮಾತ್ರ ಸುಸ್ತು

Published : Nov 23, 2026, 05:52 PM IST

Muddhu Sose: ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವ ಮೂಲಕವೀಕ್ಷಕರೀಗೆ ಶಾಕ್ ನೀಡಿದೆ. ಅಷ್ಟಕ್ಕೂ ಸದ್ಯ ಮುದ್ದು ಸೊಸೆಯಲ್ಲಿ ಏನಾಗಿದೆ? ಧಾರಾವಾಹಿಯ ಟ್ವಿಸ್ಟ್ ನೋಡಿ ವೀಕ್ಷಕರು ಏನು ಹೇಳುತ್ತಿದ್ದಾರೆ ಇಲ್ಲಿದೆ ಮಾಹಿತಿ.

PREV
16
ಮುದ್ದು ಸೊಸೆ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ‘ಮುದ್ದು ಸೊಸೆ’. ಧಾರಾವಾಹಿಯಲ್ಲಿ ಒಂದೆ ಕಥೆ ಮತ್ತೆ ಮತ್ತೆ ರಿಪೀಟ್ ಆಗುತ್ತಿರೋದರಿಂದ ವೀಕ್ಷಕರು ಸ್ವಲ್ಪ ಗರಂ ಆಗಿದ್ದರು. ಆದರೆ ಇದೀಗ ದೊಡ್ಡದಾದ ಟ್ವಿಸ್ಟ್ ಕೊಟ್ಟು ವೀಕ್ಷಕರಿಗೆ ಶಾಕ್ ಆಗುವಂತೆ ಮಾಡಿದ್ದಾರೆ.

26
ಅಷ್ಟಕ್ಕೂ ಧಾರಾವಾಹಿಯಲ್ಲಿ ಏನಾಗಿದೆ?

ಇಲ್ಲಿವರೆಗೂ ವಿದ್ಯಾ ಮತ್ತು ಭದ್ರ ಇಬ್ಬರೂ ಒಂದಾಗೋದು, ದೂರಾಗೋದು ಎರಡೆರಡು ಬಾರಿ ನಡೆದಿದೆ. ಒಂದು ಸಲ ವಿದ್ಯಾಳನ್ನು ಸಿಕ್ಕಾಪಟ್ಟೆ ಪ್ರೀತಿ ಮಾಡುವ ಭದ್ರ, ಇನ್ನೊಂದು ಸಲ ಆಕೆಯಿಂದಲೇ ತಪ್ಪಾಗಿದೆ ಎಂದು ಆಕೆಯನ್ನೆ ದೂರ ಮಾಡಿದ್ದಾನೆ. ಈಗಷ್ಟೇ ಇಬ್ಬರ ನಡುವೆ ಎಲ್ಲಾ ಸರಿ ಹೋಗಿತ್ತು. ಇದೀಗ ಮೂರನೆ ಬಾರಿ ಇಬ್ಬರ ನಡುವೆ ಡಿವೋರ್ಸ್ ಆಗಿ ಹೋಗಿದೆ.

36
ಬೇರೆ ಮದುವೆಯಾಗಲು ರೆಡಿಯಾದ ಭದ್ರ

ಭದ್ರ ತುಂಬು ಗರ್ಭಿಣಿ ಹೆಂಡತಿಯನ್ನು ಬಿಟ್ಟು, ಆಕೆಯ ಮೇಲಿನ ಕೋಪದಿಂದ ಡಿವೋರ್ಸ್ ಕೂಡ ಕೊಟ್ಟು ಆಕೆಯ ಮೇಲೆಯೇ ಸಂಶಯ ವ್ಯಕ್ತಪಡಿಸಿ, ಬೇರೆ ಮದುವೆಯಾಗಲು ತಯಾರಿ ನಡೆಸಿದ್ದಾನೆ. ಮದುವೆ ಮಂಟಪದಲ್ಲಿ ಗಂಡು -ಹೆಣ್ಣು ಕುಳಿತು ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಧಾರಾವಾಹಿ ಹೊಸದೊಂದು ತಿರುವು ಪಡೆದುಕೊಂಡಿದೆ.

46
ವಿದ್ಯಾಗೆ ಆಕ್ಸಿಡೆಂಟ್

ಒಂದು ಕಡೆ ಭದ್ರನ ಮದುವೆ ನಡೆಯುತ್ತಿದ್ದರೆ, ಇನ್ನೊಂದೆಡೆ ವಿದ್ಯಾ ಹೋಗುತ್ತಿದ್ದ ಆಟೋರಿಕ್ಷಾಗೆ ಲಾರಿಯನ್ನು ಗುದ್ದಿಸಿ , ಕುತಂತ್ರಿಗಳು ಆಕ್ಸಿಡೆಂಟ್ ಮಾಡಿಸುವ ಮೂಲಕ ಮಗು ಸಮೇತ ವಿದ್ಯಾಳನ್ನು ಕೊಲ್ಲುವ ಸಂಚು ರೂಪಿಸಿದ್ದಾರೆ. ಆದರೆ ಅಲ್ಲಿ ಆಗಿದ್ದು ಮಾತ್ರ ಬೇರೆ.

56
ಭದ್ರನ ಕೈಯಲ್ಲಿ ಮಗು ವಿದ್ಯಾ ಗತಿ ಏನು?

ಇನ್ನೇನು ತಾಳಿ ಕಟ್ಟಬೇಕು ಎನ್ನುವಾಗ, ವಿದ್ಯಾ ಬಗ್ಗೆ ತಿಳಿದು ಮಂಟಪದಿಂದ ಓಡಿ ಬಂದು ಆಸ್ಪತ್ರೆಗೆ ಬರುತ್ತಾನೆ ಭದ್ರ. ತನ್ನ ಕರುಳ ಬಳ್ಳಿಯನ್ನು ಕೈಯನ್ನು ಹಿಡಿದು ಪತ್ನಿಯ ತ್ಯಾಗವನ್ನು ನೆನೆಯುತ್ತಾನೆ. ಆದರೆ ವಿದ್ಯಾ ಮಾತ್ರ ಕಟ್ಟು ಬಿಟ್ಟ ತಕ್ಷಣ ನಿನ್ಯಾರು ಎಂದು ಕೇಳುತ್ತಾಳೆ. ಅಂದ್ರೆ, ಆಕ್ಸಿಡೆಂಟ್ ಆಗಿ ತಲೆಗೆ ಪೆಟ್ಟು ಬಿದ್ದು ಎಲ್ಲವನ್ನೂ ಮರೆತಿದ್ದಾಳೆ ವಿದ್ಯಾ?

66
ಮುಂದಿನ ಕಥೆ ಏನು?

ಪ್ರೊಮೋ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಇನ್ನೇನು ಕಥೆ ಮುಗಿಯುತ್ತೆ ಅಂದುಕೊಂಡರೆ ನಿರ್ದೇಶಕರು ಇಂಥದೊಂದು ದೊಡ್ಡ ಟ್ವಿಸ್ಟ್ ಕೊಡುತ್ತಾರೆ ಎಂದುಕೊಂಡಿರಲಿಲ್ಲ. ಇನ್ನು ಮತ್ತೆ ವಿದ್ಯಾಗೆ ನೆನಪು ಬಂದು, ಎಲ್ಲಾ ಸರಿಯಾಗಲು ಇನ್ನೆಷ್ಟು ಸಮಯ ಬೇಕು. ವಿದ್ಯಾ ವೈದ್ಯೆ ಆಗುತ್ತಾಳೆ ಎಂದು ಕೊಂಡರೆ, ಆಕೆಯೇ ನೆನಪಿನ ಶಕ್ತಿ ಕಳೆದುಕೊಂಡು ಆಸ್ಪತ್ರೆ ಸೇರಿದ್ದಾಳೆ, ಇಷ್ಟೇನಾ ಕಥೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories