ಮನೋಜ್ ಕುಮಾರ್ ವಿರುದ್ಧ ಮಲ್ಲಮ್ಮ ಸ್ಪೋಟಕ ಹೇಳಿಕೆ; ಬಯಲಾಯ್ತು ಬ್ಯುಸಿನೆಸ್ ರಹಸ್ಯ?

Published : Nov 22, 2026, 12:00 PM IST

ಬಿಗ್‌ಬಾಸ್ ಸ್ಪರ್ಧಿ ಮಲ್ಲಮ್ಮ ಮತ್ತು ನಟ ಮನೋಜ್ ಕುಮಾರ್ ನಡುವಿನ ಇನ್‌ಸ್ಟಾಗ್ರಾಂ ಖಾತೆ ವಿವಾದದ ಅಸಲಿ ಕಾರಣ ಬಹಿರಂಗವಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಟೀಂ ಜೊತೆ ಮಲ್ಲಮ್ಮ ಮತ್ತು ಅವರ ಪುತ್ರ ಸಿದ್ದು ಎಕ್ಸ್‌ಕ್ಲೂಸಿವ್‌ ಅಗಿ ಮಾತನಾಡಿದ್ದು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

PREV
15
ಮಲ್ಲಮ್ಮ ವರ್ಸಸ್ ಮನೋಜ್ ಕುಮಾರ್

ಬಿಗ್‌ಬಾಸ್ ಶೋ ಮಾಜಿ ಸ್ಪರ್ಧಿ ಮಲ್ಲಮ್ಮ ಮತ್ತು ಕಿರುತೆರೆ ನಟ ಮನೋಜ್ ಕುಮಾರ್ ನಡುವಿನ ಮುಸುಕಿನ ಗುದ್ದಾಟಕ್ಕೆ ಕಾರಣ ಏನು ಎಂದು ಗೊತ್ತಾಗಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಟೀಂ ಜೊತೆ ಮಾತನಾಡಿರುವ ಮಲ್ಲಮ್ಮ ಮತ್ತು ಅವರ ಪುತ್ರ ಸಿದ್ದು, ಅಸಲಿಗೆ ನಡೆದಿದ್ದು ಏನು ಎಂಬುದರ ಬಗ್ಗೆ ಹೇಳಿದ್ದಾರೆ.

25
ತಮ್ಮ ವೈಯಕ್ತಿಕ ವಿಚಾರಗಳಿಗೆ ಅಕೌಂಟ್ ಬಳಕೆ

ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್ ಟೀಂ ಜೊತೆ ಮಾತನಾಡಿದ ಸಿದ್ದು, ಕಳೆದ ನಾಲ್ಕು ವರ್ಷಗಳಿಂದ ನಮ್ಮ ತಾಯಿ ಹೆಸರಿನಲ್ಲಿರುವ ಇನ್‌ಸ್ಟಾಗ್ರಾಂ ಖಾತೆ ಮನೋಜ್ ಕುಮಾರ್ ಅವರ ಬಳಿಯಲ್ಲಿದೆ. ಇತ್ತೀಚೆಗೆ ಮನೋಜ್ ಕುಮಾರ್ ಸೀರೆ ಬ್ಯುಸಿನೆಸ್ ಆರಂಭಿಸಿದ್ದಾರೆ. ತಮ್ಮ ವ್ಯವಹಾರಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ನಮ್ಮ ತಾಯಿ ಹೆಸರಿನ ಖಾತೆಯಲ್ಲಿ ಹಾಕಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

35
ಮನೋಜ್ ಲಾಗಿನ್ ಕೊಡ್ತಿಲ್ಲ

ಇತ್ತೀಚೆಗೆ ನಾನು ಊರಿಗೆ ತೆರಳಿದ್ದಾಗ ಜನರು, ಸೀರೆಯ ವಿಡಿಯೋಗಳು ಹೆಚ್ಚು ಬರುತ್ತಿವೆ ಎಂಬ ವಿಷಯವನ್ನು ನನ್ನ ಗಮನಕ್ಕೆ ತಂದರು. ಅಲ್ಲಿಯವರೆಗು ನಮಗೆ ಈ ವಿಷಯವೇ ಗೊತ್ತಿರಲಿಲ್ಲ. ನಾನು ಅಂದೇ ಮನೋಜ್ ಅವರಿಗೆ ಕಾಲ್ ಮಾಡಿ, ನನ್ನ ಮೊಬೈಲ್‌ನಲ್ಲಿ ಅಮ್ಮನ ಇನ್‌ಸ್ಟಾಗ್ರಾಂ ಖಾತೆ ಲಾಗಿನ್ ಮಾಡಿಕೊಡುವಂತೆ ಕೇಳಿದೆ. ಆದ್ರೆ ಮನೋಜ್ ಸರ್ ಲಾಗಿನ್ ಮಾಡಿಕೊಟ್ಟಿಲ್ಲ ಎಂದು ಸಿದ್ದು ಹೇಳಿದ್ದಾರೆ.

45
ಮಲ್ಲಮ್ಮ ಹೇಳಿದ್ದೇನು?

ತದನಂತರ ಮಾತನಾಡಿದ ಮಲ್ಲಮ್ಮ, ಕಾರ್ ತೊಗೊಂಡು ಆರಾಮ್ ಇದ್ದೇನೆ ಅಂತೆಲ್ಲಾ ಮನೋಜ್ ಅವರೇ ಮೊದಲು ವಿಡಿಯೋ ಹಾಕಿದ್ದು. ಬೇರೆಯವರು ಹೇಳಿದ ನಂತರವೇ ನನಗೆ ಈ ವಿಷಯ ಗೊತ್ತಾಯ್ತು. ನನ್ನ ಹೆಸರಿನಲ್ಲಿರೋ ಅಕೌಂಟ್ ಕೊಡುವಂತೆ ಮಗ ಸಿದ್ದು ಕೇಳಿದ್ದಾನೆ. ಈ ವಿಷಯವಾಗಿ ನಮ್ಮ ಮೇಡಂ ಪಲ್ಲವಿ ಅವರ ಸ್ನೇಹಿತೆ ಪ್ರಿಯಾ ಅವರು, ಒಂದೆಡೆ ಕುಳಿತು ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಹೇಳಿದ್ದಾರೆ. ಮನೋಜ್ ಅವರೊಂದಿಗೆ ಮಾತನಾಡುವೆ ಎಂದು ಮಲ್ಲಮ್ಮ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: BBK 12: ಮಲ್ಲಮ್ಮ ಅವರ ಮೇಡಂ ಪ್ರಿಯಾಂಕಾ ವಿರುದ್ಧ ಗಂಭೀರ ಆರೋಪ: ರಿವೀಲ್ ಆಯ್ತು ಸಂಭಾವನೆ

55
ಮಲ್ಲಮ್ಮ ಆರೋಪ ಏನು?

ಇತ್ತೀಚೆಗೆ ವಿಡಿಯೋವೊಂದರಲ್ಲಿ ಇನ್‌ಸ್ಟಾಗ್ರಾಂ ಖಾತೆಯಿಂದ ತಮಗೆ ಯಾವುದೇ ಹಣ ಬರುತ್ತಿಲ್ಲ. ಕೊಲ್ಯಾಬ್ರೇಟ್ ಮಾಡಿಕೊಂಡಿದ್ದು ಸಹ ನನಗೆ ಗೊತ್ತಿಲ್ಲ. ಮನೋಜ್ ಅವರ ಬಳಿಯಲ್ಲಿಯೇ ಇಲ್ಲವೂ ಇದೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಈ ಹೇಳಿಕೆ ಬೆನ್ನಲ್ಲೇ ನಟ ಮನೋಜ್ ಸಹ, ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಬರೆದುಕೊಳ್ಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: Bigg Boss ರಕ್ಷಿತಾ ಶೆಟ್ಟಿ ಮದ್ವೆ Bhargavi LLb ನಾಯಕನ ಜೊತೆ! ಮಲ್ಲಮ್ಮ ಕೊಟ್ಟ ಶಾಕ್​ ಏನು ಕೇಳಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories