Jaanu And Psycho Jayant: ಸೈಕೋ ಗಂಡನಿಂದ ಪಾರಾಗಿ ಹೊಸ ಬದುಕು ಶುರು ಮಾಡಿಕೊಂಡಿರುವ ಜಾನುಗೆ ಮತ್ತೆ ಜಯಂತ್ ಕಾಟ ಶುರುವಾಗಿದೆ. ಜಯಂತ್ ಧ್ವನಿ ಗುರುತಿಸಿದ ಜಾನು ಭಯಭೀತಳಾಗಿದ್ದಾಳೆ. ಜಯಂತ್ ಮತ್ತು ಜಾನುವಿನ ನಡುವಿನ ರಹಸ್ಯವನ್ನು ತನು ಬಯಲು ಮಾಡುವಳೇ?
ಸೈಕೋ ಗಂಡ ಜಯಂತ್ ವರ್ತನೆಯಿಂದ ನೊಂದ ಜಾನು ಸಮುದ್ರಕ್ಕೆ ಜಿಗಿದಿದ್ದಳು. ನಿರ್ದೇಶಕರ ಕೃಪೆಯಿಂದ ಬದುಕಿ ಬಂದು ವಿಶ್ವನ ಮನೆಯಲ್ಲಿಯೇ ಜಾನು ಆಶ್ರಯ ಪಡೆದುಕೊಂಡಿದ್ದಳು. ಚಂದನ ಎಂದು ಹೆಸರು ಬದಲಿಸಿಕೊಂಡಿರುವ ಜಾನು ಹೊಸ ಬದುಕನ್ನ ಕಟ್ಟಿಕೊಂಡಿದ್ದಾಳೆ. ಆದ್ರೆ ಇಲ್ಲಿಯೂ ಜಯಂತ್‌ನ ನೆರಳು ಜಾಹ್ನವಿಯನ್ನು ಹಿಂಬಾಲಿಸುತ್ತಿದೆ.
26
ಜಯಂತ್ ಮತ್ತು ನರಸಿಂಹ ಜೊತೆಯಾಗಿ ಪ್ರಾಜೆಕ್ಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನರಸಿಂಹನ ಮನೆಗೆ ಜಯಂತ್ ಹೋಗುವಿಕೆ ಮತ್ತು ಬರುವಿಕೆ ಆಗುತ್ತಿದೆ. ಜಾನು ಮಾಡಿಕೊಟ್ಟ ಟೀಯಿಂದಲೇ ಅದು ತನ್ನ ಪತ್ನಿಯ ಕೈರುಚಿ ಎಂದು ಜಯಂತ್ ಕಂಡು ಹಿಡಿದಿದ್ದನು. ಇದೀಗ ಜಾನು ಧ್ವನಿ ಜಯಂತ್ ಕಿವಿಗೆ ಬಿದ್ದಿದೆ.
36
ಹೌದು, ನರಸಿಂಹನ ಮನೆಗೆ ಜಯಂತ್ ಕರೆ ಮಾಡಿದ್ದನು. ಕರೆ ಸ್ವೀಕರಿಸಿದ ಜಾನು, ಹಲೋ ಯಾರು ಎಂದು ಕೇಳುತ್ತಲೇ ಆ ಕಡೆಯಿಂದ 'ಚಿನ್ನುಮರಿ' ಎಂದು ಕೇಳಿಸಿದೆ. ಇದು ತನ್ನ ಗಂಡ ಜಯಂತ್ ಧ್ವನಿ ಎಂದು ಗೊತ್ತಾಗುತ್ತಲೇ ಕಾಲ್ ಕಟ್ ಮಾಡಿದ್ದಾಳೆ. ಮತ್ತೆ ಫೋನ್ ರಿಂಗ್ ಆದ್ರೂ ಜಾನು ಕರೆ ಸ್ವೀಕರಿಸಿಲ್ಲ
ಫೋನ್ ಬಳಿಯಲ್ಲಿಯೇ ಇದ್ರೂ ಜಾನು ಕಾಲ್ ರಿಸೀವ್ ಮಾಡದಿರೋದು ತನುಗೆ ಅನುಮಾನ ಮೂಡಿಸಿದೆ. ಕೊನೆಗೆ ಕಾಲ್ ರಿಸೀವ್ ಮಾಡಿ ಜಯಂತ್ ಜೊತೆ ತನು ಮಾತನಾಡಿದ್ದಾಳೆ. ಮಾವ ನರಸಿಂಹ ಮನೆಯಲ್ಲಿಲ್ಲ. ಬಂದ್ಮೇಲೆ ನೀವು ಫೋನ್ ಮಾಡಿರುವ ವಿಷಯವನ್ನು ಹೇಳುತ್ತೇನೆ ಎಂದಿದ್ದಾಳೆ.
56
ಕಾಲ್ ರಿಸೀವ್ ಮಾಡಲಿಲ್ಲ ಯಾಕೆ ಎಂದು ಕೇಳಿದಾಗ ಜಾನು, ಏನೇನು ಸುಳ್ಳು ಹೇಳಿದ್ದಾಳೆ. ಅನುಮಾನಗೊಂಡು ಜಯಂತ್ ನಿಮಗೆ ಮೊದಲೇ ಪರಿಚಯನಾ ಎಂದು ತನು ಪ್ರಶ್ನೆ ಮಾಡಿದ್ದಾಳೆ. ನನಗೆ ಜಯಂತ್ ಪರಿಚಯವಿಲ್ಲ ಎಂದು ಹೇಳಿದ ಜಾನು ಅಡುಗೆಮನೆ ಸೇರಿದ್ದಾಳೆ.
66
ಜಯಂತ್ ಬಗ್ಗೆ ಮಾತನಾಡಿದ ಕೂಡಲೇ ಜಾನು ಭಯಪಡೋದು ಯಾಕೆ? ಇದರ ಹಿಂದಿರುವ ವಿಷಯ ಏನು ಅಂತ ಕಂಡು ಹಿಡಿಯುತ್ತೇನೆ ಎಂದು ತನು ಡಿಸೈಡ್ ಮಾಡಿದ್ದಾಳೆ. ಜಯಂತ್ ಮತ್ತು ಜಾನು ರಹಸ್ಯ ತನು ಮೂಲಕವೇ ಬಯಲಾಗಲಿದೆಯಾ ಎಂಬ ಪ್ರಶ್ನೆ ಮೂಡಿದೆ.