Aishwarya Shindogi: ವಿರೋಧಿಗಳು ಬೆನ್ನ ಹಿಂದೆ ಮಾತಾಡಿದ್ರು, ತಿವಿದ್ರೂ ಜಗ್ಗದೆ ಕೊನೆಗೂ ಗುರಿ ತಲುಪಿದ ಐಶ್ವರ್ಯಾ ಶಿಂದೋಗಿ!

Published : May 20, 2025, 12:49 PM ISTUpdated : May 20, 2025, 01:42 PM IST

ಕನ್ನಡದಲ್ಲಿ ʼನಾಗಿಣಿʼ, ʼನಿಮ್ಮ ಲಚ್ಚಿʼ ಧಾರಾವಾಹಿಯಲ್ಲಿ ನಟಿಸಿದ್ದ ಐಶ್ವರ್ಯಾ ಶಿಂದೋಗಿ ಅವರು ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಶೋನಲ್ಲಿ ಕೂಡ ಭಾಗವಹಿಸಿದ್ದರು. ಈಗ ಅವರು ತಮ್ಮ ಕನಸಿನ ಕಾರ್‌ ಖರೀದಿ ಮಾಡಿದ್ದಾರೆ.    

PREV
15
Aishwarya Shindogi: ವಿರೋಧಿಗಳು ಬೆನ್ನ ಹಿಂದೆ ಮಾತಾಡಿದ್ರು, ತಿವಿದ್ರೂ ಜಗ್ಗದೆ ಕೊನೆಗೂ ಗುರಿ ತಲುಪಿದ ಐಶ್ವರ್ಯಾ ಶಿಂದೋಗಿ!

"ಒಂದು ದಿನ ನಾನು ನನ್ನ ತಂದೆಯ ಕಾರನ್ನು ತುಂಬಾ ಭಾರವಾದ ಮನಸ್ಸಿನಿಂದ, ಕಣ್ಣೀರು ಹಾಕುತ್ತ ಮಾರಾಟ ಮಾಡಿದೆ. ಆ ದಿನವೇ ನಾನು ಏನೇ ಆಗಲಿ, ಒಂದು ದಿನ ನಾನು ನನ್ನ ಸ್ವಂತ ಶ್ರಮದಿಂದ ಕಾರು ಖರೀದಿಸುವೆ ಎಂದು ನನಗೆ ನಾನೇ ಸವಾಲು ಹಾಕಿಕೊಂಡಿದ್ದೆ. 15.5.2025 ದಿನವೇ ಕಾರ್‌ ತಗೊಂಡೆ" ಎಂದು ನಟಿ ಐಶ್ವರ್ಯ ಶಿಂದೋಗಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. 

25

"ನನ್ನ ಕಠಿಣ ಪರಿಶ್ರಮ ಹಾಕಿ, ಬೆವರು, ರಕ್ತ ಸುರಿಸಿ ಕಣ್ಣೀರು ಹಾಕಿದ್ದೇನೆ. ನನ್ನ ಮೇಲೆ ಜಡ್ಜ್‌ಮೆಂಟ್‌ ಮಾಡಲಾಗಿತ್ತು. ಎಲ್ಲ ಗಾಯಗಳನ್ನು ಸಹಿಸಿಕೊಂಡೆ, ನನ್ನ ಹಿಂದೆ ಚಾಕು ತಿವಿದವರಿದ್ದಾರೆ, ನನ್ನ ವಿರೋಧಿಗಳಿದ್ದಾರೆ. ಇದರಿಂದಲೇ ನಾನು ಸಾಧನೆ ಮಾಡಿದೆ" ಎಂದು ಹೇಳಿದ್ದಾರೆ. 

35

"ಅತ್ಯಂತ ಮುಖ್ಯವಾಗಿ, ನನ್ನ ತಂದೆ-ತಾಯಿಯ ಆಶೀರ್ವಾದ, ದೇವರ ಕೃಪೆ, ಹಿತೈಷಿಗಳ ಶುಭಾಶಯ, ಒಳ್ಳೆಯ ಒಡನಾಟವು ನನ್ನ ಈ ಸಾಧನೆಗೆ ಶಕ್ತಿ ತುಂಬಿತು. ನಂಬಿರಿ, ಇದು ಸುಲಭದ ನಿರ್ಧಾರವಾಗಿರಲಿಲ್ಲ. ಹಲವಾರು ರಾತ್ರಿಗಳ ಕಾಲ ನಿದ್ದೆಯಿಲ್ಲದೆ ಕಳೆದೆ, ಖರ್ಚುಗಳನ್ನು ಕಡಿಮೆ ಮಾಡಿಕೊಂಡೆ" ಎಂದು ಹೇಳಿದ್ದಾರೆ. 

45

"ಇನ್ನು ತುಂಬಾ ಧೈರ್ಯವೂ ಬೇಕಿತ್ತು. ನಾನು MG ಕಾರ್‌ ಓಡಿಸಿದ ಕ್ಷಣ, ಅದು ನಾನು ಬಯಸಿದ್ದೆಲ್ಲವೂ ಆಗಿತ್ತು. ಈ ಕಾರು ನನ್ನ ಹೃದಯವನ್ನು ಗೆದ್ದಿದೆ. ಈಗ ನಾನು ಜವಾಬ್ದಾರಿಯುತ ವಯಸ್ಕನಂತೆ ಅನಿಸುತ್ತಿದೆ. ನನ್ನ ಈ ಕಾರ್‌ಗೆ ಸ್ನೋವೈಟ್ ಎಂದು ಹೆಸರಿಟ್ಟಿದ್ದೇನೆ. ನನ್ನ ಸ್ನೇಹಿತರಾದ ಶಿಶಿರ್‌ ಶಾಸ್ತ್ರೀ, ಮೋಕ್ಷಿತಾ ಪೈ ಮುಂತಾದವರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ. 

55

ನಟಿ ಐಶ್ವರ್ಯ ಶಿಂದೋಗಿ ಅವರು ಬಿಗ್‌ ಬಾಸ್‌ ಶೋನಲ್ಲಿ ಭಾಗವಹಿಸಿದ ಬಳಿಕ ಶಿಶಿರ್‌ ಶಾಸ್ತ್ರೀ, ಮೋಕ್ಷಿತಾ ಪೈ ಜೊತೆಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಈ ಮೂವರು ಸಾಕಷ್ಟು ದೇವಸ್ಥಾನಗಳು, ಕಾರ್ಯಕ್ರಮಗಳಿಗೂ ಒಟ್ಟಿಗೆ ಹೋಗಿದ್ದರು. 

Read more Photos on
click me!

Recommended Stories