Lakshmi Nivasa: ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಾನು ಮತ್ತು ಜಯಂತ್ ಮುಖಾಮುಖಿಯಾಗುವ ಸಾಧ್ಯತೆ ಇದೆ. ಜಯಂತ್ ಜಾನುವನ್ನು ಹುಡುಕುತ್ತಿದ್ದು, ವಿಶ್ವನಿಗಿಂತ ಮೊದಲು ಅವರಿಬ್ಬರ ಭೇಟಿ ಆಗಬಹುದೆಂಬ ಆತಂಕ ವೀಕ್ಷಕರಲ್ಲಿದೆ.
ಲಕ್ಷ್ಮೀ ನಿವಾಸ ಸೀರಿಯಲ್‌ನ ವೀಕ್ಷಕರು ಕೆಲವು ದಿನಗಳಿಂದ ವಿಶ್ವ ಮತ್ತು ಜಾನು ಯಾವಾಗ ಮುಖಾಮುಖಿ ಆಗುತ್ತಾರೆ ಎಂದು ಕಾಯುತ್ತಿದ್ದಾರೆ. ವಿಶ್ವನಿಗೂ ಮೊದಲು ಜಾನು ಮತ್ತು ಜಯಂತ್ ಮುಖಾಮುಖಿ ಆಗ್ತಾರಾ ಅನ್ನೋ ಆತಂಕ ವೀಕ್ಷಕರಲ್ಲಿ ಶುರುವಾಗಿದೆ.
25
ವಿಶ್ವನ ತಂದೆ ನರಸಿಂಹ, ಜಾನು ಮುಂದೆ ಜಯಂತ್ ಗುಣಗಾನ ಮಾಡಿದರು. ಪತ್ನಿ ಹೆಸರಿನಲ್ಲಿ ಈ ಪ್ರಾಜೆಕ್ಟ್ ಶುರು ಮಾಡಿದ್ದಾರೆ. ಆ ಹುಡುಗಿಗೆ ಜಯಂತ್ ಜೊತೆ ಬದುಕುವ ಅದೃಷ್ಟ ಇಲ್ಲ. ಇನ್ಮುಂದೆ ಕೆಲಸದ ನಿಮಿತ್ ಜಯಂತ್ ಪ್ರತಿದಿನ ಮನೆಗೆ ಬರಬಹುದು. ನಾಲ್ಕೈದು ದಿನ ನಮ್ಮ ಮನೆಯಲ್ಲಿಯೇ ಉಳಿದುಕೊಳ್ಳಬಹುದು ಎಂದು ಹೇಳಿದ್ದಾರೆ.
35
ನರಸಿಂಹನ ಮಾತು ಕೇಳಿ ಜಾನು ಸಂಪೂರ್ಣವಾಗಿ ಶಾಕ್ ಆಗಿದ್ದಾಳೆ. ಜಯಂತ್ ಕಣ್ಣಿಗೆ ಕಾಣಿಸಿಕೊಳ್ಳದಂತೆ ಈ ಮನೆಯಲ್ಲಿ ಹೇಗಿರಬೇಕು ಎಂದು ಜಾನು ತುಂಬಾನೇ ಯೋಚಿಸುತ್ತಿದ್ದಾಳೆ. ಜಯಂತ್ ಬಂದ ಸಂದರ್ಭದಲ್ಲಿ ಎಚ್ಚರಿಕೆಯಿಂದಿರಬೇಕು ಜಾನು ಯೋಚಿಸಿದ್ದಾಳೆ. ಮತ್ತೊಂದೆಡೆ ವಿಶ್ವ ಮತ್ತು ಜಾನು ಇಬ್ಬರನ್ನು ಭೇಟಿ ಮಾಡಿಸಲು ತನು ಮುಂದಾಗಿದ್ದಾಳೆ.
ತನ್ನ ಹೆಂಡತಿ ಚಿನ್ನುಮರಿ ಜಾನು ಬದುಕಿರೋದು ಜಯಂತ್‌ಗೆ ಕನ್ಫರ್ಮ್ ಆಗಿದೆ. ಹಾಗಾಗಿ ಖಾಸಗಿ ಗೂಢಚಾರರನ್ನು ಮೂಲಕ ಜಾಹ್ನವಿಯನ್ನು ಹುಡುಕಿಸುತ್ತಿದ್ದಾನೆ. ಇದಕ್ಕಾಗಿ ಹಣ ಸಹ ಖರ್ಚು ಮಾಡುತ್ತಿದ್ದಾನೆ. ವಿಶ್ವನಿಗಿಂತ ಮೊದಲೇ ಜಯಂತ್ ಮತ್ತು ಜಾನು ಮುಖಾಮುಖಿಯಾದ್ರೆ ಹೇಗೆ ಎಂದು ವೀಕ್ಷಕರು ಆತಂಕಕ್ಕೊಳಗಾಗಿದ್ದಾರೆ.
55
ತಾಯಿ ಲಲಿತಾ ಮುಂದೆ ಗೆಳತಿ ಜಾನು ಬಗ್ಗೆ ಕೆಲವು ವಿಷಯಗಳನ್ನು ಹೇಳಿಕೊಂಡಿದ್ದನು. ಇತ್ತ ಜಾನು ಸಹ ಲಲಿತಾ ಮುಂದೆ ಆಪ್ತ ಗೆಳೆಯ ವಿಶ್ವನ ಬಗ್ಗೆ ಹೇಳಿಕೊಂಡಿದ್ದಳು. ಇಬ್ಬರ ಮಾತುಗಳನ್ನು ಕೇಳಿದ ಲಲಿತಾಗೆ ಒಂದು ಕ್ಷಣ ಅನುಮಾನ ಬಂದಿತ್ತು. ಆದ್ರೆ ಜಾನು ಬೇರೆ ಊರಿನವಳು ಇಲ್ಲಿ ಹೇಗೆ ಓದಲು ಸಾಧ್ಯ ಎಂದು ಅಂದ್ಕೊಂಡಿದ್ದಾಳೆ. ಶೀಘ್ರದಲ್ಲಿಯೇ ವಿಶ್ವ ಮತ್ತು ಜಾನು ಮುಖಾಮಖಿಯಾಗ್ತಾರೆ ಎಂದು ತಿಳಿದು ಬಂದಿದೆ.