Lakshmi Nivasa: ಜಯಂತ್​ ತೋಡಿದ ಹಳ್ಳಕ್ಕೆ ಬಿದ್ದಾಯ್ತು ವಿಶ್ವ, ತಪ್ಪಿಸಿಕೊಳ್ಳೋ ಛಾನ್ಸೇ ಇಲ್ಲ! ಗೂಬೆ ಕಥೆ ಫಿನಿಷ್​

Published : Oct 28, 2025, 01:25 PM IST

ಲಕ್ಷ್ಮೀನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯವನ್ನು ಜಯಂತ್ ಪತ್ತೆಹಚ್ಚಿದ್ದಾನೆ. ಜಾಹ್ನವಿಗೆ ಸಹಾಯ ಮಾಡುತ್ತಿರುವ ವಿಶ್ವನನ್ನು ಬಲೆಗೆ ಬೀಳಿಸಲು ಶ್ರದ್ಧಾಂಜಲಿ ನಾಟಕವಾಡಿ, ತಾನೇ 'ಗೂಬೆ' ಎಂದು ಬಾಯಿಬಿಡಿಸಿದ್ದಾನೆ. ಸೈಕೋ ಜಯಂತ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ ವಿಶ್ವ. ಮುಂದೇನು? 

PREV
17
ಭಾರಿ ಕುತೂಹಲದ ಘಟ್ಟ

ಲಕ್ಷ್ಮೀನಿವಾಸ (Lakshmi Nivasa) ಸೀರಿಯಲ್​ ಇದೀಗ ಭಾರಿ ಕುತೂಹಲ ಘಟ್ಟವನ್ನು ತಲುಪಿದೆ. ಇದಾಗಲೇ ಜಯಂತ್​ಗೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದಿದೆ. ಆಕೆಗೆ ವಿಶ್ವನೇ ಸಪೋರ್ಟ್​ ಮಾಡ್ತಿದ್ದಾನೆ ಎನ್ನುವ ವಿಷಯವೂ ತಿಳಿದಿದೆ. ಹೇಳಿಕೇಳಿ ಆತ ಸೈಕೋ. ಇನ್ನು ಕೇಳಬೇಕೆ?

27
ವಿಶ್ವನಿಗೆ ಹಳ್ಳತೋಡಿದ ಸೈಕೋ

ವಿಶ್ವನಿಗೆ ಹಳ್ಳತೋಡಿ, ಆತನ ಬಾಯಿ ಬಿಡಿಸಲು ಭಾರಿ ಪ್ಲ್ಯಾನ್​ ಮಾಡಿದ್ದ ಜಯಂತ್​. ಇದಕ್ಕೆ ಕಾರಣ, ಜಾಹ್ನವಿಯ ಬಳೆ ಸಿಗುತ್ತಿದ್ದಂತೆಯೇ ಆಕೆ ತನಗೆ ಮೋಸ ಮಾಡ್ತಿರೋ ವಿಷಯ ಜಯಂತ್​ಗೆ ತಿಳಿದಿದೆ. ತನ್ನ ಮನೆಗೆ ಬಂದರೂ ಆಕೆ ತಪ್ಪಿಸಿಕೊಂಡು ತಿರುಗಾಡ್ತಿರೋದು ಕನ್​ಫರ್ಮ್​ ಆಗಿದೆ.

37
ಸತ್ಯ ತಿಳಿದ ಜಯಂತ್​

ತನಗೇ ಭ್ರಮೆಯಾಗುತ್ತಿದೆ ಎಂದು ಸಾಬೀತು ಮಾಡಲು ಎಲ್ಲರೂ ಸೇರಿ ನಾಟಕ ಮಾಡ್ತಿರೋ ಅಸಲಿಯತ್ತೂ ಜಯಂತ್​ಗೆ ತಿಳಿದಿದೆ. ಇದಕ್ಕಾಗಿಯೇ ಆತ ಪತ್ನಿಯ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಿ ಅದಕ್ಕೆ ವಿಶ್ವನನ್ನು ಮಾತ್ರ ಕರೆದಿದ್ದಾನೆ. ಇದರ ಅರಿವು ಇಲ್ಲದ ವಿಶ್ವ ಕಾರ್ಯಕ್ರಮಕ್ಕೆ ಹೋಗಿದ್ದಾನೆ.

47
ಗೂಬೆ ಬಗ್ಗೆ ಪ್ರಶ್ನೆ

ಅಲ್ಲಿ ಯಾರೂ ಬಾರದೇ ಇರುವುದು ನೋಡಿ ವಿಶ್ವನಿಗೆ ಡೌಟ್​ ಬಂದಿದೆ. ಆದರೆ ಎಲ್ಲರೂ ಬರ್ತಾರೆ ಇರು ಎನ್ನುತ್ತಲೇ ಜಯಂತ್​ ಜಾಹ್ನವಿಯ ಬಗ್ಗೆ ತನ್ನ ಪ್ರೀತಿ ಹೇಳಿಕೊಂಡಿದ್ದಾನೆ. ಕೊನೆಗೆ, ಜಾಹ್ನವಿ ಕಾಲೇಜಿನಲ್ಲಿ ಇರುವಾಗ ಗೂಬೆ ಎನ್ನುವವನ ಸ್ನೇಹ ಮಾಡಿದ್ದಳಂತೆ ಗೊತ್ತಾ ಕೇಳಿದ್ದಾನೆ.

57
ಗೂಬೆ ವಿಷ್ಯ ಬಹಿರಂಗ

ಇದನ್ನು ಕೇಳಿ ವಿಶ್ವನಿಗೆ ಶಾಕ್​ ಆಗಿದೆ. ನನಗೆ ಗೊತ್ತಿಲ್ಲ ಎಂದಿದ್ದಾನೆ. ಆಗ ವಿಶ್ವ ನೀನೇ ಗೂಬೆ ಎಂದು ಹೇಳಿ ತನ್ನ ಸೈಕೋ ಬುದ್ಧಿ ತೋರಿದ್ದಾನೆ. ಅಲ್ಲಿಗೆ ವಿಶ್ವ ಎಲ್ಲಾ ಕಡೆಯಿಂದಲೂ ಟ್ರ್ಯಾಪ್​ ಆಗಿ ಹೋಗಿದ್ದಾನೆ.

67
ಸೈಕೋ ಕೈಗೆ ವಿಶ್ವ

ಸೈಕೋ ಜಯಂತ್​ ಕೈಯಲ್ಲಿ ಸಿಕ್ಕಿಬಿದ್ದಾಗಿದೆ. ಹಳ್ಳಕ್ಕೆ ಬಿದ್ದ ಮೇಲೆ ಸೈಕೋ ಇನ್ನೇನು ಮಾಡ್ತಾನೋ ಗೊತ್ತಿಲ್ಲ. ಇದಾಗಲೇ ಪತ್ನಿಗಾಗಿ ಕೆಲವರನ್ನು ಮುಗಿಸಲೂ ಹಿಂಜರಿಯದ ಜಯಂತ್​ ವಿಶ್ವನನ್ನೂ ಮುಗಿಸ್ತಾನಾ ಎನ್ನುವ ಸಂದೇಹ ಕಾಡತೊಡಗಿದೆ.

77
ವೀಕ್ಷಕರಿಗೂ ಕನ್​ಫ್ಯೂಸ್​

ಮುಂದೇನಾಗುತ್ತೆ ಎನ್ನುವುದು ಇನ್ನಷ್ಟೇ ನೋಡಬೇಕಿದೆ. ಜಯಂತ್​ನ ಕಣ್ಣೀರು ನೋಡಿ ಜಾಹ್ನವಿ ಮತ್ತು ಆತ ಬೇಗ ಒಂದಾಗಲಿ ಎಂದು ವೀಕ್ಷಕರು ಒಮ್ಮೆ ಅಂದರೆ, ಅವನ ಸೈಕೋ ಬುದ್ಧಿ ನೋಡಿ ಚಿನ್ನುಮರಿ ಸಿಗುವುದು ಬೇಡ ಅಂತಿದ್ದಾರೆ. ಒಟ್ಟಿನಲ್ಲಿ ಅವರಿಬ್ಬರೂ ಒಂದಾಗಬೇಕೋ, ಬೇಡವೋ ಎನ್ನೋದೇ ಕನ್​ಫ್ಯೂಸ್​.

ಪ್ರೊಮೋಗಾಗಿ ಇಲ್ಲಿ ಕ್ಲಿಕ್​ ಮಾಡಿ

Read more Photos on
click me!

Recommended Stories