Bigg Boss Kannada: ಈ ಫೋಟೋದಲ್ಲಿರುವ ಬಿಗ್‌ಬಾಸ್ ಕನ್ನಡದ ಸ್ಪರ್ಧಿ ಯಾರು ಅಂತ ಗೊತ್ತಾಯ್ತಾ?

Published : Oct 28, 2025, 07:08 AM IST

Childhood Photo: ಬಿಗ್‌ಬಾಸ್ ಮಾಜಿ ಸ್ಪರ್ಧಿಯೊಬ್ಬರ ಬಾಲ್ಯದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈಕಲ್ ಮೇಲೆ ಅಣ್ಣನೊಂದಿಗೆ ಕುಳಿತಿರುವ ಈ ಬಾಲಕ ಯಾರು ಗೊತ್ತಾ? ಅಣ್ಣದ ಬರ್ತ್ ಡೇ ಗಾಗಿ ಈ ಫೋಟೋ ಶೇರ್ ಮಾಡಿಕೊಂಡಿದ್ದರು .

PREV
15
ಬಿಗ್‌ಬಾಸ್ ಸ್ಪರ್ಧಿಯ ಬಾಲ್ಯದ ಫೋಟೋ

ಕನ್ನಡದ ಬಿಗ್‌ಬಾಸ್ ಸೀಸನ್ 12ನೇ ಅಬ್ಬರದಿಂದ ಪ್ರಸಾರವಾಗುತ್ತಿದೆ. ಇಷ್ಟು ದಿನ ಜಗಳ ಮತ್ತು ಗಲಾಟೆಯಿಂದ ತುಂಬಿದ ಮನೆಯಲ್ಲಿ ಇದೀಗ ಪ್ರೀತಿಯ ಹೂ ಅರಳಿದೆ. ಸಾಮಾನ್ಯವಾಗಿ ಬಿಗ್‌ಬಾಸ್ ಆರಂಭವಾಗುತ್ತಿದ್ದಂತೆ ಈ ಹಿಂದಿನ ಸೀಸನ್‌ಗಳ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಬಿಗ್‌ಬಾಸ್‌ನ ಮಾಜಿ ಸ್ಪರ್ಧಿಯೊಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

25
ಅಣ್ಣನೊಂದಿಗೆ ಕುಳಿತ ಸೈಕಲ್ ಮೇಲೆ ಕುಳಿತ ಬಿಗ್‌ಬಾಸ್ ಸ್ಪರ್ಧಿ

ಪುಟಾಣಿ ಸೈಕಲ್ ಮೇಲೆ ಅಣ್ಣನೊಂದಿಗೆ ಕುಳಿತಿದ್ದ ಫೋಟೋವನ್ನು ಬಿಗ್‌ಬಾಸ್ ಸ್ಪರ್ಧಿ ಹಂಚಿಕೊಂಡಿದ್ದಾರೆ. ಸೋದರ ಪ್ರಶಾಂತ್ ಬರ್ತ್ ಡೇ ಹಿನ್ನೆಲೆಯಲ್ಲಿ ಸುಂದರ ಮತ್ತು ಮುದ್ದಾದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ 25ನೇ ಏಪ್ರಿಲ್ 2024ರಂದು ಶೇರ್ ಮಾಡಿಕೊಂಡಿದ್ದರು. ನನ್ನ ಸವಾರಿ ಮೇಲೆ ನಂಬಿಕೆ ಇರಿಸಿದ್ದ ಮೊದಲ ವ್ಯಕ್ತಿ ಎಂಬ ಸುಂದರ ಸಾಲುಗಳನ್ನು ಸಹ ಬರೆದುಕೊಂಡಿದ್ದರು. ಹಾಗಾದ್ರೆ ಈ ಫೋಟೋದಲ್ಲಿರುವ ಬಿಗ್‌ಬಾಸ್ ಸ್ಪರ್ಧಿ ಯಾರು ಎಂದು ಗೊತ್ತಾಯ್ತಾ? ಈ ಪ್ರಶ್ನೆಗೆ ಉತ್ತರ ಕೆಳಗಿನ ಫೋಟೋದಲ್ಲಿದೆ.

35
ಯಾರು ಈ ಬಿಗ್‌ಬಾಸ್ ಸ್ಪರ್ಧಿ?

ಈ ಫೋಟೋದಲ್ಲಿರುವ ಬಾಲಕ ಮೋಟಾರ್ ರೇಸರ್ ಅರವಿಂದ್ ಕೆ.ಪಿ. ಅಣ್ಣನ ಬರ್ತ್ ಡೇ ಪ್ರಯುಕ್ತ ಬಾಲ್ಯದ ಫೋಟೋವೊಂದನ್ನು ಎಲ್ಲರೊಂದಿಗೆ ಅರವಿಂದ್ ಶೇರ್ ಮಾಡಿಕೊಂಡಿದ್ದರು. ನನ್ನನ್ನು ಸವಾರಿಯನ್ನು ನಂಬಿದ ಮೊದಲ ವ್ಯಕ್ತಿ. ಮುಂದೆ ಇದೇ ರೀತಿಯಲ್ಲಿಯೇ ನಮ್ಮ ಸವಾರಿ ಮುಂದುವರಿಯಲಿದೆ. ನನಗೆ ಸೋದರನಾಗಿ ಸಿಕ್ಕಿದ್ದಕ್ಕೆ ಧನ್ಯವಾದಗಳು. ಹುಟ್ಟುಹಬ್ಬದ ಶುಭಾಶಯಗಳು ಅಣ್ಣ. ಒಳ್ಳೆಯದಾಗಲು. ದೇವರ ಆಶೀರ್ವಾದ ನಿನ್ನ ಮೇಲಿರಲಿ ಎಂದು ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದರು.

ಇದನ್ನೂ ಓದಿ: ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್

45
ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿ

ಅರವಿಂದ್ ಕೆ.ಪಿ. (ಕಡಿಯಾಲಿ ಪ್ರಭಾಕರ್) ಭಾರತೀಯ ವೃತ್ತಿಪರ ಮೋಟಾರ್ ರೇಸರ್ ಆಗಿ ಗುರುತಿಸಿಕೊಂಡಿದ್ದಾರೆ. ಸಿಎಸ್ ಸಂತೋಷ್ ನಂತರ ಡಕಾರ್ ರ್ಯಾಲಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎರಡನೇ ಭಾರತೀಯರಾಗಿದ್ದಾರೆ. ಕನ್ನಡದ ಬಿಗ್‌ಬಾಸ್ ಸೀಸನ್ 8ರ ಮೊದಲ ರನ್ನರ್ ಆಗಿದ್ದರು. ತಮ್ಮ ಸೌಮ್ಯ ಸ್ವಭಾವ ಮತ್ತು ಜಾಣತನದ ಆಟದಿಂದ ಎಲ್ಲರ ಗಮನ ಸೆಳೆದಿದ್ದರು.

55
ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ.

ಸೀಸನ್ 8ರಲ್ಲಿ ನಟಿ ದಿವ್ಯಾ ಉರುಡುಗ ಜೊತೆಯಲ್ಲಿಯೇ ಅರವಿಂದ್ ಅತ್ಯಧಿಕವಾಗಿ ಕಾಣಿಸಿಕೊಂಡಿದ್ದರು. ಪ್ರೇಮಪಕ್ಷಿಗಳ ರೀತಿ ಬಿಗ್‌ಬಾಸ್ ಮನೆಯಲ್ಲಿ ದಿವ್ಯಾ ಮತ್ತು ಅರವಿಂದ್ ವಿಹರಿಸಿದ್ದರು. ನಿಜ ಜೀವನದಲ್ಲಿಯೂ ಇಬ್ಬರು ಒಂದಾಗಲಿ ಎಂದು ವೀಕ್ಷಕರು ಹಾರೈಸಿದ್ದರು. ಆದ್ರೆ ಇದುವರೆಗೂ ತಮ್ಮ ಪ್ರೀತಿಯನ್ನು ಹೇಳಿಕೊಳ್ಳದ ಇವರು, ಸಾರ್ವಜನಿಕ ಸಮಾರಂಭಗಳಲ್ಲಿ ಜೊತೆ ಕಾಣಿಸಿಕೊಳ್ಳುತ್ತಿರುತ್ತಾರೆ.

Read more Photos on
click me!

Recommended Stories