ಸೈಕೋ ಜಯಂತ್‌ನ ಕೈಯಲ್ಲಿ ಸಿಲುಕಿ ವಿಲವಿಲ ಒದ್ದಾಡ್ತಿರೋ ಶಾಂತಮ್ಮ: ವೀಕ್ಷಕರಿಂದ ಬಂತು ಸೂಪರ್ ಕಮೆಂಟ್

Published : Jun 21, 2025, 07:42 PM IST

Kannada Serial Lakshmi Nivasa: ಚಿನ್ನುಮರಿಯನ್ನು ಕಳೆದುಕೊಂಡ ಜಯಂತ್, ಆರೈಕೆ ಮಾಡಿದ್ದ ಶಾಂತಮ್ಮಳನ್ನು ಮನೆಗೆ ಕರೆತಂದಿದ್ದಾನೆ. ವಿಚಿತ್ರ ವ್ಯಕ್ತಿತ್ವದ ಜಯಂತ್ ಜೊತೆ ಶಾಂತಮ್ಮ ಹೊಂದಿಕೊಳ್ಳುತ್ತಿದ್ದಾಳೆ. ಗೂಬೆಯಿಂದ ಬಂದ ಪತ್ರದಿಂದ ಭಯಭೀತಳಾದ ಶಾಂತಮ್ಮಳಿಗೆ ಜಯಂತ್‌ನ ಅನುಮಾನದ ಬರೆ ಬೀಳುತ್ತದೆ.

PREV
15

ಚಿನ್ನುಮರಿಯನ್ನು ಕಳೆದುಕೊಂಡು ಒಂಟಿಯಾಗಿದ್ದ ಜಯಂತ್, ತನ್ನನ್ನು ಬಾಲ್ಯದಲ್ಲಿ ನೋಡಿಕೊಂಡಿದ್ದ ಶಾಂತಮ್ಮಳನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಜಯಂತ್ ಮಾನಸಿಕ ಸ್ಥಿತಿ ತಿಳಿದಿದ್ರೂ ಒಳ್ಳೆಯ ಸಂಬಳ ಅಂತ ಒಪ್ಪಿಕೊಂಡು ಶಾಂತಮ್ಮ ಬಂದಿದ್ದಾಳೆ. ಮನೆ ಕೆಲಸ ಮಾಡಿಕೊಂಡು ಜಯಂತ್ ಎಂಬ ವಿಚಿತ್ರ ವ್ಯಕ್ತಿಯೊಂದಿಗೆ ಶಾಂತಮ್ಮಾ ಹೊಂದಿಕೊಂಡು ಹೋಗುತ್ತಿದ್ದಾಳೆ.

25

ತನ್ನನ್ನು ಬಾಲ್ಯದಲ್ಲಿ ಆರೈಕೆ ಮಾಡಿದ್ದರಿಂದ ಶಾಂತಮ್ಮಳನ್ನು ಜಯಂತ್ ತಾಯಿ ರೂಪದಲ್ಲಿ ಕಾಣುತ್ತಾನೆ. ಹಾಗಾಗಿಯೇ ಕೆಲವೊಂದು ವಿಷಯಗಳನ್ನು ಶಾಂತಮ್ಮನ ಜೊತೆ ಜಯಂತ್ ಶೇರ್ ಮಾಡಿಕೊಳ್ಳುತ್ತಿರುತ್ತಾನೆ. ಈತನ ಅತಿಯಾದ ಪ್ರೀತಿಯಿಂದಲೇ ದೇವರು ಜಾಹ್ನವಿಯನ್ನ ಕರೆದುಕೊಂಡಿರಬೇಕೆಂದು ಶಾಂತಮ್ಮಾ ಅಂದ್ಕೊಂಡಿದ್ದಾಳೆ.

35

ಈ ಹಿಂದೆ ವಿಶ್ವ ಮನೆಗೆ ಬಂದು ಜಾಹ್ನವಿ ಕಾಣದಿದ್ದಾಗ ಪತ್ರವೊಂದನ್ನು ಬರೆದು ಮನೆಯೊಳಗೆ ಎಸೆದಿದ್ದನು. ಕೊನೆಯಲ್ಲಿ ತನ್ನ ಹೆಸರಿನ ಬದಲಾಗಿ ಗೂಬೆ ಎಂದು ಬರೆದಿದ್ದನು. ಈ ಪತ್ರ ಶಾಂತಮ್ಮಳಿಗೆ ಸಿಕ್ಕಿತ್ತು. ಈ ಪತ್ರ ನೋಡಿದ್ರೆ ಜಯಂತ್ ಇನ್ನೇನು ಮಾಡುತ್ತಾನೆ ಎಂದು ಶಾಂತಮ್ಮ ಭಯಪಟ್ಟಿದ್ದಳು. ಆದ್ರೂ ಪತ್ರ ಮುಚ್ಚಿಡಲು ಪ್ರಯತ್ನಿಸಿದ್ದ ಶಾಂತಮ್ಮಾ, ತಗ್ಲಾಕೊಂಡಿದ್ದಳು. ಕೊನೆಗೂ ಜಯಂತ್‌ಗೆ ಆ ಪತ್ರ ಸಿಕ್ಕಿದೆ. ಈ ವೇಳೆ ಅಕ್ಷರಷಃ ಶಾಂತಮ್ಮಾ ಗಾಬರಿಗೊಂಡಿದ್ದಳು.

45

ಇನ್ನು ಗೆಳೆಯ ಸಚಿನ್ ಬಂದ ಹೋದ್ಮೇಲೆ ಜಯಂತ್‌ಗೆ ಕೆಲವೊಂದು ಅನುಮಾನ ಶುರುವಾಗಿತ್ತು. ನಾನು ಬರುವ ಮುಂಚೆ ಶಾಂತಮ್ಮ ಮತ್ತು ಸಚಿನ್ ನಡುವೆ ಏನು ಮಾತುಕತೆ ನಡೆದಿದೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿದನು. ಆದ್ರೆ ಜಾಣೆ ಶಾಂತಮ್ಮಾ ಮಾತ್ರ ಅನುಮಾನ ಬರದಂತೆ ಮಾತನಾಡಿದ್ದಳು. ಇಷ್ಟಕ್ಕೆ ಸುಮ್ಮನಾಗದ ಜಯಂತ್, ಶಾಂತಮ್ಮಗೆ ಸಚಿನ್ ಮೇಲೆ ಕೆಟ್ಟ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿದ

55

ಶಾಂತಮ್ಮನ ಪಾತ್ರ ವೀಕ್ಷಕರಿಗೆ ಇಷ್ಟವಾಗುತ್ತಿದ್ದು, ಸೈಕೋ ಜಯಂತ್‌ ಜೊತೆ ಇರೋದಕ್ಕೆ ನೆಟ್ಟಿಗರು ಸಲಾಂ ಹೇಳುತ್ತಿದ್ದಾರೆ. ಸಣ್ಣದೊಂದು ಅನುಮಾನ ಸಾಕು ನಮ್ಮ ಜಯಂತ್ ಗೆ ನಿನ್ನ ಹೆಸರು ಮಾತ್ರ ಶಾಂತಮ್ಮ ಅಲ್ಲ ನಿನ್ನನ್ನೇ ಶಾಂತವಾಗಿ ಶಾಶ್ವತವಾಗಿ ಮಲಗಿಸಿಬಿಡ್ತಾನೆ. ನೀನು ಇಲ್ಲಿಯವರೇಗೆ ಬದುಕಿರೋದೇ ಒಂದು ಮಹಾ ಆಶ್ಚರ್ಯ ಎಂದು ವೀಕ್ಷಕರು ಕಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories