ಚಿನ್ನುಮರಿಯನ್ನು ಪಡೆಯಲು ಪಣತೊಟ್ಟ ಜಯಂತ್, ವೇಷ ಮರೆಸಿಕೊಂಡು ಜಾಹ್ನವಿ ಮತ್ತು ವಿಶ್ವ ಇರುವ ಸಿನಿಮಾ ಹಾಲ್‌ಗೆ ಬರುತ್ತಾನೆ. ಜಯಂತ್‌ನಿಂದ ಜಾಹ್ನವಿಯನ್ನು ತಪ್ಪಿಸಲು ವಿಶ್ವ ಹೊಗೆಯ ಪ್ಲ್ಯಾನ್ ಮಾಡಿದರೂ, ಕೊನೆಗೆ ಜಯಂತ್ ಆಕೆಯನ್ನು ಹಿಡಿದಂತೆ ತೋರಿಸಲಾಗಿದೆ. ಇದು ಕನಸೋ ನನಸೋ ಎಂಬುದು ಮುಂದೆ ತಿಳಿಯಲಿದೆ.
ಲಕ್ಷ್ಮೀ ನಿವಾಸ (Lakshmi Nivasa) ಸೀರಿಯಲ್ನಲ್ಲಿ ಏನಾದ್ರೂ ಸರಿ. ಚಿನ್ನುಮರಿಯನ್ನು ಪಡೆದುಕೊಳ್ಳಲೇಬೇಕು ಎಂದು ಜಯಂತ್ ಪಣತೊಟ್ಟಿದ್ದಾನೆ. ಅದಕ್ಕಾಗಿ ಭರ್ಜರಿ ಬಲೆ ಬೀಸಿದ್ದಾನೆ.
27
ಸಿನಿಮಾ ನೋಡಲು
ವಿಶ್ವ ಮತ್ತು ಜಾಹ್ನವಿ ಸಿನಿಮಾ ನೋಡಲು ಬರುತ್ತಾರೆ ಎಂದು ತಿಳಿದು ಶಾಂತಮ್ಮನ ಜೊತೆ ವೇಷ ಮರೆಸಿಕೊಂಡು ಬಂದಿದ್ದಾನೆ. ಅಲ್ಲಿಯೇ ವಿಶ್ವ ಮತ್ತು ಜಾಹ್ನವಿ ಇದ್ದಾರೆ.
37
ವಿಶ್ವನ ಬಳಿ ಶಾಂತಮ್ಮ
ಆದರೆ, ಕೂಡಲೇ ಈ ವಿಷಯವನ್ನು ವಿಶ್ವನ ಬಳಿ ಹೋಗಿ ಶಾಂತಮ್ಮಾ ತಿಳಿಸಿದ್ದಾಳೆ. ಹೇಗಾದರೂ ಮಾಡಿ ಜಾಹ್ನವಿಯನ್ನು ಜಯಂತ್‌ನಿಂದ ದೂರವಿಡಬೇಕು. ಆತನ ಕಣ್ಣಿಗೆ ಕಾಣದಂತೆ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದಾನೆ.
ಅಷ್ಟರಲ್ಲಿಯೇ ಜಾಹ್ನವಿ ವಾಷ್ರೂಮ್ಗೆ ಎದ್ದು ಹೋಗಿದಾಗ ಜಯಂತ್ ನೋಡಿಬಿಟ್ಟಿದ್ದಾನೆ. ಅವಳು ಹೊರಕ್ಕೆ ಬರುವುದನ್ನೇ ಕಾಯುತ್ತಿದ್ದಾನೆ.
57
ಉಸಿರುಗಟ್ಟುವ ವಾತಾವರಣ
ಅಷ್ಟರಲ್ಲಿಯೇ ಸಿನಿಮಾ ಹಾಲ್ನಲ್ಲಿ ಹೊಗೆ ಕಾಣಿಸಿಕೊಂಡು ಉಸಿರುಗಟ್ಟಿ ಎಲ್ಲರೂ ಹೊರಕ್ಕೆ ಬಂದಿದ್ದಾರೆ. ಸೈರನ್ ಮೊಳಗಿದ್ದು ಕೇಳಿ ಜಾಹ್ನವಿ ಒಳಗೇ ಇದ್ದಾಳೆ. ಜಯಂತ್ ಬಳಿಯೂ ಹೊಗೆ ಬಂದಿದೆ.
67
ವಿಶ್ವನದ್ದೇ ಪ್ಲ್ಯಾನ್
ಆಮೇಲೆ ಇದು ವಿಶ್ವನದ್ದೇ ಪ್ಲ್ಯಾನ್ ಎಂದು ತಿಳಿಯುತ್ತದೆ. ಜಯಂತ್ ಜಾಹ್ನವಿಯನ್ನು ನೋಡಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಿದ್ದಾನೆ ಆತ. ಆದರೆ ಜಾಹ್ನವಿ ಹೊರಗೆ ಬರುವುದನ್ನೇ ಕಾಯುತ್ತಿದ್ದ ಜಯಂತ್ನ ಉಸಿರುಗಟ್ಟಿದಂತಾಗಿದೆ.
77
ಮತ್ತೆ ಸಿಕ್ತಾಳಾ ಚಿನ್ನುಮರಿ?
ಅದೇ ವೇಳೆಗೆ ಜಾಹ್ನವಿ ಹೊರಗೆ ಬಂದಿದ್ದಾಳೆ. ಜಯಂತ್ ಆಕೆಯನ್ನು ಅಪ್ಪಿಕೊಂಡಿರುವ ಹಾಗೆ ತೋರಿಸಲಾಗಿದೆ. ಆದರೆ ಇದು ಕನಸೋ ನನಸೋ ಗೊತ್ತಾಗಬೇಕಿದೆ. ಉಸಿರುಗಟ್ಟುವ ಪ್ರೀತಿಯ ಬಲೆಗೆ ಮತ್ತೆ ಸಿಕ್ತಾಳಾ ಚಿನ್ನುಮರಿ ಅಥವಾ ತಪ್ಪಿಸಿಕೊಳ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.