Karna ಸೀರಿಯಲ್‌ನಲ್ಲಿ ಮುಂದೇನಾಗುತ್ತದೆ ಎಂಬ ಗುಟ್ಟು ರಟ್ಟು ಮಾಡಿ ವೀಕ್ಷಕರಿಗೆ ಶಾಕ್​ ಕೊಟ್ಟ Annayya ಪಾರು!

Published : Nov 19, 2025, 09:04 PM IST

ಕರ್ಣ ಮತ್ತು ಅಣ್ಣಯ್ಯ ಸೀರಿಯಲ್‌ ಮಹಾಸಂಗಮದಲ್ಲಿ, ವೈದ್ಯೆಯಾದ ಪಾರುಗೆ ಆಕಸ್ಮಿಕವಾಗಿ ನಿತ್ಯಾ ಗರ್ಭಿಣಿ ಎಂಬ ಸತ್ಯ ತಿಳಿದಿದೆ. ಈ ವಿಷಯವನ್ನು ನಿಧಿಗೆ ತಿಳಿಸುವಂತೆ ಕರ್ಣನಿಗೆ ಅವನ ತಾತ ಸಲಹೆ ನೀಡಿದ್ದು, ಈಗ ಕರ್ಣ ಅಥವಾ ಪಾರು ಈ ಸತ್ಯವನ್ನು ನಿಧಿಗೆ ತಿಳಿಸುತ್ತಾರಾ ಎಂಬ ಕುತೂಹಲ ಮೂಡಿದೆ.

PREV
17
ಸೀರಿಯಲ್‌ ಮಹಾಸಂಗಮ

ಸದ್ಯ ಕರ್ಣ ಮತ್ತು ಅಣ್ಣಯ್ಯ ಸೀರಿಯಲ್‌ (Karna and Annayya Serial) ಮಹಾಸಂಗಮ ನಡೆಯುತ್ತಿದೆ. ಇದರಲ್ಲಿ ಪಾರುಗೆ ನಿತ್ಯಾಳ ಗರ್ಭದ ಸತ್ಯ ತಿಳಿದಿದೆ. ಆಕೆ ಗರ್ಭಿಣಿ ಎನ್ನುವ ಸತ್ಯವೂ ತಿಳಿಸಿದೆ.

27
ಸೀನ ಮಾಡಿದ ಕಿತಾಪತಿ

ಪಾರು ಮನೆಗೆ ಬಂದ ಸಂದರ್ಭದಲ್ಲಿ ಸೀನು ಮಾಡಿದ ಕಿತಾಪತಿಯಿಂದ ಈ ವಿಷಯ ಬಹಿರಂಗಗೊಂಡಿದೆ. ಸ್ಮಾರ್ಟ್ ವಾಚ್‌ ಒಂದನ್ನು ಸೀನ ನಿತ್ಯಾಳಿಗೆ ಕಟ್ಟಿದ್ದ. ಅದನ್ನು ತೆಗೆಯುವ ಸಂದರ್ಭದಲ್ಲಿ ಪಾರು ಆಕಸ್ಮಿಕವಾಗಿ ಪಾರು ನಾಡಿಯನ್ನು ಹಿಡಿದಿದ್ದಾಳೆ.

37
ಪಾರುಗೆ ಗೊತ್ತಾಯ್ತು ಸತ್ಯ

ವೈದ್ಯೆಯಾಗಿರುವ ಆಕೆಗೆ ನಿತ್ಯಾ ಗರ್ಭಿಣಿ ಎನ್ನುವ ವಿಷಯ ತಿಳಿದಿದೆ. ಇದರ ಬಗ್ಗೆ ಕರ್ಣನಿಗೆ ಕೇಳಿದಾಗ ಆಗ ಎಲ್ಲ ಸತ್ಯವನ್ನೂ ಹೇಳಿದ್ದಾಳೆ.

47
ಸದ್ಯಕ್ಕಿರುವ ಕುತೂಹಲ

ಹಾಗಿದ್ದರೆ ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ಅದೇ ಇನ್ನೊಂದೆಡೆ ಕರ್ಣನ ತಾತ ಕೂಡ ಕರ್ಣನ ಮನಸ್ಸಿನಲ್ಲಿ ಬಂದು ಸತ್ಯವನ್ನು ನಿಧಿಗೆ ತಿಳಿಸು, ಅವಳೇ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೋ ತೆಗೆದುಕೊಳ್ಳಲಿ ಎಂದಿದ್ದಾನೆ.

57
ನಿಧಿಗೆ ಸತ್ಯ ಗೊತ್ತಾಗತ್ತಾ?

ಆದ್ದರಿಂದ ಈಗ ಕರ್ಣನ ಮುಂದಿನ ನಡೆ ಏನು? ನಿತ್ಯಾ ಮತ್ತು ಕರ್ಣನ ಮದುವೆಯಾಗಿಲ್ಲ, ನಿತ್ಯಾ ಗರ್ಭಿಣಿ ಎನ್ನುವುದು ತಿಳಿದ ಮೇಲೆ ನಿಧಿ ಏನು ಮಾಡುತ್ತಾಳೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

67
ಗುಟ್ಟೊಂದು ಹೇಳುವೆ

ಇದರ ನಡುವೆಯೇ, ಅಣ್ಣಯ್ಯ ಸೀರಿಯಲ್‌ ಪಾರು ಪಾತ್ರಧಾರಿ ನಿಶಾ ರವಿಕೃಷ್ಣನ್​  ಗುಟ್ಟೊಂದು ಹೇಳುವೆ ಎಂದು ಕಾಣಿಸಿಕೊಂಡಿದ್ದಾರೆ. ಇಂದು ದೊಡ್ಡ ಸೀಕ್ರೇಟ್‌ ಒಂದು ರಿವೀಲ್‌ ಆಗುತ್ತಿದೆ ನೋಡಿ ಎಂದಿದ್ದಾರೆ.

77
ಸತ್ಯ ಹೇಳುವವರು ಯಾರು?

ಅಲ್ಲಿಗೆ ನಿಧಿಗೆ ಎಲ್ಲಾ ವಿಷಯವನ್ನು ಕರ್ಣ ಹೇಳುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ವಿಷಯವನ್ನು ಕರ್ಣ ಹೇಳುತ್ತಾನೋ ಅಥವಾ ಪಾರು ಹೇಳುತ್ತಾಳೋ ಗೊತ್ತಾಗಬೇಕಿದೆ.

Read more Photos on
click me!

Recommended Stories