ಬಿಗ್ ಬಾಸ್ ಟ್ರೋಫಿಗೂ ಮುನ್ನ ಇತಿಹಾಸ ಸೃಷ್ಟಿಸಿದ ಗಿಲ್ಲಿ ನಟ: ಹಳ್ಳಿ-ಹಳ್ಳಿಗೂ ಡಂಗೂರ, ಎಂಎಲ್‌ಎ ಕೂಡ ಬಿಡ್ಲಿಲ್ಲ!

Published : Jan 15, 2026, 05:26 PM IST

ಬಿಗ್ ಬಾಸ್ ಸೀಸನ್ 12ರ ಫಿನಾಲೆ ಸಮೀಪಿಸುತ್ತಿದ್ದಂತೆ, ಮಂಡ್ಯದ ಗಿಲ್ಲಿ ನಟನ ಪರವಾಗಿ ಹಳ್ಳಿ-ಹಳ್ಳಿಗಳಲ್ಲಿ ಡಂಗೂರ ಸಾರುವ ಮೂಲಕ ಬೃಹತ್ ವೋಟಿಂಗ್ ಅಭಿಯಾನ ನಡೆಯುತ್ತಿದೆ. ಶಾಸಕರೂ ಸೇರಿದಂತೆ ಜನಸಾಮಾನ್ಯರು ಗಿಲ್ಲಿ ನಟನ ಗೆಲುವಿಗಾಗಿ ಕೈಜೋಡಿಸಿದ್ದು, ಬಿಗ್ ಬಾಸ್ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.

PREV
16

ಬಿಗ್ ಬಾಸ್ ಸೀಸನ್ 12ರ ಫಿನಾಲೆಗೆ ಮೂರು ದಿನಗಳು ಬಾಕಿಯಿರುವಾಗ ಗಿಲ್ಲಿ ನಟನಿಗೆ ಅತಿಹೆಚ್ಚು ವೋಟಿಂಗ್ ಮಾಡುವಂತೆ ಹಳ್ಳಿ-ಹಳ್ಳಿಗಳಿಗೆ ಡಂಗೂರ ಸಾರಲಾಗುತ್ತಿದೆ. ತಮಟೆ ಬಾರಿಸುತ್ತಾ, ಯಾರಾರ ಮನೆಯಲ್ಲಿ ಮೊಬೈಲ್ ಇದ್ದಾವೋ ಅವರೆಲ್ಲರೀ ನಮ್ಮ ಮಂಡ್ಯದ ಹೈದ ಗಿಲ್ಲಿಗೆ ವೋಟ್ ಮಾಡಬೇಕಂತ್ರಪ್ಪೋ...' ಎಂದು ಡಂಗೂರ ಸಾರಲಾಗುತ್ತಿದೆ. 

ಇದಕ್ಕೆ ಆನೆಬಲವೆಂಬಂತೆ ಸ್ವತಃ ಮಳವಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅವರೂ ಗಿಲ್ಲಿ ನಟನಿಗೆ ವೋಟಿಂಗ್ ಮಾಡುವಂತೆ ಮನವಿ ಮಾಡಿದ್ದಾರೆ.

26

ಬಿಗ್ ಬಾಸ್ ಸೀಸನ್ 12 ವಿಜೇತರ ಘೋಷಣೆಗೆ ಇನ್ನೇನು 3 ದಿನಗಳು ಮಾತ್ರ ಬಾಕಿಯಿದೆ. ಹೀಗಿರುವಾಗ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗಿಲ್ಲಿ ನಟ ಗೆಲ್ಲುವ ಹಾಟ್‌ ಫೇವರೀಟ್ ಸ್ಪರ್ಧಿ ಆಗಿದ್ದಾನೆ. 

ಆದರೆ, ಬಿಗ್ ಬಾಸ್ ಮನೆಯಲ್ಲಿ ಬೇರೊಬ್ಬ ಸ್ಪರ್ಧಿಯನ್ನು ಗೆಲ್ಲಿಸಲು ಚಿಂತನೆ ನಡೆಯುತ್ತಿದೆ ಎಂಬ ಮಾತುಗಳು ವೈರಲ್ ಆಗಿರುವ ಬೆನ್ನಲ್ಲಿಯೇ ಗಿಲ್ಲಿ ನಟನ ಪರವಾಗಿ ವೋಟಿಂಗ್ ಮಾಡುವಂತೆ ದೊಡ್ಡ ಮಟ್ಟದ ಅಭಿಯಾನ ಶುರುವಾಗಿದೆ. ಹಳ್ಳಿ-ಹಳ್ಳಿಗಳಲ್ಲಿ ಗಿಲ್ಲಿ ನಟನಿಗೆ ಮೊಬೈಲ್ ಮೂಲಕ ವೋಟಿಂಗ್ ಮಾಡುವಂತೆ ಡಂಗೂರ ಸಾರಲಾಗುತ್ತಿದೆ.

36

ಈವರೆಗೆ ಕನ್ನಡದಲ್ಲಿ ಬಿಗ್ ಬಾಸ್ 11 ಸೀಸನ್ ಶೋಗಳು ನಡೆದಿವೆ. ಆದರೆ, ರಾಜಕಾರಣಿಗಳು, ಹಳ್ಳಿ ಜನರು ಇಷ್ಟು ದೊಡ್ಡ ಮಟ್ಟದಲ್ಲಿ ಒಬ್ಬ ಸ್ಪರ್ಧಿಯ ಗೆಲುವುಗಾಗಿ ಮುಂದಾಗಿರುವುದು ಇದೇ ಮೊದಲು. ಈ ಹಿಂದಿನ ಯಾವ ಸೀಸನ್‌ನಲ್ಲಿಯೂ ಇಷ್ಟೊಂದು ದೊಡ್ಡ ಮಟ್ಟದ ವೋಟಿಂಗ್ ಮಾಡುವಂತೆ ಕ್ಯಾಂಪೇನ್ ಮಾಡಿದ ಉದಾಹರಣೆಗಳು ಇರಲಿಲ್ಲ. 

ಈವರೆಗೆ ಅತಿಹೆಚ್ಚು ವೋಟಿಂಗ್ ಪಡೆದ ಸ್ಪರ್ಧಿ ಎಂದರೆ ಅದು ಹಾವೇರಿ ಹೈದ ಗಾಯಕ ಹನುಮಂತ ಲಮಾಣಿ. ಇದೀಗ ಆ ದಾಖಲೆಯನ್ನು ಗಿಲ್ಲಿ ನಟ ಮುರಿಯುವ ಎಲ್ಲ ಸಾಧ್ಯತೆಗಳೂ ಕಂಡುಬರುತ್ತಿವೆ.

46

ಇನ್ನು ಬಿಗ್ ಬಾಸ್ ಎನ್ನುವುದು ಕೇವಲ ಅತ್ಯುತ್ತಮ ವ್ಯಕ್ತಿತ್ವವನ್ನು ಹುಡುಕುವ ವೇದಿಕೆಯಲ್ಲ, ಬದಲಾಗಿ ವಿಭಿನ್ನ ಹಿನ್ನೆಲೆ ಮತ್ತು ವ್ಯಕ್ತಿತ್ವವುಳ್ಳವರು ಒಂದೇ ಸೂರಿನಡಿ ನಡೆಸುವ ಹೋರಾಟ. ಈ ಬಾರಿಯ ಸೀಸನ್ ಅತಿದೊಡ್ಡ ಮಟ್ಟದಲ್ಲಿ ರಂಜಿಸಿದೆ ಎಂದರೆ ಅದಕ್ಕೆ ಆನೆಗಾತ್ರದ ಕೊಡುಗೆ ನೀಡಿದವರು ಗಿಲ್ಲಿ ನಟ. ಹೊರಗಡೆ ಗಿಲ್ಲಿ ನಟನ ಬಗ್ಗೆ ಪಾಸಿಟಿವ್ ಅಥವಾ ನೆಗೆಟಿವ್ ಅಭಿಪ್ರಾಯಗಳಿರಬಹುದು, ಆದರೆ ಆತನೊಬ್ಬ 'ನಗೆ ಬಾಂಬ್' ಎಂಬುದರಲ್ಲಿ ಎರಡು ಮಾತಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸಮಾನ ಶಕ್ತಿಯುಳ್ಳವರಲ್ಲ. ಅಜಾನುಬಾಹು ರಘು, ಮಾತಿನ ಮಲ್ಲಿ ರಕ್ಷಿತಾ, ಸಂಘಟನಾ ಚತುರೆ ಅಶ್ವಿನಿ ಅವರ ನಡುವೆ ಹಾಸ್ಯದ ಮೂಲಕವೇ ಗುರುತಿಸಿಕೊಂಡು ಫಿನಾಲೆ ಹಂತದವರೆಗೆ ಬಂದ ಗಿಲ್ಲಿ ನಟನ ಪಯಣ ಕುತೂಹಲಕಾರಿ.

56

ಗಿಲ್ಲಿ ನಟನ ಹಾಸ್ಯ ಪ್ರವೃತ್ತಿ ಸಹಜವಾಗಿದ್ದು, ಮಾತಿನಲ್ಲಿ ಆಶ್ಲೀಲತೆಯ ಸೋಂಕಿಲ್ಲ. ಆತ ಎಲ್ಲರಿಗೂ ವೈಯಕ್ತಿಕ ನಿಂದನೆ ಮಾಡಿದ್ದಾನೆ ಎಂಬ ಆರೋಪ ಸುಳ್ಳು. ಆತ ಕೇವಲ ತನ್ನ ಕಾಲೆಳೆದವರನ್ನೇ ಮರಳಿ ಹೀಗಳೆದಿದ್ದಾನೆ. ಇನ್ನು ತಾನು ತಪ್ಪು ಮಾಡಿದಾಗಲೆಲ್ಲ ನಾಮಿನೇಷನ್ ಅಥವಾ ಕಳಪೆಯಾಗಿ ಆಯ್ಕೆಯಾಗುವ ಮೂಲಕ ಅದರ ಬೆಲೆಯನ್ನು ಆಯಾ ಎಪಿಸೋಡ್‌ಗಳಲ್ಲೇ ಅನುಭವಿಸಿದ್ದಾನೆ. 

ಈ ಸೀಸನ್‌ನಲ್ಲಿ ಗಿಲ್ಲಿ ನಟ ಹೆಚ್ಚು ಜಟಾಪಟಿ ನಡೆಸಿದ್ದು ಅಶ್ವಿನಿಯವರೊಂದಿಗೆ. ಇವರಿಬ್ಬರ ನಡುವಿನ ಮಾತಿನ ಚಕಮಕಿ ಮತ್ತು ಜಗಳಗಳನ್ನು ವೀಕ್ಷಕರು ಹತ್ತಿರದಿಂದ ಕಂಡಿದ್ದಾರೆ. ಇಲ್ಲಿ ಯಾರೂ ಪರಿಪೂರ್ಣ ವ್ಯಕ್ತಿತ್ವದವರಲ್ಲ, ಎಲ್ಲರಲ್ಲೂ ಪ್ಲಸ್ ಮತ್ತು ಮೈನಸ್ ಅಂಶಗಳಿರುತ್ತವೆ ಎಂಬುದು ಕಂಡುಬಂದಿದೆ.

66

ಬಿಗ್ ಬಾಸ್ ಅತ್ಯುತ್ತಮ ವ್ಯಕ್ತಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವಲ್ಲ. ಇದೊಂದು ಪಕ್ಕಾ ಮನರಂಜನಾ ಶೋ. ಇಲ್ಲಿ ಹೆಚ್ಚು ರಂಜಿಸಿದವರು ಮತ್ತು ಜನರ ಹೆಚ್ಚು ಮತ ಪಡೆದವರು ವಿನ್ನರ್ ಆಗುತ್ತಾರೆ. ಅವರು 'ದ ಬೆಸ್ಟ್' ಎಂಬ ಕಾರಣಕ್ಕಲ್ಲ, ಬದಲಾಗಿ 'Liked by the most' (ಹೆಚ್ಚು ಜನರು ಇಷ್ಟಪಟ್ಟವರು) ಎಂಬ ಕಾರಣಕ್ಕೆ ಜಯಶಾಲಿಯಾಗುತ್ತಾರೆ. 

ಅಂತಿಮವಾಗಿ ವಿನ್ನರ್ ಆಯ್ಕೆ ಮಾಡುವ ಜವಾಬ್ದಾರಿ ಈಗ ಜನರ ಕೈಯಲ್ಲಿದೆ. ಇದೀಗ ರಾಜ್ಯದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಗಿಲ್ಲಿ ನಟನದ್ದೇ ಅತ್ಯಧಿಕವಾಗಿ ಚರ್ಚೆ ಆಗುತ್ತಿದೆ. ಇದರ ನಡುವೆ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ಕ್ಯಾಪ್ಟನ್ ರಘು ಅವರ ಹೆಸರುಗಳೂ ಕೇಳಿಬರುತ್ತಿವೆ. ಆದರೆ, ಕಾವ್ಯಾ ಮತ್ತು ಧನುಷ್ ಗೌಡ ಅವರ ಕುರಿತಾಗಿ ಹೆಚ್ಚಿನ ಚರ್ಚೆಗಳು ಕಂಡುಬರುತ್ತಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories