ಮದ್ವೆ ಆಗ್ತಿದ್ದಂತೆ ತುಂಡು ಬಟ್ಟೆ ಬಿಟ್ಟು ಸೀರೆ ಉಟ್ಟ ಲಕ್ಷ್ಮೀ ಬಾರಮ್ಮ ವಿಧಿ

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ವಿಧಿ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವ ನಟಿ ಲಾವಣ್ಯ ಹೀರೆಮಠ್ ತುಂಡುಡುಗೆ ಬಿಟ್ಟು ಸೀರೆಯುಟ್ಟು ಪೋಸ್ ಕೊಟ್ಟಿದ್ದಾರೆ. 
 

Lakshmi Baramma Vidhis Marathi Look pav

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮ (Lakshmi Baramma) ಧಾರಾವಾಹಿ ಶೀಘ್ರದಲ್ಲೇ ಮುಗಿಯಲಿದೆ ಎನ್ನುವ ಗುಸು ಗುಸು ಕೇಳಿ ಬರುತ್ತಿದೆ. ಆದರೆ ಸೀರಿಯಲ್ ತಂಡದಿಂದ ಈ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಸೀರಿಯಲ್ ದಿನಕ್ಕೊಂದು ಟ್ವಿಸ್ಟ್ ಕೊಡುತ್ತಾ ಸಾಗುತ್ತಿದೆ. 
 

ಸೀರಿಯಲ್ ನಲ್ಲಿ ಒಂದು ಕಡೆ ಲಕ್ಷ್ಮೀ ವೈಷ್ಣವ್ (Lakshmi Vaishnav) ಹಾಗೂ ಕಾವೇರಿ ಕಥೆ ಜೋರಾಗಿ ನಡೆಯುತ್ತಿದ್ದರೆ, ಮತ್ತೊಂದೆಡೆ, ವಿಧಿಯ ಹುಚ್ಚಾಟ ಇನ್ನೂ ಜೋರಾಗಿಯೇ ನಡೆಯುತ್ತಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಮೂಲಕ ಮನೆಮಂದಿಗೆ ಶಾಕ್ ಕೊಟ್ಟಿದ್ದಳು ವಿಧಿ. 
 


ಕಾವೇರಿ ಅದನ್ನು ವಿರೋಧಿಸಿ, ಮಗಳನ್ನು ದೂರ ಮಾಡಿಕೊಂಡಿದ್ದು, ಆಯ್ತು, ಗಂಡನ ಸಮೇತ ಮೊದಲ ಬಾರಿಗೆ ತಾಯಿ ಮನೆಗೆ ಬಂದ ವಿಧಿಯನ್ನು ಕಾವೇರಿ ಹೊರ ನೂಕಿದ್ದೂ ಆಯ್ತು. ಮತ್ತೊಂದು ಕಡೆ, ವಿಧಿನ ಗಂಡನ ಕುಟುಂಬದಿಂದಲೂ ತಿರಸ್ಕಾರ ಹಾಗಾಗಿ ಸಾಯುವ ನಿರ್ಧಾರ ಮಾಡಿ, ಬೆಂಕಿ ಹಚ್ಚಿಕೊಳ್ಳಲು ರೆಡಿಯಾಗಿದ್ದ ವಿಧಿಯನ್ನು ಲಕ್ಷ್ಮೀ ವೈಷ್ಣವ್ ಬಂದು ಕಾಪಾಡಿದ್ದರು. 
 

ಇದಿಷ್ಟು ಸೀರಿಯಲ್ ಕಥೆ ಆಗಿದೆ. ಆದರೆ ಸೀರಿಯಲ್ ನಲ್ಲೇ ಆಗಲಿ, ರಿಯಲ್ ಲೈಫಲ್ಲೇ ಆಗಲಿ ವಿಧಿ ಅಂದ್ರೆ, ಲಾವಣ್ಯ ಹೀರೆಮಠ್ ಹೆಚ್ಚಾಗಿ ಕಾಣಿಸಿಕೊಳ್ಳುವುದೇ ಮಾಡರ್ನ್ ಡ್ರೆಸ್ ಗಳಲ್ಲಿ. ಟ್ರೆಡೀಶನಲ್ ವೇರ್ ಗಳಲ್ಲಿ (Traditional Wear) ನಟಿ ಕಾಣಿಸಿಕೊಂಡಿದ್ದೇ ಕಡಿಮೆ. 
 

ಅಂತದ್ದರಲ್ಲಿ ಇದೀಗ ಲಾವಣ್ಯ ತುಂಡು ಬಟ್ಟೆ ಬಿಟ್ಟು ಸುಂದರವಾಗಿ ಜರಿ ಸೀರೆಯನ್ನು ಕಚ್ಚೆ ಸ್ಟೈಲ್ ಅಲ್ಲಿ ಉಟ್ಟು ಪೋಸ್ ಕೊಟ್ಟಿದ್ದಾರೆ. ಒಟ್ಟಲ್ಲಿ ಹೇಳೋದಾದರೆ ಲಾವಣ್ಯ ಮರಾಠಿ ಮುಲ್ಗಿ ಥರ ತುಂಬಾನೆ ಮುದ್ದಾಗಿ ಕಾಣಿಸಿದ್ದಾರೆ.
 

ಮೆಜೆಂತಾ ಬಾರ್ಡರ್ ಇರುವ ಹಳದಿ ಬಣ್ಣದ ಸೀರೆಯುಟ್ಟಿರುವ ಲಾವಣ್ಯ (Lavanya Hiremath), ಅದಕ್ಕೆ ಮ್ಯಾಚ್ ಆಗುವ ಬ್ಲೌಸ್  ಕೂಡ ಧರಿಸಿದ್ದಾರೆ. ಇದರ ಜೊತೆಗೆ  ವಿವಿಧ ರೀತಿಯ ಆಭರಣಗಳನ್ನು ಸಹ ಧರಿಸಿದ್ದು, ಮೂಗಲ್ಲಿ ನತ್ತು ಕೂಡ ಇದ್ದು, ಮಹಾರಾಷ್ಟ್ರ ಲುಕ್ ಸಖತ್ ಸುಂದರವಾಗಿದೆ. 
 

ದಂತ ವೈದ್ಯೆಯಾಗಿರುವ ಲಾವಣ್ಯ ತಮ್ಮ ಹೊಸ ಫೋಟೊ ಶೂಟ್ ಗಳ ಜೊತೆಗೆ Aga bai Marathi Mulgi ಎಂದು ಬರೆದುಕೊಂಡಿದ್ದಾರೆ. ಇವರ ಫೋಟೊ ನೋಡಿ ಅಭಿಮಾನಿಗಳು ಫೈರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. 
 

Latest Videos

vuukle one pixel image
click me!