ವೇದಿಕೆ ಮೇಲೆ ಹೊಡೆದಾಡಿಕೊಂಡ ಬಿಗ್ ಬಾಸ್ ಸ್ಪರ್ಧಿಗಳು; ಮಾಡೋದೆಲ್ಲ ಇಂಥ ಕೆಲಸವೇ ಎಂದ ವೀಕ್ಷಕರು!
ಬಿಗ್ ಬಾಸ್ ಮನೆಗೂ ಕಾಂಟ್ರವರ್ಸಿಗೂ ಒಂದು ನಂಟಿದೆ ಎಂದು ಕಾಣುತ್ತದೆ. ಯಾವುದೇ ಭಾಷೆಯ ಕಾಂಟ್ರವರ್ಸಿ ತಗೊಂಡರೂ ಅಲ್ಲೊಂದು ವಿವಾದ ಇದ್ದೇ ಇರುತ್ತದೆ.
ಬಿಗ್ ಬಾಸ್ ಮನೆಗೂ ಕಾಂಟ್ರವರ್ಸಿಗೂ ಒಂದು ನಂಟಿದೆ ಎಂದು ಕಾಣುತ್ತದೆ. ಯಾವುದೇ ಭಾಷೆಯ ಕಾಂಟ್ರವರ್ಸಿ ತಗೊಂಡರೂ ಅಲ್ಲೊಂದು ವಿವಾದ ಇದ್ದೇ ಇರುತ್ತದೆ.
ಬಿಗ್ ಬಾಸ್ ಮನೆಯಲ್ಲಿ ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಮಾಡಿಕೊಳ್ತಿದ್ದ ರಜತ್ ದಲಾಲ್, ಆಸಿಮ್ ರಿಯಾಜ್ ಅವರು ಮತ್ತೊಂದು ವಿವಾದ ಸೃಷ್ಟಿ ಮಾಡಿಕೊಂಡಿದ್ದಾರೆ. ಇವರಿಬ್ಬರು ಬೇರೆ ಬೇರೆ ಸೀಸನ್‌ಗಳಲ್ಲಿ ಭಾಗವಹಿಸಿದ್ದರು ಎನ್ನೋದು ಖುಷಿಯ ವಿಷಯ.
ಇತ್ತೀಚೆಗೆ ಪ್ರಮೋಶನಲ್ ಇವೆಂವ್‌ವೊಂದರಲ್ಲಿ ಇವರಿಬ್ಬರು ಭಾಗಿಯಾಗಿದ್ದರು. ಆ ವೇಳೆ ರಜತ್, ಅಸಿಮ್ ನಡುವೆ ಮಾತಿನ ಚಕಮಕಿ ನಡೆದಿದೆ.
ಮಾತು ಮಿತಿ ಮೀರಿ ಹೊಡೆದುಕೊಳ್ಳುವ ಮಟ್ಟಿಗೆ ಹೋಗಿದೆ, ಇವರು ಯಾಕೆ ಹೀಗೆ ಮಾಡಿದ್ದಾರೆ ಎನ್ನೋದು ಇನ್ನೂ ರಿವೀಲ್ ಆಗಿಲ್ಲ.
ಈ ವೇಳೆ ಕ್ರಿಕೆಟಿಗ ಶಿಖರ್ ಧವನ್ ಕೂಡ ಇದ್ದರು. ಈ ಜಗಳವನ್ನು ತಡೆಯಲು ಪ್ರಯತ್ನಪಟ್ಟರೂ ಪ್ರಯೋಜನ ಆಗಿಲ್ಲ. ಇನ್ನು ನಟಿ ರುಬಿನಾ ದಿಲಕ್ ಕೂಡ ಇಲ್ಲಿದ್ದರು. ಈ ಡ್ರಾಮಾ ನೋಡಿ ರುಬಿನಾ ಬೇಸರ ಮಾಡಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿದ್ದು, ಇವರಿಬ್ಬರ ಬಗ್ಗೆ ಸಿಕ್ಕಾಪಟ್ಟೆ ನೆಗೆಟಿವ್ ಪ್ರತಿಕ್ರಿಯೆ ವ್ಯಕ್ತವಾಗಿದೆ.