Small Screen

ವೈಷ್ಣವ್ ಸಹೋದರಿ ವಿಧಿ

ಲಕ್ಷ್ಮೀ ಬಾರಮ್ಮ ಸೀರಿಯಲ್ ನೋಡುವವರು ನೀವಾಗಿದ್ರೆ ಇದರಲ್ಲಿ ವೈಷ್ಣವ್ ಸಹೋದರಿ ವಿಧಿ ಪಾತ್ರ ಮಾಡೋರು ಗೊತ್ತೆ ಇದೆ ಅಲ್ವಾ? ಅವರೇ ಲಾವಣ್ಯಾ ಹೀರೆಮಠ್. (Dr. Lavanya Hiremath)

Image credits: social media

ದುರಹಂಕಾರಿ ಹುಡುಗಿ ವಿಧಿ

ಶ್ರೀಮಂತ ಮನೆಯ ಶ್ರೀಮಂತಿಕೆಯ ಮದ ಏರಿರೋ ದುರಹಂಕಾರಿ ಹುಡುಗಿ ವಿಧಿ ಪಾತ್ರಕ್ಕೆ ಲಾವಣ್ಯಾ ಜೀವ ತುಂಬುತ್ತಿದ್ದಾರೆ. ಇವರ ಪಾತ್ರ ನೋಡಿದ್ರೆ ಯಾರಿಗಾದ್ರೂ ಕೋಪ ಬರಬಹುದು.

Image credits: social media

ಉರಿ ಉರಿ ಹಾರೋ ವಿಧಿ

ಬಡವರ ಮನೆಯ ಹುಡುಗಿ ಲಕ್ಷ್ಮಿಯನ್ನು ಕಂಡ್ರೆ ಕೆಂಡ ಮೈಮೇಲೆ ಬಿದ್ದವರಂತೆ ಮಾಡುವ ವಿಧಿಯನ್ನು ಕಂಡ್ರೆನೇ ಎಲ್ಲರಿಗೂ ಕೆಟ್ಟ ಕೋಪ ಬರುತ್ತೆ. 

Image credits: social media

ಲಾವಣ್ಯಾ ಹೀರೆಮಠ್

ವಿಧಿ ರಿಯಲ್ ಲೈಫ್ ಬಗ್ಗೆ ಹೇಳೋದಾದ್ರೆ, ಲಾವಣ್ಯಾ ಹುಟ್ಟಿ ಬೆಳೆದದ್ದು, ರಾಯಚೂರಿನಲ್ಲಿ, ಮೆಡಿಕಲ್ ಓದಿದ್ದು ಬಾಗಲಕೋಟೆಯಲ್ಲಿ, ಡೆಂಟಿಸ್ಟ್ ಆಗಿ ಕೂಡ ಕೆಲಸ ಮಾಡುತ್ತಿದ್ದಾರೆ.

Image credits: social media

ಡೆಂಟಿಸ್ಟ್

ಬೆಂಗಳೂರಿನಲ್ಲಿ ಕೋರಮಂಗಲದಲ್ಲಿರುವ ಕ್ಲಿನಿಕ್‌ವೊಂದರಲ್ಲಿ ಲಾವಣ್ಯಾ ಡೆಂಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ನಟನೆ ಕೂಡ ಮಾಡ್ತಾರೆ ಇವರು.

Image credits: social media

ನಟನೆ ಅಂದ್ರೆ ಪ್ಯಾಷನ್

ಸೀರಿಯಲ್‌ನಲ್ಲಿ ಇರೋವಷ್ಟು ಕೆಟ್ಟವಳು ನಾನಲ್ಲ, ಒಳ್ಳೆಯವರು, ಕೋಪ ಬರುತ್ತೆ, ಆದರೆ ವಿಧಿ ತರ ಕೋಪ ಬರಲ್ಲ ಎನ್ನುವ ಇವರಿಗೆ ನಟನೆ ಅಂದ್ರೆ ಪ್ಯಾಷನ್ ಅಂತೆ. 

Image credits: social media

ಸ್ಟೈಲಿಶ್ ಲಾವಣ್ಯ

ಸೀರಿಯಲ್ ನಲ್ಲಿ ಇರುವಂತೆ ಫ್ಯಾಷನ್ ಬಗ್ಗೆ ತುಂಬಾ ಒಲವು ತೋರಿಸುವ ಇವರ ಸೋಶಿಯಲ್ ಮೀಡಿಯಾ ಪ್ರೊಫೈಲ್ ನೋಡಿದ್ರೆ ಇವರ ಫ್ಯಾಷನ್ ಸೆನ್ಸ್ ಬಗ್ಗೆ ತಿಳಿಯುತ್ತೆ. 

Image credits: social media

ಮೊದಲ ಸೀರಿಯಲ್ ನನ್ನರಸಿ ರಾಧೆ

ಲಾವಣ್ಯಾ ಅವರರಿಗೆ ಇದು ಮೊದಲ ಸೀರಿಯಲ್ ಅಲ್ಲ, 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಗೆಸ್ಟ್ ರೋಲ್ ಆಗಿ ಕಾಣಿಸಿಕೊಂಡಿದ್ರು,  'ಮಜಾ ಟಾಕೀಸ್' ಶೋನಲ್ಲಿ ಕೂಡ ಲಾವಣ್ಯಾ ಭಾಗವಹಿಸಿದ್ದರು.

Image credits: social media

ಸಿನಿಮಾದಲ್ಲೂ ಮಿಂಚಿದ ನಟಿ

ಅಷ್ಟೇ ಅಲ್ಲ, ಸಿನಿಮಾರಂಗದಲ್ಲೂ ಮಿಂಚುತ್ತಿರುವ ಲಾವಣ್ಯ, ನವೀನ್ ಶಂಕರ್ ಜೊತೆ 'ಹೊಂದಿಸಿ ಬರೆಯಿರಿ' ಸಿನಿಮಾದಲ್ಲಿ ನಟಿಸಿದ್ದಾರೆ.  ಇನ್ನೂ ಹೆಚ್ಚಿನ ಅವಕಾಶಗಳು ಸಿಗಲಿ ಎಂದು ಸಹ ಕಾಯುತ್ತಿದ್ದಾರೆ. 

Image credits: social media

ಸೋಶಿಯಾ ಮೀಡಿಯಾದಲ್ಲಿ ಆಕ್ಟೀವ್

ಲಾವಣ್ಯ ಸೆಟ್‌ನಲ್ಲಿ ಸದಾ ತಮ್ಮ ಸಹ ನಟ-ನಟಿಯರ ಜೊತೆಗೆ ರೀಲ್ಸ್ ಗೆ ಹೆಜ್ಜೆ ಹಾಕುತ್ತಾ ವಿಡೀಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. 

Image credits: social media

Mothers Day Special: ಮಮತೆಯ ತಾಯಿಯೊಂದಿಗೆ ನೆಚ್ಚಿನ ತಾರೆಯರು

ಮಾಲ್ಡೀವ್ಸ್: ಮಗನ ಜೊತೆ ಶ್ವೇತ, ಸಂತೂರ್ ಮಮ್ಮಿ ಎಂದ ನೆಟ್ಟಿಗರು

ಬಿಕಿನಿ ಧರಿಸಿ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ ಗೀತಾ ಸೀರಿಯಲ್ ವಿಲನ್

ಡಬ್ಬೂ ರತ್ನಾನಿ ಕ್ಯಾಮರಾಗಾಗಿ ಹಾಟ್ ಆದ ಸಾನ್ಯಾ: ನೆಟ್ಟಿಗರ ತರಾಟೆ