ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಕಲ್ಯಾಣಿ ಪಾತ್ರದಲ್ಲಿ ನಟಿಸುತ್ತಿರುವ ದಿವ್ಯಶ್ರೀ ಸುಳ್ಯ ಅವರು ಈಗ ಮಗಳನ್ನು ಏಕಾಂಗಿಯಾಗಿ ಸಾಕುತ್ತಿದ್ದಾರೆ. ಗಂಡನ ಅಕ್ರಮ ಸಂಬಂಧಕ್ಕೆ ಬೇಸರಗೊಂಡು ಡಿವೋರ್ಸ್ ತಗೊಂಡೆ ಎಂದು ಅವರು ನ್ಯೂಸೋ ನ್ಯೂಸು ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ನನಗೆ ಕಲೆಯಲ್ಲಿ ಆಸಕ್ತಿ ಇತ್ತು. ನಾನು ಲವ್ ಮಾಡಿ ಮದುವೆಯಾದೆ, ನಿನ್ನ ಕಲೆಗೆ ಬೆಂಬಲ ಕೊಡ್ತೀನಿ ಎಂದು ಮಾತು ಕೊಟ್ಟಿದ್ದ ವ್ಯಕ್ತಿ, ಮದುವೆ ಆದ್ಮೇಲೆ ಬೆಂಬಲ ಕೊಡಲಿಲ್ಲ. ನಾನು ಮದುವೆಯಾದ ವ್ಯಕ್ತಿ ಕೂಡ ಕಲೆಯಲ್ಲಿದ್ದವರು. ನನಗೆ ಆ ವ್ಯಕ್ತಿ ಹೇಳಿದ್ದೆಲ್ಲವೂ ಸುಳ್ಳು ಎಂದು ಒಂದು ವಾರಕ್ಕೆ ಗೊತ್ತಾಯಿತು” ಎಂದು ದಿವ್ಯಶ್ರೀ ಸುಳ್ಯ ಹೇಳಿದ್ದಾರೆ.
24
ಮಾಜಿ ಗಂಡನಿಗೆ ಪಾಸ್‌ಪೋರ್ಟ್ ಇರಲಿಲ್ಲ
“ನಾನು ಬೇರೆ ದೇಶಕ್ಕೆ ಹೋಗ್ತೀನಿ, ಬೇರೆ ದೇಶದಲ್ಲಿ ಚಂಡೆ ಕಲಿಸಬಹುದು ಎಂದು ಆ ವ್ಯಕ್ತಿ ಹೇಳಿದ್ದರು. ಮದುವೆ ಆದ್ಮೇಲೆ ಅವನಿಗೆ ಪಾಸ್‌ಪೋರ್ಟ್ ಕೂಡ ಇಲ್ಲ ಎನ್ನೋದು ಆಮೇಲೆ ಗೊತ್ತಾಯ್ತು. ಆಸ್ತಿ ಬೇಕಾಗಿಲ್ಲ, ಆ ವ್ಯಕ್ತಿ ನನಗೆ ಬೆಂಬಲ ಕೊಡ್ತಾರೆ ಎನ್ನುವ ಕಾರಣಕ್ಕೆ ನಾನು ಮದುವೆ ಆದೆ. ಮದುವೆಯಾದ ಒಂದೇ ತಿಂಗಳಿಗೆ ಕೆಲಸಕ್ಕೆ ಹೋಗಲು ರೆಡಿಯಾದೆ. ಮದುವೆಯಾಗಿ ಒಂದು ವರ್ಷಕ್ಕೆ ಮಗಳು ಹುಟ್ಟಿದಳು, ನಾನು ಕೆಲಸ ಮಾಡಿಕೊಂಡು ನಾನು ಇಡೀ ಮನೆಯನ್ನು ಸಾಕುತ್ತಿದ್ದೆ” ಎಂದು ನಟಿ ದಿವ್ಯಶ್ರೀ ಸುಳ್ಯ ಹೇಳಿದ್ದಾರೆ.
34
ಅಕ್ರಮ ಸಂಬಂಧ ಇದೆ ಅಂತ ಗೊತ್ತಾಯ್ತು
“ಹೆಣ್ಣು ಎಲ್ಲವನ್ನು ಸಹಿಸಿಕೊಳ್ತಾಳೆ, ಆದರೆ ಗಂಡ ಇನ್ನೊಂದು ಸಂಬಂಧ ಇಟ್ಟುಕೊಂಡರೆ ಸಹಿಸಿಕೊಳ್ಳೋಕೆ ಆಗೋದಿಲ್ಲ. ಇನ್ನೊಂದು ಹೆಣ್ಣು ನಮ್ಮ ಮನೆಗೆ ಬಂದು ಜಗಳ ಮಾಡಿದಾಗ, ಅವಳ ಮನೆಯವರನ್ನು ಕರೆಸಿ ಮಾತನಾಡಿದ್ದೇನೆ. ಎಷ್ಟೇ ಬಾರಿ ನಾನು ಈ ಬಗ್ಗೆ ಗಂಡನನ್ನು ಪ್ರಶ್ನೆ ಮಾಡಿದಾಗ, ಆಗ ಆ ವ್ಯಕ್ತಿ ಬೇರೆಯವರ ಮಾತು ಕೇಳಿಕೊಂಡು ನನ್ನ ಮೇಲೆ ಆರೋಪ ಮಾಡ್ತೀಯಾ ಎಂದು ಉತ್ತರ ಕೊಟ್ಟು ಸಮಜಾಯಿಷಿ ಕೊಡುತ್ತಿದ್ದರು” ಎಂದು ದಿವ್ಯಶ್ರೀ ಹೇಳಿದ್ದಾರೆ.
“ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಲು ಒಂದೂವರೆ ವರ್ಷ ಟೈಮ್ ಬೇಕಾಗಿದೆ. ನನ್ನ ಸ್ನೇಹಿತರ ಮನೆಯಲ್ಲಿ ನಾನಿದ್ದೆ. ಅವರ ಮೇಲೆ ನನ್ನ ಋಣ ಇದೆ. ಆಮೇಲೆ ನಾನು ಬಾಡಿಗೆ ಮನೆ ಮಾಡಿಕೊಂಡೆ. 1BHK ಮನೆಯಲ್ಲಿದ್ದರೂ ಕೂಡ ಮನೆ ಚಿಕ್ಕದಾಗಿತ್ತು. ಬಾಡಿಗೆ ಮನೆ ಕೇಳಲು ಹೋದಾಗ ಗಂಡ ಇಲ್ಲ ಎಂದಿದ್ದಕ್ಕೆ ಮನೆಯೇ ಕೊಡುತ್ತಿರಲಿಲ್ಲ” ಎಂದು ದಿವ್ಯಶ್ರೀ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.