ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? : Actress Bhavya Gowda

Published : Jun 13, 2026, 01:29 PM IST

Karna Serial Actress Bhavya Gowda: ಕರ್ಣ ಧಾರಾವಾಹಿ ನಟಿ ಭವ್ಯಾ ಗೌಡ, ಬಣ್ಣದ ಲೋಕದ ಹಿಂದಿನ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮದೇ ಆದ ಯುಟ್ಯೂಬ್‌ ಚಾನೆಲ್‌ನಲ್ಲಿ ಕರ್ಣ ಧಾರಾವಾಹಿ BTS ವಿಡಿಯೋ ಶೇರ್‌ ಮಾಡಿಕೊಂಡು, ಪೀರಿಯಡ್ಸ್‌ ದಿನ ಮಹಿಳಾ ಕಲಾವಿದರಿಗೆ ಆಗುವ ಕಷ್ಟದ ಬಗ್ಗೆ ಮಾತನಾಡಿದ್ದಾರೆ. 

PREV
14
ಲೈಟ್‌ ಬಾಕ್ಸ್‌ ತಗೊಂಡು ಹೋಗಬೇಕು!

ಕಲಾವಿದರ ಜೀವನ ತುಂಬ ಚೆನ್ನಾಗಿರುತ್ತದೆ, ಚೆನ್ನಾಗಿ ದುಡಿಯುತ್ತೀರಾ, ದುಡ್ಡು ಮಾಡುತ್ತೀರಾ ಎಂದು ಕೆಲವರು ಹೇಳುತ್ತಾರೆ. ನಮ್ಮ ಕಷ್ಟವನ್ನು ಯಾರಿಗೆ ಹೇಳಿಕೊಳ್ಳಬೇಕು? ಬೆಳಿಗ್ಗೆಯಿಂದ ಬಿಸಿಲಿನಲ್ಲಿ ಶೂಟ್‌ ಆಯ್ತು, ಈಗ ರೇನ್‌ಶೂಟ್‌ ಇದೆ. ಶೂಟ್‌ ಸ್ಥಳ ಎಲ್ಲೇ ಇದ್ದರೂ ಕೂಡ ಲೈಟ್‌ ಬಾಯ್ಸ್‌ ಮಾತ್ರ 15, 20kg ತೂಕ ಇರುವ ಲೈಟ್ ಬಾಕ್ಸ್‌ ತಗೊಂಡು ಹೋಗುತ್ತಾರೆ ಎಂದು ಭವ್ಯಾ ಗೌಡ ಹೇಳಿದ್ದಾರೆ.

24
ಎಷ್ಟೇ ಕೆಲಸ ಮಾಡಿದ್ರೂ ಒಂದೇ ದಿನದ ಹಣ ಕೊಡ್ತಾರೆ

ಎಲ್ಲೋ ಮೂಲೆಯಲ್ಲಿ ಕೂತ್ಕೊಂಡು ಕಾಮೆಂಟ್‌ ಹಾಕಬೇಡಿ, ಜೀವನ ಮಾಡಲು ಎಷ್ಟು ಹಣ ಬೇಕೋ ಅಷ್ಟು ಹಣ ಬರುತ್ತಿರುತ್ತದೆ. ಎಷ್ಟೇ ಕಾಲ್‌ಶೀಟ್‌ ಮಾಡಿದರೂ ಕೂಡ, 24 ಗಂಟೆ ಅಥವಾ 48 ಗಂಟೆ ಕೆಲಸ ಮಾಡಿದರೂ ಕೂಡ ಒಂದು ದಿನಕ್ಕೆ ಇಷ್ಟು ಸಂಭಾವನೆ ಎಂದು ಮಾತನಾಡಿರುತ್ತೀರಿ. ಅಷ್ಟೇ ಅವರು ಹಣವನ್ನು ಕೊಡ್ತಾರೆ. ಎಕ್ಸ್ಟ್ರಾ ಹಣವನ್ನು ಯಾರಿಗೂ ಕೊಡೋದಿಲ್ಲ ಎಂದು ಭವ್ಯಾ ಗೌಡ ಹೇಳಿದ್ದಾರೆ.

34
ಪೀರಿಯಡ್ಸ್‌ ಇದ್ರೆ ಏನ್‌ ಮಾಡೋದು?

ಬೇರೆ ಬೇರೆ ಕಂಪೆನಿಗಳಲ್ಲಿ ಹೆಣ್ಣು ಮಕ್ಕಳಿಗೆ ಪೀರಿಯಡ್ಸ್‌ ಆದರೆ ರಜೆ ಕೊಡುತ್ತಾರೆ. ಕೆಲವೊಮ್ಮೆ ಶೂಟಿಂಗ್‌ ಮಾಡುವಾಗ ನಮಗೆ ಪೀರಿಯಡ್ಸ್‌ ಆದರೆ ತುಂಬ ಕಷ್ಟ ಆಗುತ್ತದೆ. ದೇವಸ್ಥಾನದಲ್ಲಿ ಶೂಟಿಂಗ್‌ ಇದ್ದಾಗ ಪೀರಿಯಡ್ಸ್‌ ಆಗಿದ್ದರೆ ಏನು ಮಾಡೋದು? ಪೀರಿಯಡ್ಸ್ ಆದರೂ ಕೂಡ ಕೆಲಸವೇ ದೇವರು ಎಂದುಕೊಳ್ಳೋದಾ? ಎಂಬ ಭಾವನೆ ಇರುತ್ತದೆ. ಕೆಲವೊಮ್ಮೆ ಪೀರಿಯಡ್ಸ್‌ ಇದ್ದರೂ ಬನ್ನಿ ಅಂತ ಹೇಳಿದಾಗ ದೇವರಿಗೆ ಕೈ ಮುಗಿದು ಕಾಪಾಡಪ್ಪ ಎಂದು ಶೂಟಿಂಗ್ಸ್‌ನಲ್ಲಿ ಭಾಗವಹಿಸುತ್ತೇವೆ ಎಂದು ನಟಿ ಭವ್ಯಾ ಗೌಡ ಮನವಿ ಮಾಡಿದ್ದಾರೆ.

44
ಉರುಳು ಸೇವೆ, ರೈನ್‌ ಎಫೆಕ್ಟ್‌ ಸೀನ್‌ ಇರುತ್ತೆ

ರೈನ್‌ ಎಫೆಕ್ಟ್‌ ಇದ್ದಾಗ, ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವುದು, ಕಿರುಚೋ ಸೀನ್‌ ಇದ್ದಾಗ ಏನು ಮಾಡೋದು? ಬೇರೆ ಕಡೆ ಪೀರಿಯಡ್ಸ್‌ ಆದರೆ ರಜೆ ಸಿಕ್ಕಂತೆ, ನಮಗೆ ಕೂಡ ರಜೆಗಳು ಸಿಗಬೇಕು. ಒಬ್ಬೊಬ್ಬರಿಗೆ ಒಂದೊಂದು ಟೈಮ್‌ಗೆ ಪೀರಿಯಡ್ಸ್ ಆಗುತ್ತದೆ,‌ ತಿಂಗಳಿನಲ್ಲಿ ಇದೇ ಟೈಮ್‌ಗೆ ಪೀರಿಯಡ್ಸ್ ಆಗುತ್ತದೆ ಎಂದು ಹೇಳೋಕೆ ಆಗೋದಿಲ್ಲ. ಪೀರಿಯಡ್ಸ್‌ ಆದಾಗ ಹಿಂದಿನ ದಿನ ಹೇಳಿ ಶೂಟ್‌ ಕ್ಯಾನ್ಸಲ್‌ ಮಾಡೋ ಥರ ಇರಬೇಕು ಎಂದು ನಟಿ ಭವ್ಯಾ ಗೌಡ ಅವರು ಮನವಿ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories