ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್‌ನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕವೇ ಮನೆಮಾತಾಗಿರುವ ಕಿರಣ್ ರಾಜ್, ಇದೀಗ ಮತ್ತೊಮ್ಮೆ ಕನ್ನಡಿಗರ ಹೃದಯ ಗೆಲ್ಲುವ ಕೆಲಸ ಮಾಡಿದ್ದಾರೆ. ಇದರ ಜತೆಗೆ ನಿಮ್ಮಿಂದು ಒಂದು ಸಹಾಯ ಕೇಳಿದ್ದಾರೆ. ಏನದು? ನೋಡೋಣ ಬನ್ನಿ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್ ಟಿಆರ್‌ಪಿ ಸಾಮಾನ್ಯವಾಗಿ ಟಾಪಲ್ಲಿರುತ್ತದೆ. ಮಹಾಭಾರತದ ಕರ್ಣನಂತೆ ತ್ಯಾಗಮಯಿಯಾಗಿರುವ ಕರ್ಣನೊಬ್ಬ ಅನಾಥ. ಹೆಂಗರುಳು ಅವನಿಗೆ. ಪ್ರತಿಯೊಬ್ಬರ ಕಷ್ಟಗಳಿಗೂ ಸ್ಪಂದಿಸುವ ಈತ ಒಬ್ಬ ಗೈನಾಕಾಲಜಿಸ್ಟ್. ಅದೆಷ್ಟೋ ಪ್ರಾಣಗಳನ್ನು ಉಳಿಸಿದ ಮಹಾನುಭವ. ಇವನಿಗೋ ತನ್ನ ಸ್ಟುಡೆಂಟ್ ನಿಧಿ ಮೇಲೆ ಪ್ರೀತಿ. ಆದರೆ, ಯಾವುದೋ ಸಂದರ್ಭಕ್ಕೆ ಕಟ್ಟುಬಿದ್ದು, ನಿಧಿ ಅಕ್ಕ ನಿತ್ಯಾ ಜೊತೆ ಮದುವೆಯಾಗುವಂತಾಗಿದೆ.
26
ಕರ್ಣನಿಗೆ ಸಾಕು ತಂದೆ, ಸೋದರತ್ತೆಯೇ ವಿಲನ್
ಸರಿ ನಿತ್ಯಾಗೆ ಅವಳು ಇಷ್ಟು ಪಟ್ಟವನೊಂದಿಗೆ ಮದ್ವೆ ಮಾಡಿಸಲು ಪಟ್ಟ ಪ್ರಯತ್ನವೂ ವಿಫಲವಾಗಿದೆ. ವೀಕ್ಷಕರಿಗೋ ನಿಧಿ-ಕರ್ಣ ಒಂದಾಗಬೇಕು ಅಂತಾಸೆ. ಆದರೆ, ಅದ್ಯಾಕೋ ಸದ್ಯದಲ್ಲಿ ಆಗೋ ತರವಿಲ್ಲ. ಇದೀಗ ಅನಿವಾರ್ಯವಾಗಿ ನಿತ್ಯಾ ಹೊಟ್ಟೆಯಲ್ಲಿರುವ ಮಗು ಕರ್ಣನದ್ದೇ ಎಂದು ಒಪ್ಪಿಕೊಳ್ಳುವಂತಾಗಿದೆ. ಸಾಲದಿದ್ದಕ್ಕೆ ಎಲ್ಲಾ ಸೀರಿಯಲ್ಸ್‌ನಲ್ಲಿರುವಂತೆ ಇಲ್ಲಿಯೂ ಕರ್ಣನ ಸಾಕು ತಂದೆ, ಸೋದರತ್ತೆ ಹಾಗೂ ತಮ್ಮನೇ ಇವನಿಗೆ ದೊಡ್ಡ ವಿಲನ್.
36
ಕರ್ಣನಂಥವರು ನಿಜ ಜೀವನದಲ್ಲಿ ಇರ್ತಾರಾ?
ನಿಜ ಜೀವನದಲ್ಲಿ ಕರ್ಣನಂಥ ಕ್ಯಾರೆಕ್ಟರ್ಸ್ ಸಿಗೋದು ಸಾಧ್ಯವೇ ಇಲ್ಲ ಬಿಡಿ. ಆದರೆ, ಕರ್ಣನ ಪಾತ್ರ ಮಾಡಿರುವ ಕಿರಣ್ ರಾಜ್‌ಗೆ ಸೋಷಿಯಲ್ ಮೀಡಿಯಾ ಪೇಜಿನಲ್ಲಿ ಹೊಗಳಿಕೆಯ ಹೂಮಳೆಗೆರೆಯುತ್ತಾರೆ ಫ್ಯಾನ್ಸ್. ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುವ ಕಿರಣ್ ರಾಜ್ ಕೊರೋನಾ ಟೈಮಲ್ಲಂತೂ ಸಾಕಷ್ಟು ಜನರಿಗೆ ಊಟ ಸಿಗುವಂತೆ ಮಾಡಿದ್ದರು. ಈ ಹಿಂದೆ ಕಲರ್ಸ್ ಕನ್ನಡದಲ್ಲಿ ಹರ್ಷ ಎನ್ನುವ ಪಾತ್ರ ಮಾಡುತ್ತಿದ್ದ ಕನ್ನಡತಿ ಸೀರಿಯಲ್ ಸಹ ಮನೆ ಮಾತಾಗಿತ್ತು. ಅಲ್ಲಿಂದಲೂ ಕಿರಣ್ ಬಗ್ಗೆ ಕನ್ನಡ ಸೀರಿಯಲ್ ಅಭಿಮಾನಿಗಳಿಗೆ ಸ್ಪೆಷಲ್ ಅಫೆಕ್ಷನ್.
ಇದೀಗ ಮತ್ತೊಂದು ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದು, ಮತ್ತೊಮ್ಮೆ ಕಿರಣ್ ರಾಜ್ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಇರೋದು ಒಂದೇ ಹೃದಯ, ಅದೆಷ್ಟು ಸಲ ಕದಿಯುತ್ತೀರಾ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಅಷ್ಟಕ್ಕೂ ಆ ಫೋಟೋದಲ್ಲಿ ಅಂತದ್ದೇನಿದೆ. ಎಲ್ಲಿಗೋ ಹೋದಾಗ ಈ ನಟನಿಗೆ ಅಭಿಮಾನಿಯೊಬ್ಬರು ಸಿಕ್ಕಿದ್ದಾರೆ. ಅವರಿಗೆ ತಮ್ಮ ಪ್ರೀತಿಯ ನಟನ ಜೊತೆಯೊಂದು ಸೆಲ್ಫೀ ತೆಗೆದುಕೊಳ್ಳಲು ಆಸೆಯಾಗಿದೆ. ಆದರೆ ಅವರು ಮೊಬೈಲ್ ಬಿಟ್ಟು ಬಂದಿದ್ದರು. ತಮ್ಮ ಮೊಬೈಲ್‌ನಲ್ಲಿ ಸೆಲ್ಫಿಯೊಂದನ್ನು ತೆಗೆದುಕೊಂಡ ಕಿರಣ್, ತಮ್ಮ ಇನ್‌ಸ್ಟಾಗ್ರಾಂ ಪೇಜಿನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಮಹಿಳೆಗಿದ್ದಆಸೆಯ ವಿಷಯವನ್ನು ಹಂಚಿಕೊಂಡಿದ್ದಾರೆ. ಯಾರಾದ್ರೂ ಫಾಲೋಯರ್ಸ್‌ನಲ್ಲಿ ಈ ಮಹಿಳೆಯ ಗೊತ್ತಿದ್ದರೆ ಅವರೊಟ್ಟಿಗೆ ಆ ಫೋಟೋ ಶೇರ್ ಮಾಡಿಕೊಳ್ಳಿ ಅಂತಾನೂ ಹೇಳಿದ್ದಾರೆ.
56
ಕನ್ನಡತಿ ಸೀರಿಯಲ್‌ನಲ್ಲಿ ಹರ್ಷ ಪಾತ್ರ ಮಾಡಿದ ಕಿರಣ್ ರಾಜ್
ಕನ್ನಡತಿಯಲ್ಲಿ ಹರ್ಷ ಎನ್ನುವ ದೊಡ್ಡ ಬ್ಯುಸಿನೆಸ್‌ಮ್ಯಾನ್ ಪಾತ್ರದಲ್ಲಿ ಕಿರಣ್ ರಾಜ್ ನಟಿಸಿದ್ದರು. ಅವನಿಗೆ ಮಧ್ಯಮ ವರ್ಗದ, ಹಳ್ಳಿ ಹುಡುಗಿ ಭುವಿ ಪ್ರಿಯತಮೆ. ಇವರಿಬ್ಬರ ಕಚಗುಳಿ ಇಡುವಂತೆ ರೊಮ್ಯಾಂಟಿಕ್ ಸೀನ್ಸ್ ಯುವಕರ ಮನ ಗೆದ್ದಿತ್ತು. ಸದಾ ಕನ್ನಡದಲ್ಲಿಯೇ ಮಾತ್ರ ಮಾತನಾಡುವ ಭುವಿ ಅಂದ್ರೆ ಕನ್ನಡಿಗರಿಗೆ ಅಚ್ಚುಮೆಚ್ಚು. ಅವರಿಬ್ಬರ ಪ್ರಣಯ, ಮಾತುಕತೆ ನೋಡುಗರಿಗೆ ಅಚ್ಚುಮೆಚ್ಚಾಗಿತ್ತು. ಅವರಿಬ್ಬರ ಜೋಡಿ ಹವಿ ಎಂದೇ ನೋಡುಗರ ಮನಸ್ಸಲ್ಲಿ ಅಚ್ಚೊತ್ತಿತ್ತು.
66
ಸೀರಿಯಲ್ ನಟರೆಂದರೆ ಜನರಿಗೆ ಅಫೆಕ್ಷನ್:
ಸೀರಿಯಲ್ ನಟ, ನಟಿಯರು ಪ್ರತಿ ದಿನವೂ ವೀಕ್ಷಕರಿಗೆ ಸೀರಿಯಲ್ ಮೂಲಕ ಕಾಣ ಸಿಗುತ್ತಾರೆ. ಧಾರಾವಾಹಿಯಲ್ಲಿ ಕೆಟ್ಟ ರೋಲ್ ಮಾಡಿದವರಿಗೆ ಸಾರ್ವಜನಿಕವಾಗಿ ಕಂಡಾಗ ಹೊಡೆದ ಘಟನೆಗಳೂ ನಡೆದಿವೆ. ಒಳ್ಳೇ ರೋಲ್ ಮಾಡಿದಾಗ ದೇವರೆಂದು ಪೂಜಿಸುವ ಪರಿಪಾಠವೂ ಇದೆ. ಅದಕ್ಕೆ ಬೆಳ್ಳಿ ತೆರೆಗಿಂತಲೂ, ಕಿರುತೆರೆಯ ನಟ, ನಟಿಯರು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗುತ್ತಾರೆ. ಅದರಲ್ಲಿಯೂ ಕಿರಣ್ ರಾಜ್ ನಟಿಸಿರುವ ಕರ್ಣನಂಥ ಪಾತ್ರವಿದ್ದರೆ ಕೇಳಬೇಕಾ? ವೈಯಕ್ತಿಕವಾಗಿಯೂ ಅನೇಕ ಸಮಾಜಿ ಮುಖಿ ಕೆಲಸಗಳಲ್ಲಿ ತೊಡಿಗಿಕೊಂಡಿರುವ ಈ ನಟನ ಬಗ್ಗೆ ತುಸು ಹೆಚ್ಚೇ ಅಭಿಮಾನಿಗಳು ಪ್ರೀತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.