Karna Serial: ಮದ್ವೆ ಗುಟ್ಟು ತಿಳಿಯುತ್ತಲೇ ಅಪ್ಪನಿಗೇ ಕರ್ಣ ಮುಹೂರ್ತ ಫಿಕ್ಸ್! ವಿಲನ್​ ರಮೇಶ ವಿಲವಿಲ

Published : Jan 23, 2026, 05:40 PM IST

ಕರ್ಣ ಸೀರಿಯಲ್​ನಲ್ಲಿ ಅಜ್ಜಿಯ ಮಾತಿನಿಂದ ಅಪ್ಪ ರಮೇಶನ ನಿಜ ಬಣ್ಣ ಕರ್ಣನಿಗೆ ತಿಳಿದುಬಂದಿದೆ. ತನ್ನ ಪ್ರೀತಿಗೆ ಅಡ್ಡಿಯಾಗಿ ನಿತ್ಯಾಳ ಜೊತೆ ಮದುವೆಗೆ ಅಪ್ಪನೇ ಕಾರಣ ಎಂದು ತಿಳಿದ ಕರ್ಣ, ಈಗ ಮನೆಯ ಎಲ್ಲಾ ಕೆಲಸಗಳನ್ನು ರಮೇಶನ ಕೈಯಲ್ಲೇ ಮಾಡಿಸುವ ಮೂಲಕ ತಕ್ಕ ಪಾಠ ಕಲಿಸುತ್ತಿದ್ದಾನೆ.

PREV
16
ಮುಖವಾಡ ಬಯಲು

ಕರ್ಣ ಸೀರಿಯಲ್​ನಲ್ಲಿ ಸದ್ಯ ರಮೇಶನ ಮುಖವಾಡ ಕೊನೆಗೂ ಕರ್ಣನ ಎದುರು ಬಯಲಾಗಿದೆ. ಅಷ್ಟಕ್ಕೂ ಇದು ಬಯಲಾದದ್ದು ಅಜ್ಜಿಯಿಂದಾಗಿ. ಅಜ್ಜಿಗೆ ಐಸ್​ಕ್ರೀಮ್​ ಕೊಡಿಸಲು ಹೋದ ಕರ್ಣನಿಗೆ ಅಜ್ಜಿ ಶಾಕ್​ ಕೊಟ್ಟಿದ್ದಾಳೆ.

26
ಅಜ್ಜಿಯ ಮಾತು

ಅಷ್ಟಕ್ಕೂ ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗು ಕರ್ಣನದ್ದೇ ಎಂದು ಎಲ್ಲರೂ ತಿಳಿದುಕೊಂಡಿದ್ದಾರೆ. ಇದರ ಬಗ್ಗೆ ಮಾತನಾಡುತ್ತಾ ಅಜ್ಜಿ, ನಿಮ್ಮ ಅಪ್ಪ ರಮೇಶ ಎಷ್ಟು ಖುಷಿ ಪಟ್ಟುಕೊಂಡ ಗೊತ್ತಾ? ಅಷ್ಟಕ್ಕೂ ನಿನ್ನ ಮತ್ತು ನಿತ್ಯಾ ಮದುವೆಯ ಬಗ್ಗೆ ಹೇಳಿದ್ದೇ ಅವನು ಎಂದಾಗ ಕರ್ಣನಿಗೆ ಕರೆಂಟ್​ ಶಾಕ್​ ಹೊಡೆಯಿತು.

36
ಕರ್ಣ ಶಾಕ್​

ಕರ್ಣ ನಿಧಿಯನ್ನು ಲವ್​ ಮಾಡ್ತಿರೋ ವಿಷಯ ರಮೇಶ್​ಗೆ ಗೊತ್ತಿತ್ತು. ನಿಧಿಯನ್ನು ದೂರ ಮಾಡಬೇಡ ಎಂದು ಕರ್ಣನಿಗೆ ಬುದ್ಧಿಮಾತು ಹೇಳಿದ್ದ ರಮೇಶ. ಇದೀಗ ಅಜ್ಜಿಯ ಮಾತು ಕೇಳಿ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನೋದು ಕರ್ಣನಿಗೆ ತಿಳಿಯಿತು.

46
ಎಲ್ಲವನ್ನೂ ಕಕ್ಕಿದ ರಮೇಶ

ಇದನ್ನು ತಿಳಿಯಬೇಕು ಎಂದು ಮನೆಗೆ ಬಂದಾಗ, ರಮೇಶ ಕುಡಿದ ಅಮಲಿನಲ್ಲಿ, ಎಲ್ಲಾ ವಿಷಯವನ್ನೂ ಕಕ್ಕುತ್ತಿದ್ದ. ಇದರಿಂದ ಅವನು ಎರಡು ತಲೆಯ ಹಾವು ಎನ್ನೋದು ಕರ್ಣನಿಗೆ ತಿಳಿಯಿತು. ಇನ್ನೇನಿದ್ದರೂ ದಂಡಂ ದಶ ಗುಣಂ ಎಂದಿದ್ದಾನೆ ಕರ್ಣ.

56
ಅಪ್ಪನ ಕೈಯಲ್ಲಿ ಕೆಲ್ಸ

ಇದೀಗ ಅಪ್ಪನಿಗೆ ನಿನಗೆ ಹೆಣ್ಣುಮಕ್ಕಳು ಎಂದ್ರೆ ಪ್ರೀತಿ ಅಲ್ವಾ, ಎಲ್ಲಾಮನೆಕೆಲಸ ನಾವೇ ಮಾಡೋಣ ಎಂದು ಎಲ್ಲಾ ಕೆಲಸಗಳನ್ನೂ ಅಪ್ಪನ ಕೈಯಲ್ಲಿ ಮಾಡಿಸುತ್ತಿದ್ದಾನೆ. ಒಂದಾದ ಮೇಲೊಂದು ಕೆಲಸ ಮಾಡಿ ರಮೇಶ ಸುಸ್ತಾಗಿದ್ದಾನೆ.

66
ಪಾತ್ರೆ ತೊಳಿ ಎಂದ ಕರ್ಣ

ಈಗ ಬಿಡದ ಕರ್ಣ, ನಾನು ಚಪಾತಿ ಮಾಡ್ತೇನೆ, ನೀನು ಪಾತ್ರೆ ತೊಳಿ ಎಂದು ರಮೇಶ್​ಗೆ ಹೇಳಿದ್ದು, ಇದರಿಂದ ಮನೆಮಂದಿಯೆಲ್ಲಾ ಕಂಗಾಲಾಗಿ ಹೋಗಿದ್ದಾರೆ. ಅಜ್ಜಿಯಿಂದ ಸತ್ಯ ತಿಳಿದ ಮೇಲೆ ಒಂಥರಾ ಮಜಾ ಬರ್ತಿದೆ ಸೀರಿಯಲ್​ ಎನ್ನುತ್ತಿದ್ದಾರೆ ವೀಕ್ಷಕರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories