Karna Serial: ಆ ಎಪಿಸೋಡ್‌ ನೋಡಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದೋರ ಫೋನ್‌ ಬಂತು: Kiran Raj Interview

Published : Oct 23, 2025, 12:45 PM IST

Actor Kiran Raj Karna Serial: ಕರ್ಣ ತುಂಬ ತಾಳ್ಮೆಯಿಂದ ಇರುವ ಪಾತ್ರವಾಗಿದೆ. ಮನೆಯಲ್ಲಿ ಯಾರು ಎಷ್ಟೇ ಅವಮಾನ ಮಾಡಿದರೂ, ಕಷ್ಟ ಕೊಟ್ಟರೂ ಕೂಡ ಅದನ್ನು ಸಹಿಸಿಕೊಂಡು ಇರುವ ವ್ಯಕ್ತಿತ್ವ ಇದಾಗಿದೆ. ಈಗ ಈ ಪಾತ್ರದ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ. 

PREV
15
Asianet Suvarna News ಜೊತೆ ಸಂದರ್ಶನ

ಕರ್ಣ ತುಂಬ ತಾಳ್ಮೆಯಿಂದ ಇರುವ ಪಾತ್ರವಾಗಿದೆ. ಮನೆಯಲ್ಲಿ ಯಾರು ಎಷ್ಟೇ ಅವಮಾನ ಮಾಡಿದರೂ, ಕಷ್ಟ ಕೊಟ್ಟರೂ ಕೂಡ ಅದನ್ನು ಸಹಿಸಿಕೊಂಡು ಇರುವ ವ್ಯಕ್ತಿತ್ವ ಇದಾಗಿದೆ. ಈಗ ಈ ಪಾತ್ರದ ಬಗ್ಗೆ Asianet Suvarna News ಜೊತೆಗೆ ಮಾತನಾಡಿದ್ದಾರೆ.

25
ವೀಕ್ಷಕರು ಕನೆಕ್ಟ್‌ ಆಗ್ತಿದ್ದಾರೆ

“ಹಬ್ಬ ಅಂದ ತಕ್ಷಣ ಸರ್ಪ್ರೈಸ್ ಅಂತ ಒಂದು ಕಾಯ್ತಾ ಇರುತ್ತೇವೆ, ಗಿಫ್ಟ್‌ಗೋಸ್ಕರ ಕಾಯ್ತಾ ಇರ್ತೀವಿ. ಇದೊಂದು ಗಿಫ್ಟ್ ಅಂತಾನೆ ಹೇಳಬಹುದು. ಇವತ್ತಿನ ದಿನಕ್ಕೆ ಜನರು, ಕನೆಕ್ಟ್ ಆಗೋದು ತುಂಬಾ ವಿರಳ. ಒಬ್ಬರ ಎಮೋಷನ್ಸ್ ಆಗಲೀ, ನಮ್ಮ ಜೊತೆಯಲ್ಲಿ ಇರೋರ ಎಮೋಷನ್ಸ್‌ಗೆ ಕನೆಕ್ಟ್ ಆಗೋದು ತುಂಬ ಕಷ್ಟ. ಅಂತದ್ರಲ್ಲಿ ನಮ್ಮನ್ನ ಕರ್ಣ ಧಾರಾವಾಹಿ ಮೂಲಕ ತೆರೆ ಮೇಲೆ ನೋಡಿ ಕನೆಕ್ಟ್‌ ಆಗ್ತಿರೋದು ಖುಷಿ ಆಗಿದೆ” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ.

35
ಕರ್ಣನ ಥರ ಇರೋರು ಇದ್ದಾರೆ

“ಕರ್ಣನ ಥರ ನಿಜಕ್ಕೂ ನಮ್ಮ ಸಮಾಜದಲ್ಲಿ ಈ ಥರ ವ್ಯಕ್ತಿತ್ವ ಇರುವ ಹುಡುಗರು ಇರುತ್ತಾರೆ. ಯಾರೋ ಮನೆಗೆ ಬರ್ತಾರೆ ಅಂದರೆ ಬಸ್‌ಸ್ಟ್ಯಾಂಡ್‌ಗೆ ಹೋಗಿ ಕರೆದುಕೊಂಡು ಹೋಗೋದು, ಆಮೇಲೆ ತರಕಾರಿ ತರೋದು ಮಾಡುತ್ತಿರುತ್ತಾರೆ. ಆದರೆ ಯಾರಿಗೂ ಈ ಥರ ಜೀವನ ಸಿಗಬಾರದು. ಎಷ್ಟು ಅಂತ ಸಹಿಸಿಕೊಳ್ಳೋದು, ಅದಕ್ಕೂ ಲಿಮಿಟ್‌ ಇರುತ್ತದೆ” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ. 

45
ಮ್ಯಾಜಿಕ್‌ ಆಗತ್ತೆ, ನಂಬಿಕೆ ಇದೆ

“ನನಗೆ ಒಂದಿಷ್ಟು ಮೆಸೇಜ್‌ಗಳು ಬರುತ್ತವೆ. ಆಸ್ಪತ್ರೆಯಲ್ಲಿ ಹುಷಾರಿಲ್ಲದವರು ಕೂಡ ನನಗೆ ಫೋನ್‌ ಮಾಡಿ ಮಾತನಾಡಬೇಕು ಎಂದು ಹೇಳುತ್ತಾರೆ. ಆಗ ನಾನು ಏನು ಮಾಡಿದೀನಿ ಅಂತ ಅನಿಸುವುದು. ನಮ್ಮನ್ನು ಇಷ್ಟಪಡಬೇಕು ಅಂತ ಬಯಸಿದಾಗ ಆಗೋದಿಲ್ಲ, ಆದರೆ ಕೆಲವೊಮ್ಮೆ ಮ್ಯಾಜಿಕ್ ಆಗುತ್ತದೆ” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ. 

55
ಲವ್‌ ಎಂದರೇನು?

“ಒಬ್ಬರ ಲೈಫ್‌ನಲ್ಲಿದ್ದಾಗ ನೆಮ್ಮದಿಯಿದ್ದರೆ ಅದೇ ಲವ್‌, ನೆಮ್ಮದಿಯಿಲ್ಲ ಅಂದ್ರೆ ಅದು ಲವ್‌ ಅಲ್ಲ, ಶಾಂತಿ ಇರಬೇಕು” ಎಂದು ಕಿರಣ್‌ ರಾಜ್‌ ಹೇಳಿದ್ದಾರೆ.

Read more Photos on
click me!

Recommended Stories