ಕಾನೂನು ಸಂಕಷ್ಟಗಳ ಮಧ್ಯೆ ಭವ್ಯಾ ಗೌಡ ಸಮೇತ 'Karna Serial' ಬಂದಾಯ್ತು! ಫಸ್ಟ್‌ ಎಪಿಸೋಡ್‌ ಪ್ರಸಾರವಾಯ್ತು!

Published : Jul 02, 2025, 04:38 PM ISTUpdated : Jul 02, 2025, 05:15 PM IST

ಕರ್ಣ ಧಾರಾವಾಹಿ ಯಾವಾಗ ಪ್ರಸಾರ ಆಗಲಿದೆ ಎಂಬ ಪ್ರಶ್ನೆ ಇರುವಾಗಲೇ ಇದರ ಮೊದಲ ಎಪಿಸೋಡ್‌ ಪ್ರಸಾರ ಆಗಿದೆ. ಭವ್ಯಾ ಗೌಡ, ಕಿರಣ್‌ ರಾಜ್‌ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

PREV
17
ಧಾರಾವಾಹಿ ಪ್ರಸಾರ ತಡವಾಯ್ತು..!

2025 ಜೂನ್‌ 16ರಂದು ರಾತ್ರಿ 8 ಗಂಟೆಗೆ ಕರ್ಣ ಧಾರಾವಾಹಿ ಪ್ರಸಾರ ಆಗಬೇಕಿತ್ತು. ಕಾನೂನಿನ ತೊಡಕಿನಿಂದ ಧಾರಾವಾಹಿ ಪ್ರಸಾರವನ್ನು ಮುಂದೂಡಲಾಗಿದೆ. ಹೌದು, ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಕೂಡ ನಟಿಸುತ್ತಿದ್ದಾರೆ. ಇಲ್ಲೇ ಒಂದು ಸಮಸ್ಯೆ ಸೃಷ್ಟಿ ಆಗಿತ್ತು.

27
ಪ್ರಸಾರ ತಡವಾಗಿದ್ದು ಯಾಕೆ?

ಕಲರ್ಸ್‌ ಕನ್ನಡ ವಾಹಿನಿಯ ಬಿಗ್‌ ಬಾಸ್‌ ಶೋನಲ್ಲಿ ಭವ್ಯಾ ಗೌಡ ಭಾಗವಹಿಸಿದ್ದರು. ಈ ಶೋ ಮಾಡಿ ಒಂದಿಷ್ಟು ತಿಂಗಳುಗಳ ಕಾಲ ಬೇರೆ ವಾಹಿನಿಯ ಶೋನಲ್ಲಿ ಕಾಣಿಸಿಕೊಳ್ಳುವಂತಿಲ್ಲ ಎಂದು ಒಪ್ಪಂದ ಆಗಿದೆ. ಈ ಒಪ್ಪಂದಕ್ಕೂ ಮುಂಚೆಯೇ ಭವ್ಯಾ ಗೌಡ ಅವರು ಜೀ ಕನ್ನಡ ವಾಹಿನಿಯ ʼಕರ್ಣʼ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಹೀಗಾಗಿ ಕಲರ್ಸ್‌ ಕನ್ನಡ ವಾಹಿನಿಯು ನೋಟೀಸ್‌ ನೀಡಿದೆ ಎನ್ನಲಾಗಿದೆ. ಹೀಗಾಗಿ ಆ ಒಪ್ಪಂದ ಮುಗಿಯುವ ತನಕ ʼಕರ್ಣʼ ಧಾರಾವಾಹಿಯಲ್ಲಿನ ಭವ್ಯಾ ಗೌಡ ಪಾತ್ರ ಪ್ರಸಾರ ಆಗುವ ಹಾಗಿರಲಿಲ್ಲ. ಈಗ ಒಪ್ಪಂದ ಮುಗಿದಿದೆಯಂತೆ. 

37
ಟಿವಿಯಲ್ಲಿ ಬರೋದು ಪಕ್ಕಾ!

ಬರೋದು ಸ್ವಲ್ಪ ಲೇಟ್‌ ಆಗಬಹುದು, ಆದರೆ ಕರ್ಣ ಬರೋದಂತೂ ಪಕ್ಕಾ ಎಂದು ಜೀ ಕನ್ನಡ ವಾಹಿನಿಯು ಹೇಳಿದೆ. ಅಂತೆಯೇ ಈಗ ಕರ್ಣ ಪ್ರಸಾರ ಆಗೋದು ಫಿಕ್ಸ್‌ ಆಗಿದೆ. 

47
zee5 ಆಪ್‌ನಲ್ಲಿ ಪ್ರಸಾರ!

ಈಗ ಕರ್ಣ ಧಾರಾವಾಹಿಯ ಮೊದಲ ಎಪಿಸೋಡ್‌ zee5 ಆಪ್‌ನಲ್ಲಿ ಪ್ರಸಾರ ಆಗಲಿದೆ. ನಿತ್ಯವೂ ಈಗ zee5 ಆಪ್‌ನಲ್ಲಿ ಎಪಿಸೋಡ್‌ ಪ್ರಸಾರ ಆಗಲಿದೆ. ಒಟ್ಟಿನಲ್ಲಿ ಕರ್ಣನಿಗಿದ್ದ ತೊಡಕು ಮುಗಿದಿದೆ. 

57
ಯಾವಾಗ ಟಿವಿಯಲ್ಲಿ ಬರುತ್ತೆ?

ಕರ್ಣ ಧಾರಾವಾಹಿಯು zee5 ಆಪ್‌ನಲ್ಲಿ ಪ್ರಸಾರ ಆದಬಳಿಕ ಟಿವಿಯಲ್ಲಿ ಪ್ರಸಾರ ಆಗಲಿದೆ. ಈ ಬಗ್ಗೆ ವಾಹಿನಿಯು ಮಾಹಿತಿ ಹಂಚಿಕೊಂಡಿದ್ದು, ಜುಲೈ 3ರಿಂದ ಧಾರಾವಾಹಿ ಪ್ರಸಾರ ಆಗಲಿದೆ. 

67
ಕರ್ಣ ಧಾರಾವಾಹಿ ಮೊದಲ ಎಪಿಸೋಡ್‌ ಹೇಗಿತ್ತು?

ಚಿಕ್ಕಪ್ಪ-ಚಿಕ್ಕಮ್ಮ, ಅಪ್ಪ-ಅಮ್ಮ, ರಾಧಿಕಾ, ಅಜ್ಜಿ ಸೇರಿ ಇಡೀ ಮನೆಯವರಿಗೆ ಏನು ತಿಂಡಿ ಬೇಕೋ ಅದನ್ನೆಲ್ಲ ಕರ್ಣ ರೆಡಿ ಮಾಡಿ ಅಂತ ಮನೆ ಕೆಲಸದವರಿಗೆ ಹೇಳುತ್ತಾನೆ. ರಂಗೋಲಿ ಹಾಕೋದು ತಪ್ಪಾಗಿದ್ರೆ ಸರಿ ಮಾಡೋದರಿಂದ ಹಿಡಿದು, ಸರ್ಜರಿ ಮಾಡೋವರೆಗೆ ಕರ್ಣ ಎಲ್ಲ ಕೆಲಸಗಳನ್ನು ಮಾಡುತ್ತಾನೆ. ಹೀಗಿದ್ದರೂ ಅವನನ್ನು ಎಲ್ಲರೂ ನಿಕೃಷ್ಟವಾಗಿ ನೋಡುತ್ತಾರೆ. ಕರ್ಣ ಪಾತ್ರದಲ್ಲಿ ಕಿರಣ್‌ ರಾಜ್‌ ಅಭಿನಯಿಸುತ್ತಿದ್ದಾರೆ. ನಮ್ರತಾ ಗೌಡ-ಭವ್ಯಾ ಗೌಡ ಕಾಂಬಿನೇಶನ್‌, ಇನ್ನೊಂದು ಕಡೆ ಕಿರಣ್‌ ರಾಜ್‌ ಪಾತ್ರ ನೋಡೋದೇ ಒಂದು ಖುಷಿ. ನಾನು ಮದುವೆ ಆಗೋದಿಲ್ಲ ಎಂದು ತಂದೆಗೆ ಕರ್ಣ ಮಾತುಕೊಟ್ಟಿದ್ದರೆ, ನಾನು ಮದುವೆ ಆದರೆ ಕರ್ಣನನ್ನೇ ಎಂದು ನಿಧಿ ಕಾಯುತ್ತಿದ್ದಾಳೆ. ನಿತ್ಯಾಗೆ ಅಡುಗೆ ಮಾಡೋಕೆ ಬರೋದಿಲ್ಲ, ಆದರೆ ನಿಧಿ ಮಾತ್ರ ಎಲ್ಲದರಲ್ಲೂ ಮುಂದೆ. ಕರ್ಣನಿಗೆ ಪ್ರಪೋಸ್‌ ಮಾಡೋಕೆ ನಿಧಿ ಕಾಯುತ್ತಿದ್ದಾಳೆ. ತಂಗಿಗೆ ಪ್ರಪೋಸ್‌ ಮಾಡೋಕೆ ನಿತ್ಯಾ ಸಲಹೆ ಕೊಡ್ತಾಳೆ. ಹಾಗಾದರೆ ಮುಂದೆ ಏನಾಗುವುದು?

77
ಪಾತ್ರಧಾರಿಗಳು ಯಾರು? ಯಾರು?

ನಿಧಿ ಪಾತ್ರದಲ್ಲಿ ಭವ್ಯಾ ಗೌಡ, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ ನಟಿಸುತ್ತಿದ್ದಾರೆ. 

ಇನ್ನು ಟಿಎಸ್‌ ನಾಗಾಭರಣ, ಆಶಾಲತಾ, ಗಾಯಿತ್ರಿ ಪ್ರಭಾಕರ್‌ ಕೂಡ ಈ ಧಾರಾವಾಹಿಯಲ್ಲಿ ನಟಿಸ್ತಿದ್ದಾರೆ.

Read more Photos on
click me!

Recommended Stories