ಇವತ್ತು ಲಕ್ಷ್ಮೀ ನಿವಾಸ ಸೀರಿಯಲ್ ನೋಡೋರಿಗೆ 'ಸಂತೋಷ' ಆಗುತ್ತೆ!

Published : Jul 02, 2025, 02:57 PM IST

ಲಕ್ಷ್ಮೀ ನಿವಾಸದಲ್ಲಿ ಇಂದು ಹೈಡ್ರಾಮ. ತಾಯಿ ಲಕ್ಷ್ಮೀಯ ತವರು ಮನೆಯ ಆಸ್ತಿಯ ಮೇಲೆ ಕಣ್ಣು ಹಾಕಿದ ಸಂತೋಷ್, ತಾಯಿಗೆ ತಿಳಿಯದಂತೆ ಸಹಿ ಹಾಕಿಸಿಕೊಂಡು ಮಾವನಿಗೆ ನೋಟಿಸ್ ಕಳುಹಿಸಿದ್ದ. ಇದನ್ನು ತಿಳಿದ ಶ್ರೀನಿವಾಸ್, ಮಗ ಸಂತೋಷ್‌ಗೆ ಏಟು ನೀಡಿದ್ದಾರೆ.

PREV
18

ಲಕ್ಷ್ಮೀ ನಿವಾಸ ಕನ್ನಡದ ಟಾಪ್ ಧಾರಾವಾಹಿ ಆಗಿದೆ. ಆದ್ರೆ ಇಂದಿನ ಸಂಚಿಕೆ ವೀಕ್ಷಕರಿಗೆ ಸಂತೋಷವನ್ನುಂಟು ಮಾಡಲಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸಂತೋಷ್ ಮತ್ತು ಹರೀಶ್ ತಂದೆ-ತಾಯಿಯನ್ನು ಹಂಚಿಕೊಂಡಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಮೊದಲ ಬಾರಿಗೆ ಹಿರಿಯ ಮಗ ಸಂತೋಷ್‌ನ ಕಪಾಳಕ್ಕೆ ಏಟು ನೀಡಿದ್ದಾರೆ.

28

ತಾಯಿ ಲಕ್ಷ್ಮೀ ಕೋಟ್ಯಧೀಶ ಕುಟುಂಬದಿಂದ ಬಂದಿರುವ ವಿಷಯ ಸಂತೋಷ್‌ಗೆ ಗೊತ್ತಾಗಿದೆ. ಮೊದಲೇ ಕಾಸಿಗೂ ಲೆಕ್ಕಾಚಾರ ಹಾಕುವ ಸಂತೋಷ್‌ನಿಗೆ ತಾಯಿ ತವರಿನ ಆಸ್ತಿ ಮೇಲೆ ಕಣ್ಣು ಹಾಕಿದ್ದನು. ತಮ್ಮ ಹರೀಶ್‌ ಜೊತೆಗೂಡಿ ಆಸ್ತಿ ಲಪಟಾಯಿಸಲು ಸಂತೋಷ್ ಪ್ಲಾನ್ ಮಾಡಿದ್ದನು.

38

ಅಜ್ಜಿಯ ವಿಮೆ ಹಣದ ಅರ್ಜಿ ಎಂದು ಹೇಳಿ, ಲಾಯರ್ ನೋಟಿಸ್‌ಗೆ ತಾಯಿ ಲಕ್ಷ್ಮೀಯಿಂದ ಸಹಿ ಮಾಡಿಸಿಕೊಂಡಿದ್ದನು. ಈ ನೋಟಿಸ್‌ನ್ನು ಮಾವ ನರಸಿಂಹನಿಗೆ ಕಳುಹಿಸಿದ್ದನು. ಇತ್ತೀಚೆಗಷ್ಟೇ ತಂಗಿ ಲಕ್ಷ್ಮೀ ಮೇಲಿನ ದ್ವೇಷ ಕಡಿಮೆಯಾಗಿತ್ತು. ತಂಗಿಯನ್ನು ಭೇಟಿಯಾಗುವ ಹೋಗಿದ್ದ ವೇಳೆ ಲಕ್ಷ್ಮೀ ಮೇಲೆ ಸರಗಳ್ಳರು ಅಟ್ಯಾಕ್ ಮಾಡಿದ್ದರು.

48

ಪ್ರಜ್ಞೆ ಕಳೆದುಕೊಂಡಿದ್ದ ಲಕ್ಷ್ಮೀಯನ್ನು ನರಸಿಂಹ ಮತ್ತು ಲಲಿತಾ ಕಾರ್‌ನಲ್ಲಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅಲ್ಲಿಗೆ ಬಂದ ವೆಂಕಿ ಕೈಯಲ್ಲಿ ಹಣದ ಬ್ಯಾಗ್ ನೀಡಿ ಹಿಂದಿರುಗಿದ್ದರು. ಆದ್ರೆ ಸ್ವಾಭಿಮಾನಿ ಲಕ್ಷ್ಮೀ ಹಣದ ಬ್ಯಾಗ್‌ನ್ನು ಚೆಲುವಿ-ವೆಂಕಿ ಮೂಲಕ ಹಿಂದಿರುಗಿಸಿದ್ದಳು.

58

ಲಕ್ಷ್ಮೀ ಮತ್ತು ಶ್ರೀನಿವಾಸ್ ಇಬ್ಬರು ಸ್ವಾಭಿಮಾನಿಗಳು. ಆದ್ರೆ ಇವರ ಮಕ್ಕಳಾದ ಹರೀಶ್ ಮತ್ತು ಸಂತೋಷ್‌ಗೆ ಸ್ವಾಭಿಮಾನವೇ ಇಲ್ಲ. ತಾಯಿ ಬೇಡ ಅಂತ ಬಿಟ್ಟು ಬಂದಿರುವ ಆಸ್ತಿ ಮೇಲೆ ಹರೀಶ್-ಸಂತೋಷ್‌ ಕಣ್ಣಾಕಿದ್ದಾರೆ. ತಾಯಿಗೆ ತಿಳಿಯದಂತೆ ಸಹಿ ಹಾಕಿಸಿಕೊಂಡು ಮಾವನಿಗೆ ನೋಟಿಸ್ ಕಳುಹಿಸಿದ್ದಾರೆ. ಆಸ್ತಿ ಕೇಳಿ ತಂಗಿ ನೋಟಿಸ್ ಕಳುಹಿಸಿದ್ದಾಳೆ ಎಂದು ತಿಳಿದು ನರಸಿಂಹ ಕೋಪಗೊಂಡಿದ್ದಾನೆ.

68

ತಾಯಿ ಬಳಿ ಸಹಿ ಹಾಕಿಸಿಕೊಂಡು ಆಸ್ತಿ ಕೇಳಿ ನೋಟಿಸ್ ಕಳುಹಿಸಿರುವ ವಿಷಯವನ್ನು ಪತ್ನಿ ಸಿಂಚನಾ ಮುಂದೆ ಹರೀಶ್ ಹೇಳುತ್ತಿರೋದನ್ನು ಲಕ್ಷ್ಮೀ ಕೇಳಿಸಿಕೊಂಡಿದ್ದಾಳೆ. ಕೂಡಲೇ ಈ ವಿಷಯವನ್ನು ಗಂಡನಿಗೆ ತಿಳಿಸಿದ್ದಾಳೆ.

78

ಮಗನ ನೀಚ ಬುದ್ಧಿಗೆ ಕೆಂಡವಾದ ಶ್ರೀನಿವಾಸ್, ಮನೆಗೆ ಬಂದು ಮಗ ಸಂತೋಷ್ ಕೆನ್ನೆಗೆ ಏಟು ನೀಡಿದ್ದಾನೆ. ಗುಳಿಗೆ ಸಿದ್ದ ಒಳಗೊಳಗೆ ಮೆದ್ದ ಅನ್ನೋ ವ್ಯಕ್ತಿ ನೀನು. ಯಾಕೆ ನೋಟಿಸ್ ಕಳುಹಿಸಿದ್ದೀಯಾ ಎಂದು ಮಗನನ್ನು ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.

88

ಈ ಸೀರಿಯಲ್ ಪ್ರೋಮೋ ನೋಡಿದ ಲಕ್ಷ್ಮೀ ನಿವಾಸ, ಯಾವಾಗ್ಲೋ ಹೊಡಿಬೇಕಿತ್ತು. ತುಂಬಾ ಲೇಟ್ ಆಗಿ ಹೋಡಿದ್ರಿ ಇರಲಿ. ಇವತ್ತು ಲಕ್ಷ್ಮಿ ನಿವಾಸ ನೋಡುವವರಿಗೆಲ್ಲಾ ಒಂಥರಾ ಸಂತೋಷವಾಗತ್ತೆ, ಮನಸಿಗೆ ಹಾಯ್ ಅನ್ನಿಸತ್ತೆ. ಈ ದೃಶ್ಯಕ್ಕಾಗಿ ಎಲ್ಲರೂ ಕಾಯುತ್ತಿದ್ರು. ತಾಳ್ಮೆಗೂ ಒಂದು ಮಿತಿ ಇರತ್ತೆ ಅನ್ನೋದು ಇದಕ್ಕೆ ಎಂದು ಕಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories