ಬಿಗ್ ಬಾಸ್ ಸೀಸನ್ 12ರ ಅಂತಿಮ 'ಕಿಚ್ಚನ ಚಪ್ಪಾಳೆ' ಗಿಟ್ಟಿಸಿದ ಅಶ್ವಿನಿ ಗೌಡ, ಧ್ರುವಂತ್‌; ಕಾರಣವೇನು ಗೊತ್ತಾ?

Published : Jan 10, 2026, 03:27 PM IST

ಬಿಗ್ ಬಾಸ್ ಕನ್ನಡ ಸೀಸನ್ 12ರ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಕಿಚ್ಚ ಸುದೀಪ್ ಘೋಷಿಸಿದ್ದಾರೆ. ಎರಡು ಗುಂಪಾಗಿ ಮನೆಯಲ್ಲಿ ಆಟವಾಡಿದವರ ನಡುವೆ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ಚಪ್ಪಾಳೆ ಕೊಡುವುದಕ್ಕೆ ಕಾರಣವೇನು ನೀವೇ ನೋಡಿ..

PREV
17
ಅಸ್ತಿತ್ವ ಉಳಿಸಿಕೊಂಡವರಿಗೆ ಚಪ್ಪಾಳೆ

ಬಿಗ್ ಬಾಸ್ ಕನ್ನಡ ಸೀಸನ್ 12ರ ಗ್ರ್ಯಾಂಡ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ, ಮನೆಯಲ್ಲಿ ಕಿಚ್ಚ ಸುದೀಪ್ ಅವರು ಈ ಸೀಸನ್‌ನ ಕೊನೆಯ ಮತ್ತು ಅತ್ಯಂತ ಮಹತ್ವದ 'ಕಿಚ್ಚನ ಚಪ್ಪಾಳೆ'ಯನ್ನು ಘೋಷಿಸಿದ್ದಾರೆ. ಮನೆಯೊಳಗಿನ ಬಹುಸಂಖ್ಯಾತ ಗುಂಪಿನ ವಿರುದ್ಧ ಏಕಾಂಗಿಯಾಗಿ ಹೋರಾಡಿ ತಮ್ಮ ಅಸ್ತಿತ್ವ ಉಳಿಸಿಕೊಂಡ ಅಶ್ವಿನಿ ಗೌಡ ಮತ್ತು ಧ್ರುವಂತ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

27
6 ವರ್ಸಸ್ 2

ಮನೆಯಲ್ಲಿ ಭಾರಿ ಸಂಘರ್ಷ ಬಿಗ್ ಬಾಸ್ ಮನೆಯಲ್ಲಿ ಅಂತಿಮ ವಾರದಲ್ಲಿ ಉಳಿದಿದ್ದ ಎಂಟು ಸ್ಪರ್ಧಿಗಳು ಅಕ್ಷರಶಃ ಎರಡು ತಂಡಗಳಾಗಿ ವಿಭಜನೆಯಾಗಿದ್ದರು. ಅಶ್ವಿನಿ ಗೌಡ ಮತ್ತು ಧ್ರುವಂತ್ ಕೇವಲ ಇಬ್ಬರೇ ಒಂದು ತಂಡವಾಗಿ ಗುರುತಿಸಿಕೊಂಡಿದ್ದರು.

37
ಯಾರಿಗೂ ಇಷ್ಟವಾಗುತ್ತಿರಲಿಲ್ಲ

ಇನ್ನೊಂದೆಡೆ ಗಿಲ್ಲಿ ನಟ, ಕಾವ್ಯಾ ಶೈವ, ಮ್ಯೂಟೆಂಟ್ ರಘು, ರಾಶಿಕಾ, ಧನುಷ್ ಗೌಡ ಮತ್ತು ರಕ್ಷಿತಾ ಶೆಟ್ಟಿ ಸೇರಿ ಆರು ಜನರ ಒಂದು ಬಲಿಷ್ಠ ಗುಂಪಾಗಿದ್ದರು. ಇದಕ್ಕೆ ಕಾರಣ ಹೇಳಿದ ಗಿಲ್ಲಿ ನಟ, ಅವರನ್ನು ಕಂಡರೆ ಮನೆಯವರಿಗೆ ಯಾರಿಗೂ ಇಷ್ಟವಾಗುತ್ತಿರಲಿಲ್ಲ ಎಂದು ಸಮಜಾಯಿಷಿ ಕೊಡಲು ಮುಂದಾಗುತ್ತಾನೆ. ಆದರೆ, ಅದನ್ನು ಕಿಚ್ಚ ಸುದೀಪ್ ಒಪ್ಪಿಕೊಳ್ಳುವುದಿಲ್ಲ.

47
ಅಪಮಾನಗಳ ನಡುವೆ ಆತ್ಮಗೌರವದ ಆಟ

ಮನೆಯಲ್ಲಿ ಆರು ಜನರ ಗುಂಪು ಪ್ರತಿ ಬಾರಿಯೂ ತಮ್ಮನ್ನು ಕೆಳಗಿಟ್ಟು ಮಾತನಾಡುತ್ತಿದ್ದರು ಮತ್ತು ಹೀಯಾಳಿಸುತ್ತಿದ್ದರು ಎಂಬ ಗಂಭೀರ ಆರೋಪವನ್ನು ಅಶ್ವಿನಿ ಗೌಡ ಕಿಚ್ಚನ ಮುಂದೆ ವ್ಯಕ್ತಪಡಿಸಿದರು. "ಅವರ ಗುಂಪಿನಲ್ಲಿ ಸೇರಿ ಅವಮಾನಿಸಿಕೊಳ್ಳುವುದಕ್ಕಿಂತ ದೂರ ಉಳಿದು ನನ್ನ ವ್ಯಕ್ತಿತ್ವ ಉಳಿಸಿಕೊಳ್ಳುವುದು ನನಗೆ ಮುಖ್ಯವಾಗಿತ್ತು," ಎಂದು ಅವರು ತಿಳಿಸಿದರು.

57
ನನ್ನ ಆಟವೇನು ಎಂಬುದು ನನಗೆ ಗೊತ್ತು

ಇದಕ್ಕೆ ಧ್ರುವಂತ್ ಕೂಡ ಧ್ವನಿಗೂಡಿಸಿ, ‘ನನ್ನ ಆಟವೇನು ಎಂಬುದು ನನಗೆ ಗೊತ್ತು, ಈ ಮನೆಗೆ ನನ್ನಿಂದ ಏನು ಕೊಡಬೇಕೋ ಅದನ್ನು ಕೊಡುತ್ತಿದ್ದೇನೆ. ಅವರ ಹಂಗು ನಮಗೆ ಬೇಕಿಲ್ಲ' ಎಂದು ತಮ್ಮ ಗಟ್ಟಿತನವನ್ನು ಪ್ರದರ್ಶಿಸಿದರು.

67
ಸುದೀಪ್ ಮೆಚ್ಚುಗೆಯ ಮಾತು

ಇಡೀ ವಾರದ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ ಸುದೀಪ್ ಅವರು ಈ ಇಬ್ಬರ ಹೋರಾಟವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. "ನನಗೆ ಈ ವಾರ ಕಂಡಿದ್ದು ಒಬ್ಬ ವ್ಯಕ್ತಿಯ ಹಠ ಮತ್ತು ಗುರಿ. ಎಲ್ಲಿ ಅವಮಾನಗಳಾಗುತ್ತವೆಯೋ ಅಲ್ಲಿಯೇ ಹೋರಾಡಿ, ಯಾವ ಬಾಯಿಗಳು ನಿಮ್ಮನ್ನು ತೆಗಳಿದ್ದವೋ ಅದೇ ಬಾಯಿಗಳಿಂದ ಹೊಗಳಿಸಿಕೊಳ್ಳುವುದೇ ನಿಜವಾದ ಗೆಲುವು," ಎಂದು ನುಡಿದರು.

77
ಕೊನೆಯ ಕಿಚ್ಚನ ಚಪ್ಪಾಳೆ

ಈ ಸೀಸನ್‌ನ ಕೊನೆಯ ಕಿಚ್ಚನ ಚಪ್ಪಾಳೆಯನ್ನು ನಾನು ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ನೀಡುತ್ತಿದ್ದೇನೆ' ಎನ್ನುತ್ತಾ ಸುದೀಪ್ ಚಪ್ಪಾಳೆ ತಟ್ಟಿದಾಗ ಇಡೀ ವೇದಿಕೆ ಸಂಭ್ರಮದಿಂದ ಮಿಂಚಿತು. ಈ ಬೆಳವಣಿಗೆಯು ಅಶ್ವಿನಿ ಮತ್ತು ಧ್ರುವಂತ್ ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು, ಫಿನಾಲೆ ರೇಸ್‌ನಲ್ಲಿ ಇವರು ಪ್ರಬಲ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories