ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಅಶ್ವಿನಿ ಗೌಡ, ಧ್ರುವಂತ್ ಒಮ್ಮೆ ಜಗಳ ಆಡುತ್ತಾರೆ, ಇನ್ನೊಮ್ಮೆ ಸ್ನೇಹದಿಂದ ಕೂಡ ಇರುತ್ತಾರೆ. ಅಶ್ವಿನಿ ಅವರ ಬಗ್ಗೆ ಧ್ರುವಂತ್ ಅವರು ಬಿಗ್ ಬಾಸ್ ಕ್ಯಾಮರಾದ ಮುಂದೆ ಬಂದು ಮಾತನಾಡಿದ್ದುಂಟು. ಈಗ ಗಿಲ್ಲಿ ಮುಂದೆ ಮಾತನಾಡಿ ನಗೆಪಾಟಲಿಗೆ ಗುರಿಯಾಗಿದ್ದಾರೆ.
ದೇವರ ಮನೆಯ ಹೂವಿನ ವಿಚಾರವಾಗಿ ಅಶ್ವಿನಿ ಗೌಡ-ಧ್ರುವಂತ್ ನಡುವೆ ಜಗಳ ಆಗಿದೆ. ಧ್ರುವಂತ್ ಅವರು ನಿತ್ಯ ದೇವರಿಗೆ ಪೂಜೆ ಮಾಡಿ, ಕೆಲ ಹೂವನ್ನು ಪಕ್ಕದಲ್ಲಿ ಇಡುತ್ತಿದ್ದರು. ಇನ್ನು ಲಿವಿಂಗ್ ಏರಿಯಾದಲ್ಲಿಟ್ಟ ಹೂವನ್ನು ಅಶ್ವಿನಿ ಗೌಡ ತಗೊಂಡಿದ್ದಾರೆ. ಇದು ಧ್ರುವಂತ್‌ಗೆ ಸಿಟ್ಟು ತರಿಸಿದೆ.
26
ಧ್ರುವಂತ್ ಹೇಳಿದ್ದೇನು?
ಜಗಳ ಆದ ಬಳಿಕ ಧ್ರುವಂತ್ ಅವರು ಗಿಲ್ಲಿ ನಟ, ರಘು ಬಳಿ ಬಂದು ಮಾತನಾಡಿದ್ದಾರೆ. “ಅಶ್ವಿನಿ ಅವರು ಒಬ್ಬರೇ ಅಂತ ಅಂದುಕೊಂಡೆ. ಅಶ್ವಿನಿ ಅವರಿಗೆ ಇದ್ದಕ್ಕಿದ್ದ ಹಾಗೆ ಭಕ್ತಿ ಬರುತ್ತದೆ. ಯಾರೋ ಮಾಡಿಟ್ಟಿರೋದು ತಗೋತಾರೆ, ನಾನು ಬದಿಗಿಟ್ಟ ಹೂವು ತಗೋಬೇಕಿತ್ತು. ಆಟದ ವೇಳೆ ತುಪ್ಪ ಬಳಿಸಿದ್ರು, ಅದು ಹೊಟ್ಟೆ ಉರೀತು. ಎಲ್ಲರ ಸ್ನಾನ ಆದ್ಮೇಲೆ ಬಿಸಿನೀರಿನಲ್ಲಿ ಬಟ್ಟೆ ತೊಳೆದರೆ ಓಕೆ, ಆದರೆ ಹಾಗೆ ಮಾಡೋದಿಲ್ಲ. ಏನೇ ಆದರೂ ಅವರು ಮದರ್ ಎಂದು ಸುಮ್ಮನಿದ್ದೆ, ಎಲ್ಲ ಓಕೆ ಅಲ್ಲ” ಎಂದು ಹೇಳಿದ್ದರು.
36
ನಕ್ಕ ಗಿಲ್ಲಿ ನಟ, ರಘು
ಗಿಲ್ಲಿ ನಟ ಹಾಗೂ ರಘು ಅವರು ಅಶ್ವಿನಿ ಗೌಡ, ಧ್ರುವಂತ್ ಜಗಳವನ್ನು ನೋಡಿ ನಕ್ಕಿದ್ದಾರೆ. ಆ ನಗುವನ್ನು ಅವರು ಧ್ರುವಂತ್‌ಗೆ ಕಾಣದಂತೆ ಮರೆಮಾಚಿದ್ದಾರೆ, ಅಷ್ಟೇ ಅಲ್ಲದೆ ಟಾಸ್ಕ್ ಬಗ್ಗೆ ಇನ್ನೊಂದಿಷ್ಟು ಪ್ರಶ್ನೆ ಮಾಡಿದ್ದಾರೆ. ಧ್ರುವಂತ್ ಇಲ್ಲದಿದ್ದರೆ ಅಶ್ವಿನಿ ಗೌಡಗೆ ರಕ್ಷಿತಾ ಬೆಂಬಲ ಬೇಕು, ಅವರಿಗೆ ಒಬ್ಬರೇ ಇರೋಕೆ ಆಗೋದಿಲ್ಲ ಎಂದು ಗಿಲ್ಲಿ ನಟ ಹೇಳಿದ್ದರು.
ಇದಾದ ಬಳಿಕ ಧ್ರುವಂತ್, ಅಶ್ವಿನಿ ಗೌಡ ಮತ್ತೆ ಒಂದಾಗಿದ್ದಾರೆ, ಟಾಸ್ಕ್ ಆಡಿದ್ದಾರೆ, ಗಿಲ್ಲಿ ವಿರುದ್ಧ ಕೂಡ ಮಾತನಾಡಿಕೊಂಡಿದ್ದರು. ಈ ಬಗ್ಗೆ ಇಡೀ ಮನೆ ಮಾತಾಡಿತ್ತು. ತಮ್ಮ ಜಗಳವನ್ನು ಮನೆಯವರೆಲ್ಲರೂ ಎಂಜಾಯ್ ಮಾಡುತ್ತಾರೆ ಎನ್ನೋದು ಅಶ್ವಿನಿ, ಧ್ರುವಂತ್‌ಗೆ ಗೊತ್ತಾಗಿತ್ತು. ಗಿಲ್ಲಿ ಅವರು ಬೇಕು ಅಂತಲೇ ಕೆದಕೋಕೆ ನೋಡಿದರು ಎನ್ನೋದನ್ನು ಧ್ರುವಂತ್ ಅವರು ಅಶ್ವಿನಿ ಗೌಡ ಬಳಿ ಹೇಳಿಕೊಂಡಿದ್ದಾರೆ.
56
ಕಳಪೆ ಪಟ್ಟ ನೀಡಿದ ಗಿಲ್ಲಿ ನಟ
ಕಳಪೆ ವಿಚಾರದಲ್ಲಿ ಗಿಲ್ಲಿ ನಟ ಅವರು ಧ್ರುವಂತ್ ಅವರಿಗೆ ನೀಡಿದ್ದಾರೆ. “ಟಾಸ್ಕ್ ವಿಚಾರದಲ್ಲಿ ಕೂಡ ಧ್ರುವಂತ್ ಸುಮ್ಮನಿದ್ದರು, ಅಶ್ವಿನಿ ಅವರು ಟಾಸ್ಕ್ ಆಡದೆ, ಬಿಟ್ಟುಕೊಟ್ಟರು. ಸುಮ್ಮನೆ ವಿನ್ ಆಗೋಕೂ, ಪ್ರಯತ್ನಪಡದೆ ವಿನ್ ಆಗೋಕೂ ವ್ಯತ್ಯಾಸ ಇದೆ. ಅಶ್ವಿನಿ ಬಗ್ಗೆ ಮಾತನಾಡಿ ಧ್ರುವಂತ್ ಮತ್ತೆ ಅವರು ಸ್ನೇಹ ಮಾಡಿದರು, ಏನಾದರೂ ಮಾತಾಡಿದರೆ ಅದಿಕ್ಕೆ ನಿಲ್ಲಬೇಕು. ಅಶ್ವಿನಿ ಅವರಿಂದಲೇ ನೀನು ವಿನ್ ಆದೆ. ಹೂವು ಇಟ್ಟಿದೀನಿ, ಭಕ್ತಿ ಬಂದಿರುತ್ತದೆ, ನಾನು ಹೇಳಿದ್ದೆಲ್ಲ ಸುಳ್ಳಾದರೆ ವೀಕೆಂಡ್ ಎಪಿಸೋಡ್‌ನಲ್ಲಿ ವಿಟಿ ಪ್ಲೇ ಆಗಲಿ, ಅಶ್ವಿನಿ ಬಗ್ಗೆ ನಮ್ಮ ಹತ್ರ ಮಾತನಾಡಿ, ಆಮೇಲೆ ಉತ್ತಮ ಪಟ್ಟ ಕೊಡ್ತೀನಿ ಎಂದು ಹೇಳುತ್ತಾರೆ” ಎಂದಿದ್ದಾರೆ.
66
VT ಹಾಕಿ, ಬಿಗ್ ಬಾಸ್
ಯಾರು ಎಷ್ಟೇ ಕ್ಲೋಸ್ ಇರಲಿ, ಏನೇ ಇರಲಿ, ಕ್ಷಣಾರ್ಧಕ್ಕೆ ಬಿಟ್ಟುಕೊಡ್ತೀರಿ. ಧ್ರುವಂತ್ ಮಾತನಾಡಿದ ವಿಡಿಯೋವನ್ನು ಬಿಗ್ ಬಾಸ್ ವಿಟಿ ಹಾಕಿ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.