ಕೌನ್ ಬನೇಗಾ ಕರೋಡ್ಪತಿ 13ನೇ ಸಿಸನ್‌ನಲ್ಲಿ ಇನ್ನೊಬ್ಬ ಸ್ವರ್ಧಿ ಕೋಟ್ಯಾಧಿಪತಿ ಆಗಿ ಹೊರಹೊಮ್ಮಿದ್ದಾರೆ. ಕಳೆದ ಎಪಿಸೋಡ್‌ನಲ್ಲಿ ಗ್ವಾಲಿಯರ್ ನ ಗೀತಾ ಸಿಂಗ್ ಗೌರ್ ಅವರು 1 ಕೋಟಿ ರೂಪಾಯಿ ಗೆದಿದ್ದಾರೆ.ಇವರು ಇದುವರೆಗೆ ಕೆಬಿಸಿ 13ರಲ್ಲಿ ಒಂದು ಕೋಟಿ ರೂಪಾಯಿ ಗೆದ್ದ ಮೂರನೇ ಸ್ಪರ್ಧಿ.
KBC 13 Amitabh Bachchan game show Geeta Singh Gaur becomes third Crorepati
ಅವರು ಕೇವಲ 16 ವರ್ಷದವಳಿದ್ದಾಗ, ಕುಟುಂಬದ ಜವಾಬ್ದಾರಿ ಅವರ ಮೇಲೆ ಬಂದವು. ಆದರೂ ಮನಸ್ಸಿನಲ್ಲಿ ಓದುವ ಉತ್ಸಾಹ ಬಿಡದೆ 30ನೇ ವಯಸ್ಸಿನಲ್ಲಿ LLB ವ್ಯಾಸಂಗ ಮುಗಿಸಿದರು. ಮೊದಲ ಪ್ರಶ್ನೆಯಿಂದ 1 ಕೋಟಿಯ ಪ್ರಶ್ನೆಯವರೆಗೂ ಗೀತಾ ಸಿಂಗ್ ಕೆಬಿಸಿ ಆಟವನ್ನು ಬಹಳ ಬುದ್ಧಿವಂತಿಕೆಯಿಂದ ಆಡಿದರು.
53 ವರ್ಷದ ಗೀತಾ ಸಿಂಗ್ ಗೌರ್ ಗೃಹಿಣಿಯಾಗಿದ್ದು, ತನ್ನ ಮನೆಯ ಆರೈಕೆ ಮತ್ತು ಮಕ್ಕಳನ್ನು ಬೆಳೆಸುವಲ್ಲಿ ತಮ್ಮ ಜೀವನವನ್ನು ಕಳೆದಿದ್ದಾರೆ. ಇದು ತನ್ನ ಜೀವನದ 'ಎರಡನೇ ಇನ್ನಿಂಗ್ಸ್' ಮತ್ತು ಅವರು ಇದನ್ನು ತನಗಾಗಿ ಬದುಕಲು ಬಯಸುತ್ತಾರೆ ಎಂದು ಗೀತಾ ಹೇಳಿದ್ದಾರೆ.
ಟ್ರಿಪಲ್ ಟೆಸ್ಟ್ ರೌಂಡ್ ಪಾಸ್ ಆದ ನಂತರ ಗೀತಾ ಹಾಟ್ ಸೀಟ್ ಮೇಲೆ ಕುಳಿತಾಗ, ಅಮಿತಾಭ್ ಬಚ್ಚನ್ ಗೀತಾ ಅವರ ಸಾಂಪ್ರದಾಯಿಕ ರಜಪೂತ ಔಟ್‌ಫಿಟ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಗೀತಾ ಸಿಂಗ್ ಅವರು ತಮ್ಮ ಅಜ್ಜ ಮಹಿಳೆಯರ ಗೌರವಕ್ಕಾಗಿ ಹೋರಾಡಿದ್ದರು ಎಂದು ಹೇಳಿದ್ದರು.
ಪಿಕೆ ಗಾರ್ಗ್ ಮತ್ತು ಹೋಮಿ ಡಿ ಮೋತಿವಾಲಾ ಅವರು ಯಾವ ಕ್ರೀಡಾಕೂಟಕ್ಕಾಗಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದರು ಎಂದು ಅಮಿತಾಬ್ ಬಚ್ಚನ್ ಗೀತಾ ಅವರಿಗೆ ಒಂದು ಕೋಟಿಯ ಪ್ರಶ್ನೆಯನ್ನು ಕೇಳಿದರು. ಈ ಪ್ರಶ್ನೆಗೆ ನಾಲ್ಕು ಆಯ್ಕೆಗಳು ಗಾಲ್ಫ್, ಪೊಲೊ, ರೋಯಿಂಗ್ ಮತ್ತು ಐಸ್ ಹಾಕಿ ಎಂದು ಇತ್ತು.
ಗೀತಾ ಅವರಿಗೆ ಇನ್ನೂ ಎರಡು ಲೈಫ್ ಲೈನ್ ಗಳಿದ್ದವು, ಆದರೆ ಅದನ್ನು ಬಳಸದೆ ಗೀತಾ ಸರಿಯಾದ ಉತ್ತರ ನೀಡಿ 1 ಕೋಟಿ ರೂ ಗೆದ್ದರು ಮತ್ತು ಗೀತಾ ಸಿಂಗ್ ಗೌರ್ KBC 13 ರ ಮೂರನೇ ಮಿಲಿಯನೇರ್ ಆದರು. ಅವರ ಆಟದ ಪ್ಲಾನ್ ನೋಡಿ ಗೀತಾ ಆಟದ ಕೊನೆಯ ಪ್ರಶ್ನೆಗೆ ತಪ್ಪು ಉತ್ತರ ನೀಡಬಹುದೆಂದು ಪ್ರೇಕ್ಷಕರು ಎಂದು ಕೊಂಡಿದ್ದರು.
ಆದರೆ ಗೀತಾ ಸಿಂಗ್ ಗೌರ್ ಅವರಿಗೆ 7 ಕೋಟಿ ರೂಪಾಯಿ ಬಹುಮಾನದ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಅವರ ಆಟವನ್ನು ನಿಲ್ಲಿಸಿದರು. ಕಾರ್ಯಕ್ರಮದ ನಿರೂಪಕ ಬಿಗ್ ಬಿ ಅವರು ಗೀತಾ ಅವರಿಗೆ ಎದ್ದು ನಿಂತು ಗೌರವ ಸಲ್ಲಿಸಿದರು ಮತ್ತು ಅಮಿತಾಭ್ ಗೀತಾ ಅವರನ್ನು ತುಂಬಾ ಹೊಗಳಿದ್ದರು.