Kavya Gowda: ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ ಮೋಡಿ ಮಾಡಿದ್ದ ನಟಿ ಕಾವ್ಯಾ ಗೌಡ ತಮ್ಮ ಮುದ್ದಿನ ಮಗು ಸಿಯಾ ಎರಡನೇ ಹುಟ್ಟುಹಬ್ಬದ ಪ್ರಯುಕ್ತ ಅದ್ಧೂರಿಯಾಗಿ ಫೋಟೊಶೂಟ್ ಮಾಡಿ, ಮಗಳಿಗೆ ಶುಭ ಹಾರೈಸಿದ್ದಾರೆ. ಮಾಲ್ಡೀವ್ಸ್ ನಲ್ಲಿ ಬರ್ತ್ ಡೇ ಎಂಜಾಯ್ ಮಾಡ್ತಿದ್ದಾರೆ.
ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ತಮ್ಮ ಮಗಳು ಸಿಯಾ ಸೋಮಶೇಖರ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದು, ಮುದ್ದಾದ ಬ್ಲ್ಯಾಕ್ ಆಂಡ್ ವೈಟ್ ಫೋಟೊ ಶೂಟಲ್ಲಿ ಫುಲ್ ಫ್ಯಾಮಿಲಿ ಮಿಂಚಿದ್ದಾರೆ.
27
ಬಾಸ್ ಬೇಬಿಗೆ ಹ್ಯಾಪಿ ಬರ್ತ್ ಡೇ
ಹುಟ್ಟುಹಬ್ಬದ ಶುಭಾಶಯಗಳು, ನನ್ನ ದಿವಾ. ನೀನು ನನ್ನ ಹೃದಯ, ನನ್ನ ಪ್ರಪಂಚ. ನನ್ನ ಬಾಸ್ ಬೇಬಿ. ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ಎನ್ನುತ್ತಾ ಪೋಸ್ಟ್ ಶೇರ್ ಮಾಡಿದ್ದಾರೆ ಕಾವ್ಯಾ ಗೌಡ.
37
ಸುಂದರವಾದ ಫೋಟೊ ಶೂಟ್
ಮಗಳಿಗೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅಪ್ಪ-ಅಮ್ಮ ಮತ್ತು ಮಗಳು ಮೂರು ಜನ ಬ್ಲ್ಯಾಕ್ ಬಣ್ಣದ ಬಟ್ಟೆ ಧರಿಸಿ, ವೈಟ್ ಬ್ಯಾಕ್ ಗ್ರೌಂಡಲ್ಲಿ ಫೋಟೊ ಶೂಟ್ ಮಾಡಿಸಿದ್ದಾರೆ.
ಇನ್ನು ಮಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಫ್ಯಾಮಿಲಿ ಜೊತೆ ಕಾವ್ಯಾ ಗೌಡ ಈಗಾಗಲೇ ಮಾಲ್ಡೀವ್ಸ್ ಗೆ ತೆರಳಿದ್ದು ಅಲ್ಲಿ, ಭರ್ಜರಿಯಾಗಿಯೇ ಹುಟ್ಟುಹಬ್ಬವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ.
57
ಸಮುದ್ರಲೆಗಳ ಜೊತೆ ಆಡಿದ ಸಿಯಾ
ಕಾವ್ಯಾ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಮುದ್ದಾದ ವಿಡೀಯೋ ಶೇರ್ ಮಾಡಿದ್ದು, ಇದರಲ್ಲಿ ಮುದ್ದು ಸಿಯಾ, ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಮುದ್ರದ ಅಲೆಗಳ ಜೊತೆ ನಗುತ್ತಾ ಆಡುವುದನ್ನು ಕಾಣಬಹುದು.
67
ಸಿಯಾ ಹೆಸರಿಡಲು ಕಾರಣ
ಅಯೋಧ್ಯ ಶ್ರೀರಾಮನ ಪ್ರತಿಷ್ಠಾಪನೆ ದಿನವೇ ಸಿಯಾ ಹುಟ್ಟಿರುವ ಕಾರಣ ಸಿಯಾ ಎಂದು ಹೆಸರಿಟ್ಟಿದ್ದಾರೆ. ಸಿಯಾ ಅಂದರೆ ಸಾಯಿ ಬಾಬ ಅಂತ ಕೂಡ ಹೇಳುತ್ತಾರೆ. ಈ ಕಂದಮ್ಮ 2 ವರ್ಷಕ್ಕೆ ಇನ್‌ಸ್ಟಾಗ್ರಾಂ ಅಕೌಂಟ್ ಹೊಂದಿದ್ದಾರೆ.
77
ಎಂಗೇಜ್ ಆಗುತ್ತಿದ್ದ ನಟನೆಯಿಂದ ದೂರ ಉಳಿದ ನಟಿ
ಕಾವ್ಯಾ ಗೌಡ ಅವರು ಕಿರುತೆರೆ ಮತ್ತು ಹಿರಿತೆರೆಯಲ್ಲಿ ಜನಪ್ರಿಯತೆ ಪಡೆದಿದ್ದರು. ಆದರೆ ಬ್ಯುಸಿನೆಸ್ ಮ್ಯಾನ್ ಸೋಮಶೇಖರ್ ಅವರ ಜೊತೆ ಮದುವೆಯಾಗುತ್ತಿದ್ದಂತೆ ನಟನೆಯಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಸದ್ಯ ಅಮ್ಮನ ಡ್ಯೂಟಿ ಮಾಡುತ್ತಿದ್ದು, ಜೊತೆಗೆ ಜ್ಯುವೆಲ್ಲರಿ ಡಿಸೈನಿಂಗ್, ಹೀಲರ್ ಆಗಿ ಕೆಲಸ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.