ಮದರ್‌ ತೆರೆಸಾ ಹೆಸರಿನಲ್ಲಿ 2 ಶಾಲೆ ನಡೆಸುತ್ತಿರುವ Aase Serial ನಟಿ ಸ್ನೇಹಾ ಈಶ್ವರ್;‌ ಭೇಷ್‌ ಎಂದ ಸರ್ಕಾರ

Published : Jan 22, 2026, 05:55 PM IST

Aase Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿಯಲ್ಲಿ ವಿಜಯಾಂಬಿಕಾ, 'ಆಸೆ' ಯಲ್ಲಿ ಸಕ್ರೆಬೈಲು ಶಾಂತಿ ಪಾತ್ರದಲ್ಲಿ ನಟಿಸುತ್ತಿರುವ ಸ್ನೇಹಾ ಈಶ್ವರ್‌ ಅವರು ರಿಯಲ್‌ ಲೈಫ್‌ನಲ್ಲಿ 2 ಶಾಲೆಯನ್ನು ನಡೆಸುತ್ತಿದ್ದಾರಂತೆ. ಸಹನಟಿ ಪ್ರಿಯಾಂಕಾ ಡಿಎಸ್‌ ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾಹಿತಿ ನೀಡಿದ್ದಾರೆ. 

PREV
15
ಶಾಲೆ ಆರಂಭ ಹೇಗೆ ಆಯ್ತು?

ಸ್ನೇಹಾ ಈಶ್ವರ್‌ ಅವರಿಗೆ ಅನಾಥಾಶ್ರಮ ಆರಂಭಿಸುವ ಯೋಚನೆ ಹೊಂದಿದ್ದರು. ಆದರೆ ಮನೆಯಲ್ಲಿ ಕಷ್ಟ ಇದ್ದಿದ್ದರಿಂದ ಶಾಲೆ ಆರಂಭಿಸೋಣ ಎಂದುಕೊಂಡರು. ಅವರ ತಂದೆ ಕೂಡ ಟೀಚರ್‌ ಆಗಿದ್ದರಂತೆ. ಹೀಗಾಗಿ ಅವರು ಶಾಲೆ ಆರಂಭಿಸಿದರು.

25
ಶಾಲೆ ಆರಂಭ ಆದಿದ್ದು ಹೇಗೆ?

2003ರಲ್ಲಿ Lkg, Ukg ಆರಂಭಿಸಿದಾಗಲೇ ಮೊದಲ ವರ್ಷವೇ 80 ವಿದ್ಯಾರ್ಥಿಗಳು ಬಂದಿದ್ದರು. ಆ ಏರಿಯಾದಲ್ಲಿ ಇದ್ದವರು ತುಂಬ ಬೆಂಬಲ ಕೊಟ್ಟರು. ಬಾಡಿಗೆಗೆ ರೂಮ್‌ ಪಡೆದು ಶಾಲೆ ಆರಂಭಿಸಿದ್ದರು. ಆದರೆ 80 ಮಕ್ಕಳಿಗೆ ಅಷ್ಟು ಜಾಗ ಇರದ ಕಾರಣ, ಅವರು ಒಂದು ರೂಮ್‌ನಲ್ಲಿ ಎರಡು ಕ್ಲಾಸ್‌ ನಡೆಸುತ್ತಿದ್ದರು.

35
ಶಾಲೆ ಆರಂಭವಾಗಿ 25 ವರ್ಷ

ಒಟ್ಟಾರೆಯಾಗಿ ಸ್ನೇಹಾ ಈಶ್ವರ್‌ ಅವರು ಈಗ ಬೆಂಗಳೂರಿನಲ್ಲಿ ಎರಡು ಶಾಲೆಗಳನ್ನು ನಡೆಸುತ್ತಿದ್ದು, ಹಳೆಯ ಸ್ಕೂಲ್‌ ಆರಂಭವಾಗಿ 25 ವರ್ಷ ತುಂಬಲಿದೆ. ಅಂದಹಾಗೆ ಇವರ ಶಾಲೆಗೆ ಮದರ್‌ ತೆರೆಸಾ ಎಂದು ಹೆಸರು ಇಟ್ಟಿದ್ದಾರೆ.

45
ಮದರ್‌ ತೆರೆಸಾ ಎಂದು ಹೆಸರು ಇಟ್ಟಿದ್ದು ಯಾಕೆ?

ನನ್ನ ತಂದೆ ಮದರ್‌ ತೆರೆಸಾ ಅವರನ್ನು ಭೇಟಿ ಮಾಡಿದ್ದರು. ಮದರ್‌ ತೆರೆಸಾ ಅವರ ಸೇವೆ ಎಲ್ಲರಿಗೂ ಗೊತ್ತಿದೆ. ನಾವು ಜಾತಿ ವ್ಯವಸ್ಥೆಗೆ ಬೆಲೆ ಕೊಡೋದಿಲ್ಲ. ನಮಗೆ ಮದರ್‌ ತೆರೆಸಾ ಮೇಲಿನ ಅಭಿಮಾನದಿಂದ ಬೇರೆ ಯೋಚನೆಯನ್ನೇ ಮಾಡದೆ, ನಮ್ಮ ಶಾಲೆಗೆ ಈ ಹೆಸರನ್ನು ಇಟ್ಟಿದ್ದೇವೆ ಎಂದು ಸ್ನೇಹಾ ಈಶ್ವರ್‌ ಹೇಳಿದ್ದಾರೆ.

55
ಸರ್ಕಾರದಿಂದಲೂ ಮಾನ್ಯತೆ

ಈ ಶಾಲೆಗೆ ಒಳ್ಳೆಯ ರೇಟಿಂಗ್ಸ್‌ ಕೂಡ ಇದೆಯಂತೆ. ಅಂದಹಾಗೆ ಸರ್ಕಾರ ಕೂಡ ಈ ಶಾಲೆಗೆ ಬೆಸ್ಟ್‌ ಮ್ಯಾನೇಜ್‌ಮೆಂಟ್‌ ಸ್ಕೂಲ್‌ ಎಂದು ಸೆರ್ಟಿಫಿಕೇಟ್‌ನ್ನು ಕೊಟ್ಟಿದೆಯಂತೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories