Karna Serialನಲ್ಲಿ ಇಬ್ರನ್ನು ನಿಭಾಯಿಸ್ತಿರೋ ನಟನ ರಿಯಲ್​ ಲೈಫ್​ ಚೆಲುವೆ ಯಾರು? ಮದ್ವೆ ಯಾವಾಗ?

Published : Jan 22, 2026, 06:40 PM IST

'ಕರ್ಣ' ಸೀರಿಯಲ್ ಮೂಲಕ ಜನಪ್ರಿಯರಾಗಿರುವ ನಟ ಕಿರಣ್ ರಾಜ್ ಅವರ ನಿಜ ಜೀವನದ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ. 32ರ ಹರೆಯದ ಈ ಬ್ಯಾಚುಲರ್ ನಟನ ಸಮಾಜ ಸೇವೆ, ವೃತ್ತಿ ಬದುಕು ಮತ್ತು ಮದುವೆಯ ಕುರಿತಾದ ಅವರ ಯೋಚನೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

PREV
16
ಕರ್ಣ ಸೀರಿಯಲ್​ನ ಬ್ಯಾಚುಲರ್​!

ಕರ್ಣ ಸೀರಿಯಲ್​ (Karna Serial) ಸದ್ಯ ಟಿಆರ್​ಪಿಯಲ್ಲಿಯೂ ಮುಂದೆ ಇದ್ದು, ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುತ್ತಿದೆ. ಯಂಗ್​ ಆ್ಯಂಡ್​ ಎನರ್ಜಿಟಿಕ್​ ಆಗಿರೋ ಕರ್ಣನ ಕಂಡು ಹಲವು ಲಲನೆಯರು ಫಿದಾ ಆಗಿರೋದೂ ಇದೆ. ಅಷ್ಟಕ್ಕೂ ಈ ಕರ್ಣ ರಿಯಲ್​ ಲೈಫ್​ ಕರ್ಣ ಕೂಡ ಆಗಿದ್ದಾರೆ. ಅಂದಹಾಗೆ ಕರ್ಣ ಅವರ ರಿಯಲ್​ ಹೆಸರು ಕಿರಣ್​ ರಾಜ್​.

26
ರಿಯಲ್​ ಲೈಫ್​ ಕರ್ಣ

ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್​ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

36
32ರ ಚೆಲುವನ ಚೆಲುವಿ ಯಾರು?

ಅಂದಹಾಗೆ ಕಿರಣ್​ ರಾಜ್​ ಅವರಿಗೆ ಈಗ 32 ವರ್ಷ ವಯಸ್ಸು.1993ರ ಜುಲೈ 5ರಂದು ಹುಟ್ಟಿರುವ ಅವರಿಗೆ ಮದುವೆ ವಯಸ್ಸು ಆಗಿರೋ ಕಾರಣ, ಹೋದಲ್ಲಿ ಬಂದಲ್ಲಿ ಮದುವೆ ಯಾವಾಗ ಎನ್ನುವ ಪ್ರಶ್ನೆ ಕೇಳಿಬರುತ್ತಲೇ ಇರುತ್ತದೆ. ಇವರು ಇದಾಗಲೇ ಸೀರಿಯಲ್​ ಮಾತ್ರವಲ್ಲದೇ ಸಿನಿಮಾಗಳಲ್ಲಿ ನಟಿಸಿಯೂ ಸೈ ಎನ್ನಿಸಿಕೊಂಡಿದ್ದಾರೆ. 

46
ಮೈಸೂರಿನವರು

ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್‌ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

56
ಗರ್ಲ್​ಫ್ರೆಂಡ್​, ಮದುವೆ ಬಗ್ಗೆ...

ಈ ಹಿಂದೆ ಅವರು ಮದುವೆಯ ಬಗ್ಗೆ ಮಾತನಾಡಿದ್ದರು. ಸದ್ಯ ಮದುವೆಯ ಯೋಚನೆ ಇಲ್ಲ. ಅಂಥವರು ಯಾರೂ ಸದ್ಯ ನನ್ನ ಲೈಫ್​ನಲ್ಲಿ ಇಲ್ಲ. ಮದುವೆಯ ಬಗ್ಗೆ ಮನೆಯಲ್ಲಿಯೂ ತುಂಬಾ ಫೋರ್ಸ್​ ಬರುತ್ತಿದೆ. ಅವರಿಗೂ ಸ್ವಲ್ಪ ಟೈಮ್​ ಕೊಡಿ ಎಂದು ಕೇಳಿದ್ದೇನೆ. ಮಾಡುವ ಕೆಲಸ ತುಂಬಾ ಇವೆ. ನಟನಾ ಕ್ಷೇತ್ರದಲ್ಲಿಯೂ ಸಾಕಷ್ಟು ಮುಂದಕ್ಕೆ ಹೋಗುವುದು ಇದೆ. ಎಲ್ಲವೂ ಸೆಟ್ಲ್​ ಆದ್ಮೇಲೆ ಮದುವೆಯ ಪ್ಲ್ಯಾನ್​ ಮಾಡುತ್ತೇನೆ. ಅಲ್ಲಿಯವರೆಗೂ ಏನೂ ಇಲ್ಲ ಎಂದು ಹೇಳಿದ್ದಾರೆ ಕಿರಣ್​ ರಾಜ್​. ಇವರ ಲೈಫ್​ನಲ್ಲಿ ಯಾರೂ ಹುಡುಗಿ ಇಲ್ಲ ಎನ್ನುವ ಸಮಾಧಾನ ಇವರ ಮಹಿಳಾ ಫ್ಯಾನ್ಸ್​ಗೆ ಉಂಟಾಗಿದೆ.

66
ಅತಿ ಹೆಚ್ಚು ಸಂಭಾವನೆ

ಅಷ್ಟಕ್ಕೂ, ನಟನೆಯಿಂದ ಪ್ರೇಕ್ಷಕರ ಮನಸ್ಸನ್ನು ಕದ್ದು ಗೆದ್ದಿರೋ ನಟ ಕಿರಣ್​ ರಾಜ್​, ಸೀರಿಯಲ್​ಗಳ ನಟರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತೂ ಇದೆ. ಹಿಂದೊಮ್ಮೆ ಈ ಪ್ರಶ್ನೆಯೊಂದು ಅವರಿಗೆ ಸಂದರ್ಶನದಲ್ಲಿ ಎದುರಾಗಿತ್ತು. ಅದಕ್ಕೆ ಜಾಣ್ಮೆಯಿಂದ ಉತ್ತರ ಕೊಟ್ಟಿರೋ ನಟ, ನಾನೂ ಗೂಗಲ್​ನಲ್ಲಿ ಈ ಬಗ್ಗೆ ನೋಡಿದ್ದೇನೆ ಎಂದಿದ್ದರು. ಆದರೆ, ತಾವು ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಹೌದೋ, ಅಲ್ಲವೋ ಎನ್ನುವುದನ್ನು ಬಾಯಿ ಬಿಟ್ಟಿಲ್ಲ. ಬೇರೆಯವರು ಎಷ್ಟು ಸಂಭಾವನೆ ಪಡೆಯುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲವಲ್ಲ, ಅದಕ್ಕೆ ನಾನು ಹೆಚ್ಚು ಪಡೆಯುತ್ತೇನೋ ಇಲ್ಲವೋ ಗೊತ್ತಾಗುವುದಿಲ್ಲ ಎನ್ನುತ್ತಲೇ ತಾವು ಪಡೆಯುವ ಸಂಭಾವನೆಯ ಬಗ್ಗೆ ಕೇಳಿದ ಪ್ರಶ್ನೆಗೂ ಸೂಕ್ಷ್ಮವಾಗಿ ಜಾಣ್ಮೆಯಿಂದ ನುಸುಳಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories