ಕಲರ್ಸ್ ಕನ್ನಡದ 'ಪವಿತ್ರ ಬಂಧನ' ಮತ್ತು ಝೀ ಕನ್ನಡದ 'ಕರ್ಣ' ಧಾರಾವಾಹಿಗಳು ತ್ರಿಕೋನ ಪ್ರೇಮಕಥೆಯ ಮೂಲಕ ವೀಕ್ಷಕರ ಗಮನ ಸೆಳೆಯುತ್ತಿವೆ. ಎರಡೂ ಸೀರಿಯಲ್‌ಗಳಲ್ಲಿ ನಾಯಕ ತಾನು ಪ್ರೀತಿಸಿದ ಯುವತಿಯ ಬದಲಾಗಿ ಬೇರೊಬ್ಬರನ್ನು ಮದುವೆಯಾಗುವ ಸನ್ನಿವೇಶವಿದ್ದು, ಮುಂದಿನ ಕಥಾಹಂದರ ಕುತೂಹಲ ಕೆರಳಿಸಿದೆ.
ಕನ್ನಡ ಖಾಸಗಿ ವಾಹಿನಿಗಳಲ್ಲಿ ದಿನಕ್ಕೆ 50ಕ್ಕೂ ಅಧಿಕ ಧಾರಾವಾಹಿಗಳು ಪ್ರಸಾರವಾಗುತ್ತಿವೆ. ಇವುಗಳಿಗೆ ಸಿಗುವ ಟಿಆರ್‌ಪಿ ಆಧಾರದ ಮೇಲೆ ನಂಬರ್ ಒನ್ ಸೀರಿಯಲ್ ಯಾವುದು ಎಂದು ಗುರುತಿಸಲಾಗುತ್ತದೆ. ಹಾಗಾಗಿ ವೀಕ್ಷಕರಿಗೆ ಹೊಸದನ್ನು ನೀಡಲು ಧಾರಾವಾಹಿಗಳು ಪ್ರಯತ್ನಿಸುತ್ತಿರುತ್ತವೆ.
25
ಪವಿತ್ರ ಬಂಧನ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಸೂರಜ್ ಸಿಂಗ್ ನಟನೆಯ 'ಪವಿತ್ರ ಬಂಧನ' ಧಾರಾವಾಹಿ ಪ್ರಸಾರವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋ ಮತ್ತು ಪ್ರಸಾರವಾಗಿರುವ ಸಂಚಿಕೆ ಪ್ರಕಾರ, ಸೋದರ ತಿಲಕ್ ದೇಶಮುಖ್ ಪ್ರೀತಿಸಿದ ಯುವತಿ ಪವಿತ್ರಾಳನ್ನು ನಾಯಕ ನಟ ದೇವದತ್ ದೇಶಮುಖ್ ಮದುವೆಯಾಗುತ್ತಾನೆ. ಮುಂದೆ ಈ ಮೂವರ ಜೀವನ ಯಾವೆಲ್ಲಾ ತಿರುವುಗಳನ್ನು ಪಡೆದುಕೊಳ್ಳುತ್ತೆ ಅನ್ನೋದು ಸೀರಿಯಲ್‌ನ ಒನ್‌ಲೈನ್ ಕಥೆ.
35
ತ್ರಿಕೋನ ಪ್ರೇಮಕಥೆಯ ಧಾರಾವಾಹಿಗಳು
ಇದೇ ರೀತಿಯ ಮತ್ತೊಂದು ತ್ರಿಕೋನ ಕಥೆಯುಳ್ಳ ಸೀರಿಯಲ್ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಇಲ್ಲಿ ನಾಯಕ ನಟ ಕರ್ಣ ತಾನು ಪ್ರೀತಿಸಿದ ಗೆಳತಿಯ ಸೋದರಿಯನ್ನೇ ಮದುವೆಯಾಗುತ್ತಾನೆ. ಇದು ಸುಳ್ಳು ಮದುವೆ ಅಂತಾ ಗೊತ್ತಿದ್ರೂ ಮನೆಯವರ ಕಣ್ಮುಂದೆ ಗಂಡ-ಹೆಂಡ್ತಿಗಾಗಿ ಇಬ್ಬರು ನಟಿಸುತ್ತಿದ್ದಾರೆ.
ಝೀ ಕನ್ನಡದ ಕರ್ಣ ಸೀರಿಯಲ್ ಪ್ರಸಾರವಾಗುತ್ತಿರುವ ಮೊದಲ ದಿನದಿಂದಲೂ ರೋಚಕ ತಿರುವುಗಳಿಂದ ಉತ್ತಮ ಟಿವಿಆರ್ ಪಡೆಯುತ್ತಿದೆ. ಕರ್ಣ-ನಿಧಿ-ನಿತ್ಯಾ ನಡುವಿನ ಪ್ರೇಮಕಥೆಯಲ್ಲಿ ಯಾರು? ಯಾರಿಗೆ? ಜೋಡಿ ಆಗ್ತಾರೆ ಅನ್ನೋದು ಸೀರಿಯಲ್‌ನ ಒನ್‌ಲೈನ್ ಕಥೆ.
ಈ ಹಿಂದೆಯೂ ತ್ರಿಕೋನ ಪ್ರೇಮಕಥೆಯುಳ್ಳ ಹಲವು ಸೀರಿಯಲ್‌ಗಳು ಪ್ರಸಾರಗೊಂಡು ನಂಬರ್ ಒನ್ ಪಟ್ಟ ಅಲಂಕರಿಸಿದ್ದವು. ಇದೀಗ ಒಂದೇ ರೀತಿಯ ಬದಲಾದ ಕಥೆಯೊಂದಿಗೆ, ವಿಶೇಷ ತಿರುವುಗಳ ಜೊತೆ ಕಲರ್ಸ್ ಕನ್ನಡದದಲ್ಲಿ 'ಪವಿತ್ರ ಬಂಧನ' ಮತ್ತು ಜೀ ವಾಹಿನಿಯಲ್ಲಿ 'ಕರ್ಣ' ಪ್ರಸಾರವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.