ನಾನಿಲ್ಲ ಅಂದ್ರೆ ಏನ್‌ ಮಾಡ್ತೀಯಾ? 2 ತಿಂಗಳ ಹಿಂದಷ್ಟೇ Dr CJ Roy ಕೇಳಿದ್ದ ಪ್ರಶ್ನೆಗೆ ಪತ್ನಿಯ ಅಚ್ಚರಿ ಉತ್ತರ ಏನು?

Published : Jan 30, 2026, 07:11 PM IST

confident group owner cj roy: ಕಾನ್ಫಿಡೆಂಟ್‌ ಗ್ರೂಪ್‌ ಮಾಲೀಕ, ಸಾವಿರಾರು ಕೋಟಿ ರೂಪಾಯಿ ಒಡೆಯ ಸಿಜೆ ರಾಯ್‌ ಅವರು ಶೂಟ್‌ ಮಾಡಿಕೊಂಡು ನಿಧನರಾಗಿದ್ದಾರೆ. ಐಟಿ ದಾಳಿಗೆ ಹೆದರಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪದೇ ಪದೇ ಇವರ ಉದ್ಯಮದ ಮೇಲೆ ಐಟಿ ದಾಳಿ ಆಗುತ್ತಲೇ ಇತ್ತು.  

PREV
15
ಪತ್ನಿ, ಮಕ್ಕಳು ಯಾರು?

ಸಿಜೆ ರಾಯ್‌ ಅವರು ಮದುವೆಯಾಗಿ 31 ವರ್ಷ ಆಗಿದೆ. ಇವರ ಪತ್ನಿ ಹೆಸರು ಲಿನಿ ರಾಯ್

ಸಿಜೆ ರಾಯ್‌ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ರೋಹಿತ್ ಮತ್ತು ರಿಯಾ ಎಂದು ಹೆಸರು ಇಟ್ಟಿದ್ದಾರೆ.

25
ಸ್ಟಾರ್‌ ಸುವರ್ಣ ವಾಹಿನಿಗೆ ಅಂದೇ 1 ಕೋಟಿ ಕೊಟ್ಟಿದ್ರು

ಸ್ಟಾರ್‌ ಸುವರ್ಣ ವಾಹಿನಿ ಆರಂಭವಾದಾಗಲೂ ಕಾನ್ಫಿಡೆಂಟ್‌ ಸ್ಟಾರ್‌ ಸಿಂಗರ್‌ ಶೋಗೆ ಒಂದು ಕೋಟಿ ರೂಪಾಯಿ ನೀಡಿದ್ದರು.

35
ಬಿಗ್‌ ಬಾಸ್‌ಗೂ ಇವರದ್ದೇ ದುಡ್ಡು

ಅಷ್ಟೇ ಅಲ್ಲದೆ ಕನ್ನಡ ಹಾಗೂ ಮಲಯಾಳಂ ಬಿಗ್‌ ಬಾಸ್‌ ಶೋನ ವಿಜೇತರಿಗೆ 50 ಲಕ್ಷ ರೂಪಾಯಿ ಹಣ ನೀಡಿದ್ದರು. ಇನ್ನು ಸೈಮಾ ಪ್ರಶಸ್ತಿ ಕಾರ್ಯಕ್ರಮಕ್ಕೆ 8 ವರ್ಷಗಳ ಕಾಲ ಪ್ರಾಯೋಜಕತ್ವ ವಹಿಸಿದ್ದರು.

45
ನಾನಿಲ್ಲ ಅಂದ್ರೆ ಏನ್‌ ಮಾಡ್ತೀಯಾ?

ಇತ್ತೀಚೆಗೆ ಸಿಜೆ ರಾಯ್‌ ಅವರು ಒಂದು ಪಾಡ್‌ಕಾಸ್ಟ್‌ನಲ್ಲಿ ಪತ್ನಿ ಬಗ್ಗೆ ಮಾತನಾಡಿದ್ದರು. “ನಾನು ಒಂದು ವೇಳೆ ಬದುಕಿಲ್ಲ ಎಂದರೆ ಏನು ಮಾಡುತ್ತೀಯಾ?” ಎಂದು ಅವರು ಪ್ರಶ್ನೆ ಮಾಡಿದ್ದರಂತೆ. ಆಗ ಪತ್ನಿ ಹಾಗೆಲ್ಲ ಮಾತನಾಡಬೇಡಿ ಎಂದು ಹೇಳಿದ್ದರಂತೆ.

55
ಹಣದಲ್ಲಿ ಆಸಕ್ತಿ ಇಲ್ಲ

ಮತ್ತೆ ಸಿಜೆ ರಾಯ್‌ ಪ್ರಶ್ನೆ ಮಾಡಿದಾಗ, “ನನಗೆ ನಿಮ್ಮ ಆಸ್ತಿ ಮೇಲೆ ಆಸಕ್ತಿ ಇಲ್ಲ. ನನ್ನ ಮಕ್ಕಳನ್ನು ಕರೆದುಕೊಂಡು ತಾಯಿ ಮನೆಗೆ ಹೋಗ್ತೀನಿ ಎಂದು ಅವಳು ಹೇಳಿದ್ದಾಳೆ. ಎಲ್ಲೇ ಹೋದರೂ ನನ್ನ ಪತ್ನಿ ಸಿಂಪಲ್‌ ಆಗಿ ಇರೋಕೆ ಬಯಸ್ತಾಳೆ, ಅವಳಿಗೆ ಲಕ್ಷುರಿ ಜೀವನ ಇಷ್ಟ ಇಲ್ಲ” ಎಂದು ಹೇಳಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories