ಶೀಘ್ರದಲ್ಲೇ ಕರ್ಣ ಸೀರಿಯಲ್ ನಾಯಕಿ ಬದಲಾವಣೆ? ನಮ್ರತಾ- ಭವ್ಯಾ… ಇಬ್ಬರಲ್ಲಿ ಹೋಗೋರು ಯಾರು?

Published : Sep 27, 2025, 02:04 PM IST

ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಶುರುವಾದ ನಂ 1 ಧಾರಾವಾಹಿಯ ನಾಯಕಿ ಶೀಘ್ರದಲ್ಲಿ ಬದಲಾವಣೆಯಾಗಲಿದ್ದಾರೆ ಎನ್ನುವ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನ ಅದು ಕರ್ಣ ಸೀರಿಯಲ್ ಎಂದು ಹೇಳುತ್ತಿದ್ದಾರೆ. ಆದರೆ ಬದಲಾಗುತ್ತಿರುವವರು ಯಾರು?

PREV
17
ಕರ್ಣ ಸೀರಿಯಲ್

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಕರ್ಣ (Karna Serial). ಜೀ ಕನ್ನಡ ವಾಹಿನಿಯಲ್ಲಿ ಒಂದೆರಡು ತಿಂಗಳ ಹಿಂದೆ ಆರಂಭವಾದ ಈ ಧಾರಾವಾಹಿ ಬೇರೆಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ನಂ 1 ಧಾರಾವಾಹಿಯಾಗಿ ಪ್ರಸಾರವಾಗುತ್ತಿದೆ.

27
ಯಾವಾಗ್ಲೂ ಟ್ರೆಂಡಿಂಗ್

ಕರ್ಣ ಸೀರಿಯಲ್ ಪ್ರಸಾರವಾಗುವ ಮುನ್ನವೇ ಟ್ರೆಂಡಿಂಗ್ ನಲ್ಲಿತ್ತು. ಈ ಧಾರಾವಾಹಿಯ ಪ್ರೊಮೋ ಮಿಲಿಯನ್ ವ್ಯೂವ್ಸ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿತ್ತು. ಇದೀಗ ಧಾರಾವಾಹಿಯ ಪಾತ್ರಗಳು, ಕಥೆ ಎಲ್ಲವೂ ಅದ್ಭುತವಾಗಿ ಮೂಡಿ ಬರುತ್ತಿದ್ದು, ಟಿಆರ್ಪಿಯಲ್ಲಿ ಸದಾ ನಂ 1 ಸ್ಥಾನ ಕಾಯ್ದುಕೊಂಡಿದೆ.

37
ಸೋಶಿಯಲ್ ಮೀಡಿಯಾದ ವೈರಲ್ ಪೋಸ್ಟ್

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ (viral post) ಆಗುತ್ತಿದ್ದು, ಅದರಲ್ಲಿ ಶೀಘ್ರದಲ್ಲೇ ಕನ್ನಡ ಕಿರುತೆರೆಯಲ್ಲಿ ಇತ್ತೀಚೆಗೆ ಶುರುವಾದ ನಂ 1 ಧಾರಾವಾಹಿಯ ನಾಯಕಿ ಬದಲಾಗಲಿದ್ದಾರೆ ಎಂದು ಇದೆ. ಹೀಗಾಗಿ ಜನರು ಅದು ಕರ್ಣ ಸೀರಿಯಲ್ ಕುರಿತಾಗಿಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

47
ಕರ್ಣ ಸೀರಿಯಲ್ ಎನ್ನುತ್ತಿರುವುದು ಯಾಕೆ?

ವೈರಲ್ ಪೋಸ್ಟ್ ನ ಕಾಮೆಂಟ್ ಸೆಕ್ಷನ್ ಪೂರ್ತಿಯಾಗಿ ಕರ್ಣ ಧಾರಾವಾಹಿ ಹೆಸರು ಕಂಡು ಬಂದಿದೆ. ಯಾಕಂದ್ರೆ ಇತ್ತೀಚೆಗೆ ಶುರುವಾದ ನಂ 1 ಧಾರಾವಾಹಿ ಅಂದ್ರೆ ಅದು ಕರ್ಣ ಸೀರಿಯಲ್. ಹಾಗಾಗಿ ಈ ಧಾರಾವಾಹಿಯ ಇಬ್ಬರು ನಾಯಕಿಯರಲ್ಲಿ ಒಬ್ಬರು ಬದಲಾಗಲಿದ್ದಾರೆ ಎನ್ನಲಾಗುತ್ತಿದೆ.

57
ನಮ್ರತಾ ಗೌಡ-ಭವ್ಯಾ ಗೌಡ ಯಾರು ಔಟ್

ಇನ್ನು ಧಾರಾವಾಹಿಯಲ್ಲಿ ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ ಮತ್ತು ನಿಧಿ ಪಾತ್ರದಲ್ಲಿ ಭವ್ಯಾ ಗೌಡ (Bhavya Gowda) ನಟಿಸುತ್ತಿದ್ದಾರೆ. ಹಾಗಿದ್ರೆ ಇಬ್ಬರಲ್ಲಿ ಸೀರಿಯಲ್ ನಿಂದ ಹೊರ ಬರುತ್ತಿರುವುದು ಯಾರು ಎನ್ನುವ ಚರ್ಚೆ ಬಲು ಜೋರಾಗಿಯೇ ನಡೆಯುತ್ತಿದೆ.

67
ನಮ್ರತಾ ಗೌಡ ಹೊರ ಬರ್ತಾರ?

ಹೆಚ್ಚಿನ ಜನರ ಮಾಹಿತಿಯ ಪ್ರಕಾರ ನಮ್ರತಾ ಗೌಡ ಧಾರಾವಾಹಿಯಿಂದ ಹೊರ ಬರ್ತಿದ್ದಾರಂತೆ, ನಮ್ರತಾ ಗೌಡ (Namratha Gowda) ಅವರು ವಿಜಯ್ ರಾಘವೇಂದ್ರ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದರಿಂದ ನಿತ್ಯಾ ಪಾತ್ರದಿಂದ ಹೊರಬರುವುದಾಗಿ ಹೇಳುತ್ತಿದ್ದಾರೆ. ಆದರೆ ಇದೆಲ್ಲಾ ಮಾಹಿತಿ ಎಷ್ಟು ನಿಜಾ? ಎಷ್ಟು ಸುಳ್ಳು ಅನ್ನೋದು ಅಧಿಕೃತವಾಗಿ ತಿಳಿದು ಬಂದಿಲ್ಲ.

77
ಮತ್ತೊಬ್ಬ ನಾಯಕಿಯ ಆಯ್ಕೆಯೂ ಆಗಿದ್ಯಾ?

ಇನ್ನೂ ಕೆಲವು ಪ್ರಕಾರ, ಈಗಾಗಲೇ ನಿತ್ಯಾ ಪಾತ್ರಕ್ಕೆ ಮಹಾದೇವಿ ಸೀರಿಯಲ್ ನಾಯಕಿಯ ಆಯ್ಕೆ ಕೂಡ ಆಗಿದೆಯಂತೆ. ಆದರೆ ಈ ಅಂತೆ ಕಂತೆಗಳ ಮಧ್ಯೆ ನಿಜವಾದ ವಿಷ್ಯ ಮಾತ್ರ ಗೊತ್ತಾಗಲಿಲ್ಲ. ಈ ವೈರಲ್ ಪೋಸ್ಟ್ ನಲ್ಲಿ ಹೇಳಿರೋ ಧಾರಾವಾಹಿ ಕರ್ಣ ಸೀರಿಯಲ್ ಹೌದೋ ಅಲ್ಲವೋ ಅನ್ನೋದು ಸಹ ಗೊತ್ತಿಲ್ಲ. ಈ ಕುರಿತು ಅಧಿಕೃತ ಹೇಳಿಕೆ ಕೂಡ ಬಂದಿಲ್ಲ. ಎಲ್ಲಾದಕ್ಕೂ ಕಾದು ನೋಡಬೇಕು.

Read more Photos on
click me!

Recommended Stories