Karna Serial: ಇಲ್ಲಿವರೆಗೆ ಕರ್ಣ ಮತ್ತು ನಿಧಿ ಜೋಡಿನ ಮೆಚ್ಚಿ, ನಿತ್ಯಾಳನ್ನು ಆಡಿಕೊಳ್ಳುತ್ತಿದ್ದ ವೀಕ್ಷಕರು ಇದೀಗ ಹೊಸ ಎಪಿಸೋಡ್ ಪ್ರೊಮೋಗಳನ್ನು ನೋಡಿ, ಈ ಜೋಡಿ ಸೂಪರ್ ಆಗಿದೆ. ಮಿಲನ ಸಿನಿಮಾದ ಅಂಜಲಿ ಮತ್ತು ಆಕಾಶ್ ಜೋಡಿಯಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರ್ಣ ಸೀರಿಯಲ್ (Karna Serial) ಜನ ಮೆಚ್ಚುಗೆ ಪಡೆಯುತ್ತಲೇ ಸಾಗುತ್ತಿದೆ. ಆದರೆ ಇಲ್ಲಿವರೆಗೆ ಕರ್ಣ-ನಿಧಿ ಜೋಡಿಯನ್ನು ಮೆಚ್ಚಿಕೊಂಡು, ನಿತ್ಯಾಳನ್ನು ದೂರುತ್ತಿದ್ದ ವೀಕ್ಷಕರು ಇದೀಗ ಕರ್ಣ ಮತ್ತು ನಿತ್ಯಾ ಜೋಡಿಯನ್ನು ಇಷ್ಟ ಪಡಲು ಆರಂಭಿಸಿದ್ದಾರೆ.
26
ಗೋಳು ಅಂತ್ಯ ಪ್ರೀತಿ ಶುರು
ಕಳೆದ ಕೆಲವು ವಾರಗಳಿಂದ ಕರ್ಣ ಧಾರಾವಾಹಿಯಲ್ಲಿ ಬರಿ ಗೋಳು ತುಂಬಿಕೊಂಡಿತ್ತು. ರಮೇಶ್ ಮಾಡಿದ ಮೋಸದಿಂದಾಗಿ ಕರ್ಣ, ನಿತ್ಯ ಮತ್ತು ನಿಧಿ ಮೂವರ ಬದುಕಿನಲ್ಲಿ ಬಿರುಗಾಳಿಯೇ ಎದ್ದಿತ್ತು. ಆದರೆ ಇದೀಗ ಎಲ್ಲವೂ ಕೊಂಚ ಕೊಂಚವಾಗಿ ಸರಿ ಹೋಗಿ ಮತ್ತೆ ಎಲ್ಲರ ಮುಖದಲ್ಲೂ ಮಂದಹಾಸ ಮೂಡಿದೆ.
36
ಮನ ಸೆಳೆದ ಹೊಸ ಪ್ರೋಮೊ
ಕರ್ಣ ಸೀರಿಯಲ್ ಹೊಸ ಪ್ರೊಮೋ ಬಿಡುಗಡೆಯಾಗಿ ಜನಮನ ಗೆಲ್ಲುತ್ತಿದೆ. ಅಡುಗೆ ಬರದ ನಿತ್ಯ, ಅಡುಗೆ ಮನೆಗೆ ಹೋಗಿ ಪಾಯಸಕ್ಕೆ ರೆಡಿ ಮಾಡುತ್ತಿದ್ದರೆ, ಕರ್ಣ ಗುಟ್ಟಾಗಿ ಫೋನ್ ಮೂಲಕ ರೆಸಿಪಿಯನ್ನು ಹೇಳಿಕೊಡುತ್ತಿದ್ದಾರೆ. ಇಬ್ಬರ ಮುದ್ದಾದ ಮಾತುಕತೆ ನೋಡಿ ಜನ ಫುಲ್ ಖುಷ್ ಆಗಿದ್ದಾರೆ.
ಅನಿವಾರ್ಯತೆ ಕಟ್ಟು ಬಿದ್ದು, ಸುಳ್ಳಿನ ಮದುವೆಯಲ್ಲಿ ಜೀವಿಸುತ್ತಿರುವ ನಿತ್ಯಾ ಮತ್ತು ಕರ್ಣ ಜೋಡಿಯನ್ನು ಇದೀಗ ಜನ ಇಷ್ಟಪಟ್ಟಿದ್ದಾರೆ. ಇಬ್ರೂ ಜೋಡಿ ಎಷ್ಟು ಚೆನ್ನಾಗಿದೆ. ದೃಷ್ಟಿ ಆಯ್ತದೆ ನೋಡ್ಬೇಡಿ ಸ್ಪೆಸಿಯಲ್ ಆಗೈತೆ ನಮ್ ಜೋಡಿ. ಇನ್ನು ಬರ್ಲಿ ಹೆಚ್ಚು ಪ್ರೋಮೋ ಕರ್ಣ ನಿತ್ಯ ಜೊತೆ ಇರೋದು ಎಂದು ಕಾಮೆಂಟ್ ಮೂಲಕ ಸಂಭ್ರಮಿಸಿದ್ದಾರೆ.
56
ಕರ್ಣ-ನಿತ್ಯ ನಿಜವಾಗಿಯೂ ಮದುವೆಯಾಗಬೇಕು
ಈಗೀಗ ಎಲ್ರೂ ನಿತ್ಯ ಕರ್ಣ ಒಂದಾಗಬೇಕು ಅಂತಾರೆ ನೋಡಿ. ಸೂಪರ್ ಜೋಡಿಗಳು, ಇವರಿಬ್ಬರು ನಿಜವಾಗಿ ಮದುವೆ ಆದ್ರೆ ಸೂಪರ್ ಆಗಿರುತ್ತೆ. ಮೊದಲಿಂದಾನೂ ಈ ಜೋಡಿನ ಹೈಲೈಟ್ ಮಾಡ್ಬೇಕಿತ್ತು. ಎಷ್ಟು ಚಂದ ಕಾಣಿಸ್ತಾರೆ ಜೊತೆಯಾಗಿ, ಗಂಡ-ಹೆಂಡ್ತಿ ವೈಬ್ಸ್ ಕೊಡ್ತಿದ್ದಾರೆ. ಇವರದ್ದು ಜನ್ಮ ಜನ್ಮದ ಅನುಬಂಧ, ಯಾರೇ ಮಧ್ಯೆ ಬರೋದಕ್ಕೂ ಆಗೋದಿಲ್ಲ ಎಂದಿದ್ದಾರೆ.
66
ಮಿಲನ ಸಿನಿಮಾದ ಆಕಾಶ್ ಅಂಜಲಿ ಜೋಡಿ
ನಿತ್ಯಾ ಮತ್ತು ಕರ್ಣನ ಈ ಮುದ್ದಾದ ಮಾತುಕತೆ, ಅಡುಗೆ ಬಾರದ ನಿತ್ಯಾಳನ್ನು ನೋಡಿ ಜನರು ಮಿಲನ ಸಿನಿಮಾದ ಆಕಾಶ್ ಮತ್ತು ಅಂಜಲಿಯ ಪಾತ್ರವನ್ನು ನೆನಪು ಮಾಡಿಕೊಂಡಿದ್ದಾರೆ. ಇವರದ್ದು ಸೂಪರ್ ಡೂಪರ್ ಜೋಡಿ ಎನ್ನುತ್ತಿದ್ದಾರೆ. ಅಂದ ಹಾಗೆ ಮಿಲನಾ ಸಿನಿಮಾದಲ್ಲಿ ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಕೂಡ ನಟಿಸಿದ್ದರು. ಈ ಚಿತ್ರದಲ್ಲಿ ಬಾಲನಟಿಯಾಗಿ, ಸಿಹಕಹಿ ಚಂದ್ರು ಮಗಳಾಗಿ ನಮ್ರತಾ ನಟಿಸಿದ್ದರು.