Karna Serial: ಈ ಜೋಡಿಯ ಮದುವೆ ​, ಆ ಜೋಡಿಯ ಎಂಗೇಜ್​ಮೆಂಟ್​ : ನಡುವೆ ವಿಧಿಯಾಟವೇನು?

Published : Jan 12, 2026, 04:47 PM IST

ಕರ್ಣ ಧಾರಾವಾಹಿಯಲ್ಲಿ ಕಥೆ ರೋಚಕ ಘಟ್ಟ ತಲುಪಿದೆ. ಒಂದೆಡೆ ನಿತ್ಯಾ-ತೇಜಸ್ ಮದುವೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಪಘಾತದಿಂದ ಪಾರಾದ ನಿಧಿಗೆ ಕರ್ಣ ಪ್ರಪೋಸ್ ಮಾಡುತ್ತಿದ್ದಾನೆ. ನಿತ್ಯಾಳ ಮದುವೆ ಸಂಪೂರ್ಣವಾಗುವುದೇ ಅಥವಾ ಕರ್ಣನ ಪ್ರೀತಿ ಗೆಲ್ಲುವುದೇ ಎಂಬ ಕುತೂಹಲ ಹೆಚ್ಚಾಗಿದೆ.

PREV
15
ಯಾವ ಕ್ಷಣ ಏನು?

ಕರ್ಣ ಸೀರಿಯಲ್​ನಲ್ಲಿ (Karna Serial) ಕೊನೆಯ ಕ್ಷಣದವರೆಗೂ ಏನಾಗುತ್ತದೆಯೋ ಎನ್ನುವ ಆತಂಕ ವೀಕ್ಷಕರನ್ನು ಕಾಡುತ್ತಲೇ ಇದೆ. ಹಲವಾರು ಸಮಸ್ಯೆಗಳನ್ನು ಎದುರಿಸಿ ತೇಜಸ್​ ಮತ್ತು ನಿತ್ಯಾ ಒಂದಾಗಿದ್ದಾರೆ. ಆದರೆ ತೇಜಸ್​ಗೆ ಇನ್ನೂ ಯಾಕೋ ಕರ್ಣನ ಮೇಲೆ ಅನುಮಾನ ಮಾತ್ರ ಹೋಗುತ್ತಿಲ್ಲ.

25
ಸಾಯಿಸುವ ಪ್ಲ್ಯಾನ್​

ಅದೇ ಇನ್ನೊಂದೆಡೆ, ವಿಲನ್​ಗಳು ನಿಧಿಯನ್ನು ಸಾಯಿಸುವ ಪ್ಲ್ಯಾನ್​ ಮಾಡಿದ್ದರು. ಆದರೆ ಆಕೆ ಬಚಾವ್​ ಆಗಿದ್ದಾಳೆ. ಅಪಘಾತದಲ್ಲಿ ನಿಧಿ ಸತ್ತೇ ಹೋದಳು ಎಂದು ತಿಳಿದ ಕರ್ಣ ವಿಲವಿಲ ಒದ್ದಾಡಿದ್ದ. ಆದರೆ, ಅದೃಷ್ಟವಶಾತ್​ ಆಕೆ ಬಚಾವ್​ ಆಗಿದ್ದಳು.

35
ನಿಧಿಗೆ ಉಂಗುರ

ಇದೀಗ, ಆ ಘಟನೆಯ ಬಳಿಕ ಕರ್ಣ ಇಷ್ಟು ದಿನ ಮನಸ್ಸಿನಲ್ಲಿ ಇಟ್ಟುಕೊಂಡದ್ದನ್ನೆಲ್ಲಾ ನಿಧಿಗೆ ಹೇಳಿದ್ದಾನೆ. ನಿಮ್ಮ ಜೊತೆ ನಾನು ಸದಾ ಇರುತ್ತೇನೆ. ನೀವೇ ನನ್ನ ಉಸಿರು ಎಂದು ಹೇಳಿ, ನಿಧಿಗೆ ಉಂಗುರವನ್ನು ಕೊಟ್ಟು ಪ್ರಪೋಸ್​​ ಮಾಡಲು ಮುಂದಾಗಿದ್ದಾನೆ.

45
ನಿತ್ಯಾ-ತೇಜಸ್​ ಮದುವೆ

ಅದೇ ಇನ್ನೊಂದೆಡೆ, ನಿತ್ಯಾ ಮತ್ತು ತೇಜಸ್​ ಮದುವೆಗೆ ಸಿದ್ಧತೆ ನಡೆದಿದೆ. ಎಲ್ಲಾ ಶಾಸ್ತ್ರಗಳೂ ಮಾಡಿಯಾಗಿವೆ. ಪುರೋಹಿತರೂ ಬಂದಿದ್ದಾರೆ. ತೇಜಸ್​ ನಿತ್ಯಾಳಿಗೆ ತಾಳಿ ಕಟ್ಟಲು ಅದನ್ನು ಕುತ್ತಿಗೆಯವರೆಗೆ ತೆಗೆದುಕೊಂಡು ಹೋಗಿದ್ದಾನೆ.

55
ಮೂರು ಗಂಟು ಬೀಳತ್ತಾ ಅಥವಾ?

ಆದರೆ, ನಿತ್ಯಾಳ ಕೊರಳಿಗೆ ಮೂರು ಗಂಟು ಬೀಳತ್ತಾ ಅಥ್ವಾ ಇನ್ನೇನಾದರೂ ಅನಾಹುತವಾಗುತ್ತಾ ಗೊತ್ತಿಲ್ಲ. ಕೊನೆಯ ಉಸಿರು ಇರುವವರೆಗೂ ನಿಮ್ಮ ಜೊತೆ ಇರುವೆ ಎಂದು ಕರ್ಣ ಕೊಟ್ಟ ಮಾತನ್ನು ಉಳಿಸಿಕೊಳ್ತಾನಾ ಅಥವಾ ಅನಿವಾರ್ಯವಾಗಿ ನಿಧಿಗೆ ಬಾಳ್ವೆ ಕೊಡುತ್ತಾನಾ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories