Vijayalakshmi Subramani: ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ, ಲಲಿತಾ ಪಾತ್ರದಲ್ಲಿ ವಿಜಯಲಕ್ಷ್ಮೀ ಸುಬ್ರಮಣಿ ನಟಿಸುತ್ತಿದ್ದರು. ಇದೀಗ ಪಾತ್ರವನ್ನ ಇದ್ದಕ್ಕಿದ್ದಂತೆ ಅಂತ್ಯ ಮಾಡಲಾಗಿದ್ದು, ಸೀರಿಯಲ್ ನಿಂದ ಹೊರ ಬಂದ ನಟಿ ಈವಾಗ ಏನು ಮಾಡ್ತಿದ್ದಾರೆ ಅನ್ನೋದನ್ನು ಅವರೇ ವಿಡಿಯೋ ಮೂಲಕ ತಿಳಿಸಿದ್ದಾರೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿ, ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿದೆ. ಈ ಧಾರಾವಾಹಿಯ ಪ್ರತಿಯೊಂದು ಪಾತ್ರಗಳನ್ನು ಜನರು ಇಷ್ಟಪಟ್ಟಿದ್ದರು. ಧಾರಾವಾಹಿಯಲ್ಲಿ ವಿಶ್ವನ ತಾಯಿ ‘ಲಲಿತಾ’ ಪಾತ್ರದಲ್ಲಿ ವಿಜಯಲಕ್ಷ್ಮೀ ಸುಬ್ರಮಣಿ ನಟಿಸುತ್ತಿದ್ದು, ಇದೀಗ ಆ ಪಾತ್ರಕ್ಕೆ ಅಂತ್ಯ ಹಾಡಲಾಗಿದೆ.
26
ವಿಜಯಲಕ್ಷ್ಮೀ ಸುಬ್ರಮಣಿ
ಇಲ್ಲಿವರೆಗೂ ವಿಶ್ವನ ತಾಯಿಯಾಗಿ, ಲಕ್ಷ್ಮಿಯ ಮುದ್ದಿನ ಅತ್ತಿಗೆಯಾಗ್ಗಿ ವಿಜಯಲಕ್ಷ್ಮೀ ಸುಬ್ರಮಣಿ ಅದ್ಭುತವಾಗಿ ನಟಿಸಿದ್ದರು. ವೀಕ್ಷಕರು ಸಹ ಆ ಪಾತ್ರವನ್ನು ಇಷ್ಟಪಟ್ಟಿದ್ದರು. ಇದೀಗ ಆ ಪಾತ್ರವನ್ನು ಸಾಯಿಸುವ ಮೂಲಕ ಧಾರಾವಾಹಿಯಲ್ಲಿ ಲಲಿತಾ ಪಾತ್ರದ ಅಂತ್ಯ ಮಾಡಲಾಗಿದೆ.
36
ಈವಾಗ ಏನು ಮಾಡ್ತಿದ್ದಾರೆ ವಿಜಯಲಕ್ಷ್ಮೀ
ಧಾರಾವಾಹಿಯಿಂದ ಹೊರ ಬಂದ ಮೇಲೆ ವಿಜಯಲಕ್ಷ್ಮೀಯವರು ಇದೀಗ ಟೀ ಎಸ್ಟೇಟ್ ಒಂದರಲ್ಲಿ ಚಹಾ ಎಲೆಗಳನ್ನು ತೆಗೆಯುವಂತಹ ಕೆಲಸವನ್ನು ಮಾಡುತ್ತಿದ್ದಾರಂತೆ. ಹಾಗಂತಹ ನಟಿ ತಮ್ಮ ಇನ್’ಸ್ಟಾಗ್ರಾಂ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ವಿಡೀಯೋದಲ್ಲಿ ವಿಜಯಲಕ್ಷ್ಮೀ ಅವರು ಚಹಾ ಎಲೆಗಳನ್ನು ಆರಿಸುವಂತೆ ನಟಿಸುತ್ತಿದ್ದಾರೆ. ಆವಾಗ ಅವರ ಬಳಿ, ವಿಜಯಲಕ್ಷ್ಮೀ ಅವರೇ ನೀವು ನಟಿ ಅಲ್ವಾ? ಇಲ್ಲೇನು ಮಾಡುತ್ತಿದ್ದೀರಿ ಎಂದು ಕೇಳಲಾಗಿದೆ. ಅದಕ್ಕೆ ವಿಜಯಲಕ್ಷ್ಮೀ ಏನ್ ಮಾಡ್ಲಿ ಬೇರೆ ಕೆಲಸ ಇಲ್ಲ ಅಲ್ವ? ಸೀರಿಯಲ್ ನಿಂದ ಮನೆಗೆ ಕಳುಹಿಸಿಬಿಟ್ರು, ಅದಕ್ಕಾಗಿ ಅಟ್ಲೀಸ್ಟ್ ಚಹಾ ಎಲೆಗಳನ್ನು ಕಿತ್ತು ಹೊಟ್ಟೆ ತುಂಬಿಸಿಕೊಳ್ಳೋಣ ಅಂತ, ಮಲೇಷ್ಯಾಗೆ ಬಂದು ಈ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
56
ಎಲ್ಲಿ ಕೆಲಸ ಮಾಡ್ತಿದ್ದಾರೆ ನಟಿ?
ನಟಿ ಈಗ ಮಲೇಷ್ಯಾದ ಕೆಮರನ್ ವ್ಯಾಲಿಯಲ್ಲಿರುವ ಟೀ ಕೀಳುವ ಕೆಲಸ ಮಾಡ್ತಾರಂತೆ, ಜೊತೆಗೆ ಆವಾಗವಾಗ ಟೀ ಕುಡಿಯೋದನ್ನು ಮಾಡ್ತಾರಂತೆ ಎನ್ನುತ್ತಾ, ತನಗೆ ಕೆಲಸ ಮಾಡಲು ಬಿಡಿ ಎಂದು ವಿಡಿಯೋ ತೆಗೆಯುವವರಿಗೆ ಹೇಳಿದ್ದಾರೆ. ಅಂದ ಹಾಗೆ ಇದ್ಯಾವುದೂ ನಿಜಾ ಅಲ್ಲ ಇದು ಅಮ್ಮ-ಮಗ ಮಾಡಿರುವಂತಹ ತಮಾಷೆ ವಿಡಿಯೋ ಆಗಿದೆ.
66
ಇದೆಲ್ಲಾ ತಮಾಷೆಗಾಗಿ
ಅಂದ ಹಾಗೆ ನಟಿ ವಿಜಯಲಕ್ಷ್ಮೀ ಅವರು ತಮ್ಮ ಮಗ ಆದಿತ್ಯ ಜೊತೆ ಮಲೇಷ್ಯಾಗೆ ಹಾರಿದ್ದು, ಅಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಮಲೇಷ್ಯಾದ ವಿವಿಧ ತಾಣಗಳಲ್ಲಿ ಪ್ರವಾಸ ಮಾಡುತ್ತಿದ್ದು, ಅಲ್ಲಿನ ಸುಂದರವಾದ ಟೀ ಎಸ್ಟೇಟ್ ನಲ್ಲಿ ತೆಗೆದಿರುವಂತಹ ಕಾಮಿಡಿ ವಿಡಿಯೋ ಇದಾಗಿದೆ. ವೀಕ್ಷಕರು ಈಗಾಗಲೇ ನಟಿಯನ್ನು ಧಾರಾವಾಹಿಯಲ್ಲಿ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಆದಷ್ಟು ಬೇಗನೆ ಹೊಸ ಧಾರಾವಾಹಿಯಲ್ಲಿ ಬರಲಿ ಎಂದು ಹಾರೈಸುತ್ತಿದ್ದಾರಎ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.