Karna Serial ಟ್ವಿಸ್ಟ್​: ಮಗು ಹೆತ್ತು ಸಾಯ್ತಾಳಾ ನಿತ್ಯಾ? ಭಾಷೆ ಕೊಟ್ಟು ತನ್ನ ಗುಂಡಿ ತಾನೇ ತೋಡಿಕೊಂಡ್ನಾ ಕರ್ಣ

Published : Sep 22, 2026, 12:47 PM IST

ಕರ್ಣ ಧಾರಾವಾಹಿಯಲ್ಲಿ ನಿತ್ಯಾಳ ಸೀಮಂತ ಕಾರ್ಯಕ್ರಮ ನಡೆಯುತ್ತಿದ್ದು, ಹೆರಿಗೆಯ ಬಗ್ಗೆ ಅವಳು ಆತಂಕಗೊಂಡಿದ್ದಾಳೆ. ಮಗುವಿನ ಜವಾಬ್ದಾರಿ ಹೊರುವುದಾಗಿ ಕರ್ಣ ಮಾತು ಕೊಟ್ಟಿದ್ದಾನೆ. ಈ ಮಾತು ಮುಂದೆ ನಿಧಿ ಮತ್ತು ಕರ್ಣನ ಸಂಸಾರಕ್ಕೆ ಮುಳುವಾಗುವ ಸಾಧ್ಯತೆಯಿದೆ.

PREV
16
ನಿತ್ಯಾಳ ಸೀಮಂತ ಕಾರ್ಯಕ್ರಮ

ಕರ್ಣ ಸೀರಿಯಲ್​ (Karna Serial)ನಲ್ಲಿ ನಿತ್ಯಾಳ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಆದರೆ ಡೆಲವರಿ ಸಮಯದಲ್ಲಿ ಮಗು ಅಥವಾ ಅಮ್ಮನಿಗೆ ಏನಾದರೂ ಆಗುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿರುವ ಕಾರಣದಿಂದ ನಿತ್ಯಾ ಚಿಂತಿತಳಾಗಿದ್ದಾಳೆ.

26
ಮಗುವನ್ನು ನೋಡಿಕೊಳ್ಳುವ ಪ್ರಾಮಿಸ್​

ಸೀಮಂತದ ಸಂಭ್ರಮದ ನಡುವೆಯೇ, ನಿತ್ಯಾ ಕರ್ಣನ ಬಳಿ ಬಂದು, ನನಗೆ ಏನಾದ್ರೂ ಆದ್ರೆ ನನ್ನ ಮಗುವನ್ನು ನೀವೇ ನೋಡಿಕೊಳ್ತೀರಾ ಎಂದು ಪ್ರಶ್ನಿಸುತ್ತಾಳೆ. ಆಗ ಕರ್ಣ, ಜೀವನ ಪೂರ್ತಿ ಈ ಮಗುವಿಗೆ ಅಪ್ಪನ ಸ್ಥಾನದಲ್ಲಿ ನಿಂತು ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎನ್ನುತ್ತಾನೆ.

36
ಸಾಯ್ತಾಳಾ ನಿತ್ಯಾ?

ಈ ಹಿನ್ನೆಲೆಯಲ್ಲಿ, ನಿತ್ಯಾ ಸಾಯುತ್ತಾಳಾ ಎಂದು ಎನ್ನಿಸುವುದು ಉಂಟು. ಆದರೆ ನಿತ್ಯಾ ಸತ್ತರೆ ಸೀರಿಯಲ್​ನಲ್ಲಿ ಮತ್ತೇನೂ ಟ್ವಿಸ್ಟ್​ ಸಿಗಲು ಸಾಧ್ಯವಿಲ್ಲ. ಏಕೆಂದರೆ, ನಿತ್ಯಾಳನ್ನು ಕರ್ಣ ಬದುಕಿಸಿಕೊಳ್ತಾನೆ. ಮಗು ಕೂಡ ಚೆನ್ನಾಗಿಯೇ ಇರುತ್ತದೆ.

46
ನಿತ್ಯಾಗೆ ಬೇರೆ ಭಾವನೆ ಬರುತ್ತಾ?

ಆದರೆ, ಇಲ್ಲಿ ಆ ಮಗುವಿಗೆ ತಾನೇ ಅಪ್ಪ ಆಗಿರ್ತೇನೆ ಎನ್ನುವ ಕರ್ಣನ ಭಾಷೆಯೇ ಆತನಿಗೆ ಮುಳುವಾಗುವ ಸಾಧ್ಯತೆ ಇದೆ. ಕರ್ಣನ ಅಪ್ಪನ ಪ್ರೀತಿ ನೋಡಿ ನಿತ್ಯಾಗೆ ಸಹಜವಾಗಿ ಬೇರೆಯದ್ದೇ ಭಾವನೆ ಬರುವ ಸಾಧ್ಯತೆ ಇದೆ.

56
ಸಂಸಾರಕ್ಕೆ ಮಾತೇ ಮುಳುವಾಗುತ್ತಾ?

ಇಲ್ಲಿ ಕರ್ಣ ಏನೋ ಮಗುವಿಗೆ ತನಗೆ ಆದಂಥ ಹೀನಾಯ ಸ್ಥಿತಿ ಬರಬಾರದು ಎನ್ನುವ ಕಾರಣಕ್ಕೆ, ಮಾತು ಕೊಟ್ಟಿದ್ದಾನೆ. ಆದರೆ ಮುಂದೊಂದು ದಿನ ಆ ಮಾತೇ ಅವನಿಗೆ ಮುಳುವಾಗಿ, ನಿಧಿಯ ಜೊತೆಗಿನ ಸಂಸಾರಕ್ಕೆ ಅಡ್ಡವಾಗುವ ಸಾಧ್ಯತೆ ಕೂಡ ಇಲ್ಲದಿಲ್ಲ!

66
ತಂಗಿಯ ಪಾಲಿಗೆ ವಿಲನ್​ ಆಗ್ತಾಳಾ?

ಹಾಗಿದ್ದರೆ ನಿತ್ಯಾ ಸಾಯ್ತಾಳಾ ಅಥ್ವಾ ತಂಗಿ ನಿಧಿಯ ಬಾಳಿಗೆ ಅವಳೇ ವಿಲನ್​ ಆಗ್ತಾಳಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಇಲ್ಲದೇ ಹೋದರೆ, ಸೀರಿಯಲ್​ನಲ್ಲಿ ಯಾವುದೇ ರೋಚಕತೆ ಎನ್ನೋದು ಇರುವುದೇ ಇಲ್ಲ. ಆದ್ದರಿಂದ ನಿತ್ಯಾ ಸಾಯುವುದಿಲ್ಲ ಎನ್ನೋದಂತೂ ಗ್ಯಾರೆಂಟಿ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories