ಲಕ್ಷ್ಮೀ ನಿವಾಸ ದಾರಿಯಲ್ಲಿಯೇ ಹೊರಟ ನಂದಗೋಕುಲ: ನಿಗೂಢ ಸಾಮ್ಯತೆ ಪತ್ತೆ ಹಚ್ಚಿದ ವೀಕ್ಷಕರು

Published : Sep 21, 2026, 04:04 PM IST

ಜೀ ಕನ್ನಡದ 'ಲಕ್ಷ್ಮೀ ನಿವಾಸ' ಮತ್ತು ಕಲರ್ಸ್ ಕನ್ನಡದ 'ನಂದಗೋಕುಲ' ಧಾರಾವಾಹಿಗಳಲ್ಲಿ ಪಾತ್ರವೊಂದನ್ನು ಸದ್ದಿಲ್ಲದೆ ಕೈಬಿಟ್ಟಿರುವುದನ್ನು ವೀಕ್ಷಕರು ಪತ್ತೆಹಚ್ಚಿದ್ದಾರೆ. ಪ್ರಮುಖ ಪಾತ್ರದ ಅನುಪಸ್ಥಿತಿಯಲ್ಲಿ ನಂದಗೋಕುಲದಲ್ಲಿ ಕಥೆಗೆ ಹೊಸ ತಿರುವುಗಳು ಎದುರಾಗಿವೆ.

PREV
15
ಲಕ್ಷ್ಮೀ ನಿವಾಸ ಮತ್ತು ನಂದಗೋಕುಲ

ಜೀ ಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಮತ್ತು ಕಲರ್ಸ್ ಕನ್ನಡ ವಾಹಿನಿಯ ನಂದಗೋಕುಲ ಧಾರಾವಾಹಿಯಲ್ಲಿನ ಒಂದು ಸಾಮತ್ಯೆಯನ್ನು ವೀಕ್ಷಕರು ಕಂಡು ಹಿಡಿದಿದ್ದು, ಇತ್ತೀಚಿನ ಪ್ರೋಮೋಗಳಿಗೆ ಕಮೆಂಟ್ ಮಾಡುತ್ತಿದ್ದಾರೆ. ಆರಂಭದಲ್ಲಿದ್ದ ಒಂದು ಪಾತ್ರ ಕ್ರಮೇಣ ಸೀರಿಯಲ್‌ನಿಂದ ಮಾಯವಾಗಿರೋದಕ್ಕೆ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

25
ಹಿರಿಯ ಮಗಳು ಮಂಗಳಾ

ಲಕ್ಷ್ಮೀ ನಿವಾಸ ಸೀರಿಯಲ್‌ ಆರಂಭದಲ್ಲಿ ಶ್ರೀನಿವಾಸ ಮತ್ತು ಲಕ್ಷ್ಮೀ ದಂಪತಿಗೆ ಮೂರು ಹೆಣ್ಣು ಮತ್ತು ಇಬ್ಬರು ಗಂಡು ಹಾಗೂ ಸಾಕು ಮಗ ವೆಂಕಿಯನ್ನು ತೋರಿಸಲಾಗಿತ್ತು. ಮೂವರು ಹೆಣ್ಣು ಮಕ್ಕಳ ಪೈಕಿ, ಹಿರಿಯ ಮಗಳು ಮಂಗಳಾ ಪಾತ್ರವೂ ಲಕ್ಷ್ಮೀ ನಿವಾಸದ ಕಥೆಯಲ್ಲಿತ್ತು. ಕಾಲಕ್ರಮೇಣ ಮಂಗಳಾ ಪಾತ್ರವನ್ನು ಕೊನೆ ಮಾಡಲಾಗಿತ್ತು. ಇತ್ತೀಚೆಗೆ ಪಾತ್ರಕ್ಕೆ ಪೂರ್ಣ ವಿರಾಮ ಇಡಲಾಗಿದೆ.

35
ನಂದಕುಮಾರ ಮತ್ತು ಗಿರಿಜಾ ದಂಪತಿಯ ಹಿರಿಯ ಮಗಳು

ಇದೀಗ ನಂದಗೋಕುಲ ಸೀರಿಯಲ್‌ನಲ್ಲಿಯೂ ನಂದಕುಮಾರ ಮತ್ತು ಗಿರಿಜಾ ದಂಪತಿಯ ಹಿರಿಯ ಮಗಳನ್ನು ಕಳೆದ ಕೆಲವು ಎಪಿಸೋಡ್‌ಗಳಿಂದ ತೋರಿಸುತ್ತಿಲ್ಲ. ಇತ್ತೀಚೆಗೆ ಮಾಧವ ಮತ್ತು ಪ್ರಿಯಾಳ ಮರುಮಾಂಗಲ್ಯ ನಡೆದ್ರೂ, ಹಿರಿಯ ಮಗಳು ಕಾಣಿಸಿಕೊಳ್ಳಲಿಲ್ಲ, ಅಷ್ಟೇ ಯಾಕೆ? ನಂದಕುಮಾರ ಮತ್ತು ಗಿರಿಜಾಳ ಅದ್ಧೂರಿ ಮದುವೆ ನಡೆದ್ರೂ ಹಿರಿಯ ಮಗಳು ಕಾಣಿಸಿಕೊಳ್ಳಲಿಲ್ಲ.

45
ನಂದಗೋಕುಲ

ಸದ್ಯ ನಂದಗೋಕುಲದಲ್ಲಿ ಮೂವರು ಗಂಡು ಮತ್ತು ಓರ್ವ ಹೆಣ್ಣು ಮಗಳನ್ನು ಮಾತ್ರ ತೋರಿಸುತ್ತಿದ್ದಾರೆ. ಲಕ್ಷ್ಮೀ ನಿವಾಸದಂತೆಯೇ ನಂದಗೋಕುಲದಲ್ಲಿಯೂ ಪಾತ್ರವನ್ನು ಸದ್ದಿಲ್ಲದೇ ಕೊನೆ ಮಾಡಿರೋದಕ್ಕೆ ವೀಕ್ಷಕರು ಬೇಸರವನ್ನು ಹೊರ ಹಾಕಿದ್ದಾರೆ. ಮತ್ತೊಂದೆಡೆ ನಂದಗೋಕುಲದಿಂದ ದೂರವಾಗಿರುವ ಸುಂದರ ಮಾವನಿಗೆ ಸತ್ಯ ತಿಳಿಯಲು ಎಲ್ಲರೂ ಪ್ಲಾನ್ ಮಾಡಿದ್ದಾರೆ.

55
ಸಾವು-ಬದುಕಿನ ನಡುವೆ ಹೋರಾಟ

ಲಕ್ಷ್ಮೀ ನಿವಾಸದಲ್ಲಿ ಅತ್ತೆಯನ್ನು ರಕ್ಷಣೆ ಮಾಡಲು ಹೋದ ಭಾವನಾಗೆ ಗುಂಡೇಟು ತಗುಲಿದೆ. ಇದೀಗ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಭಾವನಾ, ಮಾವ ಜವರೇಗೌಡ ರಕ್ತ ನೀಡಿದ್ದಾನೆ. ತನ್ನಿಂದ ದೂರವಾಗಿರೋ ಚಿನ್ನುಮರಿಯನ್ನು ಒಲೈಕೆ ಮಾಡಿಕೊಳ್ಳಲು ಜಯಂತ್ ಪ್ರಯತ್ನಿಸುತ್ತಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories