Bigg Bossನಲ್ಲಿ ಅಪರೂಪದ ಘಟನೆ: ಕ್ಯಾನ್​ ತುಳಿದು ತುಳಿದು ಒಬ್ಬರನ್ನೇ ನಾಮಿನೇಟ್​ ಮಾಡಿದ ಸ್ಪರ್ಧಿಗಳು

Published : Sep 21, 2026, 08:15 PM IST

ಬಿಗ್‌ಬಾಸ್ ಸೀಸನ್ 13ರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಹುತೇಕ ಎಲ್ಲಾ ಸ್ಪರ್ಧಿಗಳು ಮಾಡರ್ನ್ ಮಹಾಕವಿ ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ಫೇಕ್ ಎಲಿಮಿನೇಷನ್ ಬಳಿಕ ಮಂಜು ಮರಳಿ ಬಂದಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಜಗಳಗಳ ನಡುವೆ ಮಂಜು ನಿಜಕ್ಕೂ ಮನೆಯಿಂದ ಹೋಗುತ್ತಾರಾ ಎಂಬ ಕುತೂಹಲ ಮೂಡಿದೆ.

PREV
16
ನಾಮಿನೇಷನ್​ ಪ್ರಕ್ರಿಯೆ

ಇದೀಗ ಬಿಗ್​ಬಾಸ್​ ಸೀಸನ್​ 13 (Bigg Boss Season 13)ರಲ್ಲಿ ನಾಮಿನೇಷನ್​ ಪ್ರಕ್ರಿಯೆ ಶುರುವಾಗಿದೆ. ಒಬ್ಬೊಬ್ಬರೇ ಎಲಿಮಿನೇಟ್ ಆಗಿ ಮನೆಯಿಂದ ಹೊರಕ್ಕೆ ಹೋಗುವ ಪಾಳಿ ಬಂದಾಗಿದೆ. ಈ ಪ್ರಕ್ರಿಯೆ ಬಂದಾಗ ಸಾಮಾನ್ಯವಾಗಿ ಮನೆ ಮಂದಿಯೆಲ್ಲಾ ತಮಗೆ ಆದವರ ಹೆಸರುಗಳನ್ನು ಹೇಳುವುದು ಉಂಟು. ಇದು ಪರಸ್ಪರ ವೈಮನಸ್ಸಿಗೂ ಕಾರಣ ಆಗುವುದು ಉಂಟು.

26
ಒಬ್ಬ ಸ್ಪರ್ಧಿಯನ್ನೇ ನಾಮಿನೇಟ್​

ಆದರೆ, ಅಪರೂಪ ಎಂಬಂತೆ ಈ ಸೀಸನ್​ನಲ್ಲಿ ಎಲ್ಲರೂ ಸೇರಿ ಒಬ್ಬ ಸ್ಪರ್ಧಿಯನ್ನೇ ನಾಮಿನೇಟ್​ ಮಾಡಿದ್ದಾರೆ. ಅವರೇ ಮಾಡರ್ನ್ ಮಹಾಕವಿ ಮಂಜು. ಇವರ ಹೆಸರನ್ನು ಸೂಚಿಸಿದ ಕಾವ್ಯ, ಅವರಿಗೆ ಕ್ಯಾರೆಕ್ಟರ್ ಹಾಳು ಮಾಡುವುದಷ್ಟೇ ಗೊತ್ತಿದೆ ಎಂದು ಆರೋಪಿಸಿದ್ದಾರೆ. ಬಳಿಕ ಮಂಜು ಫೋಟೋ ಇರುವ ಬಾಟಲಿಯನ್ನು ಕಾಲಿನಿಂದ ತುಳಿದು ಕೆಳಗೆ ಬೀಳಿಸುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

36
ಎಲ್ಲರೂ ಒಂದೇ ಹೆಸರು

ಇದೇ ರೀತಿ ತಾಂಡವ್, ವೈಷ್ಣವಿ, ಸಂಗೀತಾ, ಕಾವ್ಯ, ಆಸಿಯಾ, ಕಿರಣ್, ಧನುಷ್ ಸೇರಿದಂತೆ ಹಲವು ಸ್ಪರ್ಧಿಗಳು ಮಂಜು ಹೆಸರನ್ನೇ ಸೂಚಿಸುವ ಮೂಲಕ ಬಹುತೇಕ ಎಲ್ಲರೂ ಮಂಜುವಿನ ಹೆಸರನ್ನೇ ತೆಗೆದುಕೊಂಡಿದ್ದಾರೆ.

46
ಮತ್ತೆ ವಾಪಸ್​

ಫೇಕ್ ಎಲಿಮಿನೇಷನ್ ಮೂಲಕ ಮನೆಯಿಂದ ಹೊರಹೋಗಿದ್ದ ಮಂಜು ಮತ್ತು ಕಿರಣ್ ಮತ್ತೆ ವಾಪಸ್ ಆಗಿದ್ದಾರೆ. ಕಿರಣ್ ಮತ್ತೆ ಮನೆಗೆ ಬಂದಿದ್ದನ್ನು ಕೆಲವರು ಖುಷಿಯಿಂದ ಸ್ವಾಗತಿಸಿದರೆ, ಮಂಜು ವಾಪಸ್ ಬಂದಿರುವುದಕ್ಕೆ ಕೆಲವರಿಂದ ಅಸಮಾಧಾನದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಜು ವಾಪಸಾತಿ ಹಲವು ಸ್ಪರ್ಧಿಗಳಿಗೆ ಇಷ್ಟವಾಗಿಲ್ಲ.

56
ತಲೆ ಬೋಳಿಸಿ ಫೇಮಸ್​ ಆಗಿದ್ದ ಮಂಜು

ಕಾಮನ್​ ಮ್ಯಾನ್​ ಮೂಲಕ ಬಿಗ್​ಬಾಸ್​​ ಮನೆಯೊಳಕ್ಕೆ ಮಾಡರ್ನ್ ಮಹಾಕವಿ ಮಂಜು ಹೋಗಿದ್ದಾರೆ. ಅಗ್ನಿಪರೀಕ್ಷೆ ಸಮಯದಲ್ಲಿ, ಅರ್ಧ ತಲೆ ಬೋಳಿಸಿಕೊಂಡು ಜಡ್ಜಸ್​ ಮನಗೆದ್ದಿದ್ದರು. ಅವರು ಉದ್ದೇಶಪೂರ್ವಕವಾಗಿ ಎಲ್ಲರನ್ನೂ ಟ್ರಿಗರ್ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ನೆಟ್ಟಿಗರೂ ಕಮೆಂಟ್​ ಮಾಡುತ್ತಿದ್ದಾರೆ.

66
ನಿಜಕ್ಕೂ ಹೊರ ಹೋಗ್ತಾರಾ?

ಆದರೆ, ಜಗಳ, ಗಲಾಟೆ ಇದ್ದರೇನೇ ಬಿಗ್​ಬಾಸ್​ ಎನ್ನೋದು ಗೊತ್ತೇ ಇದೆ. ಇದೇ ಕಾರಣಕ್ಕೆ ಮಂಜು ಅವರನ್ನು ನಿಜಕ್ಕೂ ಬಿಗ್​ಬಾಸ್​ ಹೊರಕ್ಕೆ ಕಳಿಸುತ್ತಾ ಎನ್ನೋದು ಸದ್ಯಕ್ಕಿರುವ ಕುತೂಹಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories