Karna Serial ರೋಚಕ ಟ್ವಿಸ್ಟ್​: ಕರ್ಣನ ಕೈಸೇರಿತು ಆ ನಿಗೂಢ ಕಾರ್ಡ್​- ಸೀತಾ ರಹಸ್ಯವೇನು

Published : Jul 17, 2026, 12:33 PM IST

ಆಷಾಢ ಮಾಸದಿಂದಾಗಿ ಪತ್ನಿ ನಿಧಿಯಿಂದ ದೂರವಿರುವ ಕರ್ಣ, ಆಕೆಯ ಮನೆಯ ವಾರ್ಡ್​ರೋಬ್​ನಲ್ಲಿ 'ಸೀತಾ ಮಾರುಗುಡಿ' ಎಂಬ ಕಾರ್ಡ್​ ಪತ್ತೆ ಹಚ್ಚುತ್ತಾನೆ. ಇದ್ಯಾರಿದು ಎಂದು ಅಜ್ಜಿಯನ್ನು ಪ್ರಶ್ನಿಸಿದಾಗ, ಕರ್ಣನ ಕುಟುಂಬವನ್ನು ನಾಶಮಾಡಲು ಕಾಯುತ್ತಿರುವ ಸೀತಾಳ ರಹಸ್ಯ ಬಯಲಾಗುವ ಕಾಲ ಸನ್ನಿಹಿತವಾಗುತ್ತದೆ.

PREV
15
ಆಷಾಢ ವಿರಹ

ಕರ್ಣ ಸೀರಿಯಲ್​ (Karna Serial) ನಲ್ಲಿ ಸದ್ಯ ಕರ್ಣ ಮತ್ತು ನಿಧಿಯ ಮದುವೆಯಾಗಿದ್ದರೂ ಆಷಾಢ ಮಾಸದಿಂದಾಗಿ ದೂರ ಇರಬೇಕಾದ ಪರಿಸ್ಥಿತಿ ಇದ್ದು, ಇಬ್ಬರೂ ವಿರಹ ವೇದನೆ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಕರ್ಣ ಮಾರುವೇಷದಲ್ಲಿ ನಿಧಿಯ ಮುಂದೆ ಬಂದು ಸಿಕ್ಕಿಹಾಕಿಕೊಳ್ಳುತ್ತಿದ್ದಾನೆ.

25
ಸರ್ವನಾಶ ಮಾಡಲು ಪ್ಲ್ಯಾನ್​

ಅದರ ನಡುವೆಯೇ, ಕರ್ಣನ ಫ್ಯಾಮಿಲಿಯನ್ನು ಸರ್ವನಾಶ ಮಾಡಲು ಹೊಂಚು ಹಾಕುತ್ತಿರುವ ಸೀತಾ ರಹಸ್ಯವೂ ಗೊತ್ತಾಗುವ ಕಾಲ ಸನ್ನಿಹಿತವಾಗಿದೆ. ಯಾರೀ ಸೀತಾ ಎನ್ನುವುದು ತಿಳಿಯಬೇಕಿದೆ.

35
ವಾರ್ಡ್​ರೋಬ್​ನಲ್ಲಿ ರಹಸ್ಯ

ಊಟದ ಬಳಿಕ ಕರ್ಣ ಟವಲ್​ ಕೇಳಿದಾಗ ನಿಧಿ ವಾರ್ಡ್​ರೋಬ್​ನಲ್ಲಿ ಇದೆ ಎಂದಿದ್ದಾಳೆ. ವಾರ್ಡ್​ರೋಬ್​ ತೆಗೆದಾಗ ಅಲ್ಲೊಂದು ಸೀತಾ ಮಾರುಗುಡಿ ಎನ್ನುವ ಕಾರ್ಡ್​ ಕರ್ಣನ ಕಣ್ಣಿಗೆ ಬೀಳುತ್ತದೆ.

45
ಅಜ್ಜಿಯ ಬಳಿ ಪ್ರಶ್ನೆ

ಇದ್ಯಾರಿದು ಸೀತಾ ಮಾರಿಗುಡಿ ಎಂದು ಬಂದು ಕರ್ಣ ನೇರವಾಗಿ ನಿಧಿಯ ಅಜ್ಜಿಯ ಬಳಿ ಯಾರಿದು ಸೀತಾ ಎಂದು ಕೇಳಿದಾಗ, ಅಜ್ಜಿ ಶಾಕ್​ ಆಗಿ ಹೋಗುತ್ತಾಳೆ.

55
ಯಾರು ಆ ಸೀತಾ?

ಅಲ್ಲಿಗೆ ಕರ್ಣನ ಫ್ಯಾಮಿಲಿಯನ್ನು ಸರ್ವನಾಶ ಮಾಡಲು ಹೊಂಚು ಹಾಕುತ್ತಿರುವ ಸೀತಾ ಯಾರು ಎನ್ನುವ ಬಗ್ಗೆ ಕರ್ಣನಿಗೆ ತಿಳಿಯತ್ತಾ? ನಿಧಿ ಅಪ್ಪ-ಅಮ್ಮನ ಸಾವಿಗೆ ಕಾರಣ ಯಾರು ಎನ್ನುವುದು ಗೊತ್ತಾಗತ್ತಾ? ಇವೆಲ್ಲಾ ಸದ್ಯಕ್ಕಿರುವ ರೋಚಕ ಸ್ಟೋರಿಯಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories