ನನಗ್ಯಾರು ಫ್ರೆಂಡ್ಸ್ ಇಲ್ಲಾ ರೀ ಅಂತಾ ಕಣ್ಣೀರಿಟ್ಟ ಮಹಾನಟಿ ವರ್ಷಾ ಡಿಗ್ರಜೆ; ವಿಡಿಯೋ

Published : Jul 16, 2026, 01:26 PM IST

ಜೀ ಕನ್ನಡದ ಮಹಾನಟಿ ಖ್ಯಾತಿಯ ನಟಿ ವರ್ಷಾ ಡಿಗ್ರಜೆ, ತಮಗೆ ಸ್ನೇಹಿತರಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಟ್ಟಿದ್ದಾರೆ. ಶಾಲಾ ದಿನಗಳಲ್ಲಿ ತಾನು ಮಾಡಿದ ತರಲೆ ಕೆಲಸಗಳಿಂದಾಗಿ ಯಾರು ತನ್ನೊಂದಿಗೆ ಸ್ನೇಹ ಬೆಳೆಸಲಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

PREV
15
ವರ್ಷಾ ಡಿಗ್ರಜೆ ಕಣ್ಣೀರು

ಜೀ ಕನ್ನಡ ವಾಹಿನಿಯ ಮಹಾನಟಿ ರಿಯಾಲಟಿ ಶೋ ಮಹಾನಟಿ ಖ್ಯಾತಿಯ ವರ್ಷಾ ಡಿಗ್ರಜೆ, ಸೋಶಿಯಲ್ ಮೀಡಿಯಾದಲ್ಲಿ ಬಂದು ಕಣ್ಣೀರು ಹಾಕಿ, ನನಗ್ಯಾರು ಫ್ರೆಂಡ್ಸ್ ಇಲ್ಲಾ ರೀ ಎಂದು ಕಣ್ಣೀರು ಹಾಕಿದ್ದಾರೆ. ಹಾಗೆಯೇ ತಮಗ್ಯಾಕೆ ಸ್ನೇಹಿತರಿಲ್ಲ ಎಂಬ ಕಾರಣವನ್ನು ಸ್ವತಃ ಅವರೇ ನೀಡಿದ್ದಾರೆ.

25
ಕನ್ನಿಕಾ ಪಾತ್ರದಲ್ಲಿ ವರ್ಷಾ ನಟನೆ

ಉತ್ತರ ಕರ್ನಾಟಕ ಭಾಗದ ಪ್ರತಿಭಾನ್ವಿತ ಕಲಾವಿದೆ ವರ್ಷಾ ಡಿಗ್ರಜೆ ಜೈನ್. ಚಿಕ್ಕ ವಯಸ್ಸಿನಲ್ಲಿಯೇ ಮನೆ ಜವಾಬ್ದಾರಿ ತೆಗೆದುಕೊಂಡು ಕುಟುಂಬಕ್ಕೆ ಬೆನ್ನೆಲುಬು ಆದವರು. ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಜೊತೆ ತಮ್ಮಿಷ್ಟದ ನಟನೆಯಲ್ಲಿ ಸೈ ಅನ್ನಿಸಿಕೊಂಡು, ಇಂದು ಬ್ರಹ್ಮಗಂಟು ಸೀರಿಯಲ್ ನಲ್ಲಿ ಕನ್ನಿಕಾಳಾಗಿ ನಟಿಸುತ್ತಿದ್ದಾರೆ.

35
ಕಣ್ಣೀರು ಹಾಕಿದ್ದೇಕೆ ಮಹಾನಟಿ?

ತಮಗೆ ಯಾರು ಸ್ನೇಹಿತರಿಲ್ಲ ಎಂದು ಹೇಳಿಕೊಂಡಿರುವ ವರ್ಷಾ ಡಿಗ್ರಜೆ, ಚಿಕ್ಕವಳಿದ್ದಾಗಿನಿಂದಲೂ ಯಾರು ನನ್ನೊಂದಿಗೆ ದೋಸ್ತಿ ಮಾಡಿಕೊಂಡಿಲ್ಲ. ನಾನು ಅಷ್ಟು ಕೆಟ್ಟಾಕಿ ಇದ್ದೆ ಅನ್ನಿಸುತ್ತೆ. ಇದ್ದೆ ಯಾಕೆ ಅಂದ್ರೆ ಶಾಲೆಯಲ್ಲಿ ಪರೀಕ್ಷೆ ನಡೆಯುವಾಗ ಯಾರಾದ್ರು ನಕಲು ಮಾಡ್ತಿದ್ರೆ ಓಡಿ ಹೋಗಿ ಟೀಚರ್‌ಗೆ ಹೇಳ್ತಿದ್ದೆ. ಹಿಂಗೆ ಮಾಡಿದ್ರೆ ಯಾರು ನನ್ನೊಂದಿಗೆ ದೋಸ್ತಿ ಮಾಡ್ತಾರೆ ಎಂದು ವರ್ಷಾ ಪ್ರಶ್ನೆ ಮಾಡ್ತಾರೆ.

45
ನಾನೊಬ್ಬಳೇ ಹೋಂ ವರ್ಕ್ ಮಾಡ್ತಿದ್ದೆ

ಮುಂದುವರಿದು 5 ಗಂಟೆಗೆ ಸ್ಕೂಲ್ ಬೆಲ್ ಆಗುವ ಸಂದರ್ಭದಲ್ಲಿ ಟೀಚರ್‌ಗೆ ಪ್ರಶ್ನೆ ಕೇಳಿ ಕ್ಲಾಸ್ 15 ನಿಮಿಷ ಹೆಚ್ಚಾಗುವಂತೆ ಮಾಡ್ತಿದ್ದೆ. ಟೀಚರ್ ಹೋಮ್ ವರ್ಕ್ ಕೊಡದೇ ಹೋಗ್ತಿದ್ರೆ ನೆನಪು ಮಾಡುತ್ತಿದ್ದೆ. ಮರುದಿನ ನಾನೇ ನೆನಪು ಮಾಡಿ ಹೋಮ್ ವರ್ಕ್ ಹೇಳುತ್ತಿದ್ದೆ. ಯಾಕೆಂದ್ರೆ ನಾನೊಬ್ಬಳೇ ಹೋಮ್ ವರ್ಕ ಮಾಡ್ಕೊಂಡು ಬಂದಿರುತ್ತೆದ್ದೆ. ಅವರಿಗೆಲ್ಲಾ ಹೊಡೆಯೋದನ್ನು ನಾನು ನೋಡುತ್ತಿದ್ದೆ ಎಂದು ವರ್ಷಾ ಹೇಳಿಕೊಂಡಿದ್ದಾರೆ.

55
ಇದೊಂದು ತಮಾಷೆಯ ವಿಡಿಯೋ

ಇಷ್ಟು ಮಾತ್ರವಲ್ಲ PE ಟೀಚರ್ ಬಂದಿಲ್ಲ ಅಂದ್ರೆ ಆಟ ಆಡೋದು ಬಿಟ್ಟು ಗಣಿತ ಮಾಸ್ಟರ್‌ನನ್ನು ಕರ್ಕೊಂಡು ಬರುತ್ತಿದ್ದೆ. ಶಾಲೆಯಲ್ಲಿ ಹಿಂಗೆಲ್ಲಾ ಮಾಡಿದ್ರೆ ಯಾರು ನನ್ನ ಜೊತೆ ದೋಸ್ತಿ ಮಾಡ್ತಾರೆ ಹೇಳ್ರಿ. ಆದ್ರೆ ನಾನೇನು ಅಷ್ಟು ಕೆಟ್ಟಾಕಿ ಇರಲಿಲ್ಲ, ಚೋಲೊ ಇದ್ರೀನ್ರಿ ಎಂದು ಹೇಳಿ ತಮಾಷೆಯ ವಿಡಿಯೋವೊಂದನ್ನು ವರ್ಷಾ ಡಿಗ್ರಜೆ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories