Karna Serial: ಮಾಂಗಲ್ಯ ಮುಟ್ಟಿ ಈ ಪ್ರಮಾಣ ಮಾಡೋದಾ ನಿತ್ಯಾ? ನಿಧಿ-ಕರ್ಣ ಲವ್​ ಸ್ಟೋರಿ ಅಂತ್ಯ?

Published : Mar 19, 2026, 06:50 PM IST

ಯುಗಾದಿ ಹಬ್ಬದ ದಿನ  ಕರ್ಣ ಮಾಡಿದ ತ್ಯಾಗಗಳನ್ನು ನೆನೆದು ನಿತ್ಯಾ ಮಂಗಳಸೂತ್ರ ಮುಟ್ಟಿ ಒಂದು ಶಪಥ ಮಾಡಿದ್ದಾಳೆ. ಕೊನೆಯುಸಿರಿರುವವರೆಗೂ ಕರ್ಣನನ್ನು ಜೋಪಾನ ಮಾಡುವುದಾಗಿ ನಿತ್ಯಾ ಮಾಡಿದ ವಾಗ್ದಾನ, ಕರ್ಣ ಮತ್ತು ನಿಧಿಯ ಪ್ರೇಮಕಥೆಗೆ ಹೊಸ ತಿರುವು ನೀಡುವಂತಿದೆ.

PREV
16
ಟ್ವಿಸ್ಟ್​ ಮೇಲೆ ಟ್ವಿಸ್ಟ್​

ಕರ್ಣ ಸೀರಿಯಲ್​ (Karna Serial) ಇದೀಗ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಪಡೆಯುತ್ತಿದೆ. ನಿಧಿ ಮತ್ತು ಕರ್ಣನ ಲವ್​ಸ್ಟೋರಿ ಮಾತ್ರ ನಿತ್ಯಾಳಿಗೆ ಯಾವಾಗ ಗೊತ್ತಾಗತ್ತೋ ಎಂದು ವೀಕ್ಷಕರು ಕಾಯುತ್ತಲೇ ಇದ್ದಾರೆ.

26
ಕರ್ಣ- ನಿಧಿ ವಿಲವಿಲ

ಆದರೆ, ಇದು ಸದ್ಯ ತಿಳಿಯುವ ಹಾಗೆ ಕಾಣಿಸುವುದಿಲ್ಲ. ಅತ್ತ ನಿಧಿ ಮತ್ತು ಕರ್ಣ ಪ್ರೀತಿಯ ವಿಷಯ ಹೇಳಿಕೊಳ್ಳಲಾಗದೇ, ದೂರ ಇರಲಾಗದೇ ವಿಲವಿಲ ಎನ್ನುತ್ತಿದ್ದಾರೆ.

36
ನಿತ್ಯಾ ಶಪಥ

ಆದರೆ, ಇದೀಗ ಯುಗಾದಿಯ ದಿನವೇ ನಿತ್ಯಾ ಒಂದು ಶಪಥ ಮಾಡಿದ್ದರಿಂದ, ನಿಧಿ ಮತ್ತು ಕರ್ಣನ ಲವ್​ ಸ್ಟೋರಿ ಸದ್ಯ ಗೋವಿಂದ ಎನ್ನುತ್ತಿದ್ದಾರೆ ವೀಕ್ಷಕರು.

46
ಬಿಚ್ಚಿಟ್ಟ ಮಂಗಳಸೂತ್ರ

ಅಷ್ಟಕ್ಕೂ ನಿತ್ಯಾ ತಾಳಿ ಸರವನ್ನು ಬಿಚ್ಚಿಟ್ಟು ಬಂದಿದ್ದಳು. ಅದನ್ನು ಶಾಂತಿ ನೋಡಿದ್ದಾಳೆ. ಹೀಗೆ ತಾಳಿ ಬಿಚ್ಚಬಾರದು. ಇದು ನಿನಗೆ ದೇವರು ಕೊಟ್ಟಿರುವ ವರದಾನ. ಕರ್ಣ ಮತ್ತು ನಿನ್ನ ಜೀವನವನ್ನು ಇದು ಜೋಪಾನ ಮಾಡುತ್ತದೆ. ನಿನಗಾಗಿ ಎಷ್ಟೊಂದು ತ್ಯಾಗ ಮಾಡಿರೋ ಕರ್ಣನನ್ನು ಇದು ಕಾಪಾಡುತ್ತದೆ. ಬೇಗ ಹಾಕಿಕೊಂಡು ಬಾ ಎಂದಿದ್ದಾಳೆ.

56
ಕರ್ಣನ ನೆನಪು

ಅದರಂತೆ ನಿತ್ಯಾ ಮಂಗಳಸೂತ್ರವನ್ನು ಹಿಡಿದು, ಕರ್ಣ ಮಾಡಿದ ತ್ಯಾಗ ನೆನಪಿಸಿಕೊಂಡಿದ್ದಾಳೆ. ಆ ಮಗುವಿಗೆ ನಾನೇ ತಂದೆ ಆಗುತ್ತೇನೆ ಎನ್ನುವುದರಿಂದ ಹಿಡಿದು, ಅವಳಿಗೆ ಆಸ್ಪತ್ರೆಯಲ್ಲಿ ಕೆಲಸ ಕೊಡಿಸುವ ತನಕ ಮಾಡಿರುವ ತ್ಯಾಗವನ್ನು ನೆನಪಿಸಿಕೊಂಡಿದ್ದಾಳೆ.

66
ನಿತ್ಯಾ ವಾಗ್ದಾನ

ದೇವರು ನನಗಾಗಿ ನಿಮ್ಮನ್ನು ನನ್ನ ಬಾಳಿಗೆ ಕಳುಹಿಸಿದ್ದಾನೆ. ಇಲ್ಲದಿದ್ದರೆ ನನಗೆ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ನಿತ್ಯಾ ಹೇಳಿಕೊಂಡಿದ್ದಾಳೆ. ಹೀಗೆ ಹೇಳುತ್ತಾ ಅವಳಿಗೆ ನಿಜಕ್ಕೂ ಕರ್ಣನ ಮೇಲೆ ಲವ್​ ಆಗಿಬಿಟ್ಟರೆ ಎನ್ನುವ ಭಯ ವೀಕ್ಷಕರದ್ದು. ಸದ್ಯ ಅದೇ ಹಾದಿಯಲ್ಲಿ ನಿತ್ಯಾ ಇರುವಂತೆ ಕಾಣುತ್ತಿದೆ. ಕೊನೆಯ ಉಸಿರು ಇರುವವರೆಗೂ ನಿಮ್ಮನ್ನು ಜೋಪಾನ ಮಾಡುತ್ತೇನೆ ಎಂದು ಮಂಗಳಸೂತ್ರ ಮುಟ್ಟಿ ಹೇಳಿದ್ದಾಳೆ ನಿತ್ಯಾ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories