ಬಿಗ್ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಕನಸು ಹಂಚಿಕೊಂಡಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಮೊದಲ ನೋಟದ ಪ್ರೀತಿ ಮತ್ತು ಆಪ್ತ ಸ್ನೇಹಿತನ ಮೇಲಾಗುವ ಪ್ರೀತಿಯ ಬಗ್ಗೆ ಅವರು ಮಾತನಾಡಿದ್ದಾರೆ.
ಬಿಗ್ಬಾಸ್ 12 (Bigg Boss 12)ರ ಮೂಲಕ ಜನಪ್ರಿಯತೆ ಪಡೆದು, ಎಲ್ಲರ ಮನಸ್ಸನ್ನು ಗೆದ್ದು ಬೀಗುತ್ತಿರುವವರಲ್ಲಿ ಒಬ್ಬರು ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ.
26
ಒಂದು ವಿಶೇಷ
ರಕ್ಷಿತಾ ಶೆಟ್ಟಿ ಮಾತನಾಡಿದ್ರು ಅಲ್ಲಿ ಏನೋ ಒಂದು ವಿಶೇಷ ಇದ್ದೇ ಇರುತ್ತದೆ. ಇದೇ ಕಾರಣಕ್ಕೆ ಈಕೆ ಸಂದರ್ಶನಕ್ಕೆ ಎಲ್ಲೆಲ್ಲಿ ಹೋಗ್ತಾರೋ ಅಲ್ಲೆಲ್ಲಾ ಸದ್ದು ಮಾಡುವುದು ಇದೆ.
36
ಮದುವೆಯಾಗುವ ಹುಡುಗ
ಇದಾಗಲೇ ರಕ್ಷಿತಾ ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಹೇಳಿದ್ದಾರೆ. ಗದ್ದೆ ಇರಬೇಕು, ಗುಡಿಸಲು ಇರಬೇಕು, ಕೊಟ್ಟಿಗೆ, ದನ ಕರು ಎಲ್ಲಾ ಇರಬೇಕು. ಅವನಿಗೆ ಒಬ್ಬಳು ಅಜ್ಜಿ ಇರಬೇಕು ಎಂದೆಲ್ಲಾ ಕನಸನ್ನು ಹೇಳಿದ್ದಾರೆ ರಕ್ಷಿತಾ ಶೆಟ್ಟಿ.
ಇದೀಗ ಅವರು, ಲವ್ ಹೇಗೆಲ್ಲಾ ಆಗುತ್ತದೆ ಎನ್ನುವ ಬಗ್ಗೆ ಮಾತನಾಡಿದ್ದು, ಅದರ ವಿಡಿಯೋ ಸಕತ್ ವೈರಲ್ ಆಗುತ್ತಿದೆ. sailfeelmusicindia1 ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇವರ ವಿಡಿಯೋ ಶೇರ್ ಮಾಡಲಾಗಿದೆ.
56
ಲವ್ ಆ್ಯಟ್ ಫಸ್ಟ್ ಸೈಟ್
ಇದರಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ಮೊದಲು ನಾವು ಬೆಸ್ಟ್ ಫ್ರೆಂಡ್ ಆಗಬೇಕು, ಬೆಸ್ಟ್ ಫ್ರೆಂಡ್ ಆದ ಬಳಿಕ ಲವ್ ಮಾಡ್ತೀವಿ ಅಲ್ವಾ ಎಂದು ಪ್ರಶ್ನಿಸಿದ್ದಾರೆ. ಬೇರೆ ಬೇರೆ ಲವ್ ಇರುತ್ತದೆ. ಕೆಲವರಿಗೆ ಲವ್ ಆ್ಯಟ್ ಫಸ್ಟ್ ಸೈಟ್ ಆಗುತ್ತದೆ. ನೋಡಿದ ತಕ್ಷಣ ಲವ್ ಆಗುತ್ತದೆ ಎಂದು ಒಂದು ಬಗೆಯನ್ನು ಹೇಳಿದ್ದಾರೆ.
66
ಲೈಫ್ನಲ್ಲಿ ಬೆಸ್ಟ್ ಫ್ರೆಂಡ್
ಬಳಿಕ ಅವರು, ಇನ್ನೊಂದು ಎಂದರೆ ನಮಗೆ ಲೈಫ್ನಲ್ಲಿ ಬೆಸ್ಟ್ ಫ್ರೆಂಡ್ ಸಿಕ್ತಾರೆ. ಅವರು ಸಿಕ್ಕನಂತರ ಕಂಫರ್ಟೆಬಲ್ ಜೋನ್ ಆಗುತ್ತದೆ. ಆಮೇಲೆ ನಮಗೆ ಮನಸ್ಸಲ್ಲಿ ಒಂದು ಆಗುತ್ತದೆ. ಓ ಇವರೇ ನಮ್ಮ ಲವರ್ ಎಂದು ಎಂದಿದ್ದಾರೆ ರಕ್ಷಿತಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.