ಬಹುತೇಕ ಕನ್ನಡ ಧಾರಾವಾಹಿಗಳು ಮಹಿಳಾ ಪ್ರಧಾನವಾಗಿದ್ದು, ಇದರಲ್ಲಿನ ನಾಯಕ ಪಾತ್ರಗಳನ್ನು ಪೆದ್ದು ಮತ್ತು ಮುಗ್ಧರೆಂದು ಚಿತ್ರಿಸಲಾಗುತ್ತದೆ. ಬ್ರಹ್ಮಗಂಟು, ಅಣ್ಣಯ್ಯ, ನಾ ನಿನ್ನ ಬಿಡಲಾರೆ ಸೀರಿಯಲ್ಗಳ ನಾಯಕರು ವಿಲನ್ಗಳ ಅಸಲಿಯತ್ತನ್ನು ತಿಳಿಯದೇ ಇರುವುದು ಪ್ರೇಕ್ಷಕರನ್ನು ಕೆರಳಿಸಿದೆ.
ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ, ಎಲ್ಲಾ ಭಾಷೆಗಳ ಧಾರಾವಾಹಿಗಳೂ ಮಹಿಳಾ ಪ್ರಧಾನವೇ ಆಗಿದೆ. ಇದಕ್ಕೆ ಕಾರಣ ಸಿಂಪಲ್. ಮಹಿಳಾ ವೀಕ್ಷಕರೇ ಹೆಚ್ಚು ಎನ್ನುವ ಕಾರಣಕ್ಕೆ. ಒಂದು ಹೊತ್ತು ಅಡುಗೆ ಮಾಡುವುದನ್ನು, ಊಟ ಮಾಡುವುದನ್ನು ಬಿಟ್ಟರೂ ಸೀರಿಯಲ್ ತಪ್ಪಿಸದ ದೊಡ್ಡ ಮಹಿಳಾ ವರ್ಗವೇ ಇದೆ ಎನ್ನುವುದು ಅಧ್ಯಯನ ಕೂಡ ತಿಳಿಸಿದೆ. ಆ ಸೀರಿಯಲ್ ಪಾತ್ರಗಳಲ್ಲಿ ತಾವೂ ಒಂದಾಗಿ, ಪಾತ್ರಗಳನ್ನೇ ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ನೋಡುವಲ್ಲಿ ಮಹಿಳೆಯರದ್ದು ಎತ್ತಿದ ಕೈ.
27
ಪುರುಷರೇ ಪೆದ್ದರು
ಇದೇ ಕಾರಣಕ್ಕೆ, ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿ ನಾಯಕರು ಅಥ್ವಾ ಹೀರೋಗಳು ಎಂದರೆ ಮೂರ್ಖರು, ಪೆದ್ದು, ಮುಗ್ಧರು ಇಂಥ ಕ್ಯಾರೆಕ್ಟರ್ ಇದ್ದರೆ, ವಿಲನ್ ವಿಷ್ಯಕ್ಕೆ ಬಂದರೆ ಲೇಡಿಗಳೇ ವಿಲನ್ಗಳು! ಇದು ಸಿನಿಮಾದ ತದ್ವಿರುದ್ಧ. ವಿಲನ್ಗಳ ಬಂಡವಾಳ ಬಯಲಾಗಿದ್ದರೂ, ಅದನ್ನು ಪೆದ್ದು ನಾಯಕನಿಗೆ ಮಾತ್ರ ಅರ್ಥ ಆಗೋದೇ ಇಲ್ಲ ಎನ್ನುವುದನ್ನೇ ಬಹುತೇಕ ಸೀರಿಯಲ್ಗಳು ಹೇಳುವುದು ಉಂಟು.
37
ಅಂತೂ ಇಂತೂ ಗೊತ್ತಾಯ್ತು
ಅಮೃತಧಾರೆಯಲ್ಲಿ ಶಕುಂತಲಾ ಬಗ್ಗೆ ಎಷ್ಟೋ ಎಪಿಸೋಡ್ ಆದ್ಮೇಲೆ ಗೌತಮ್ಗೆ ತಿಳಿದಿದೆ ಎನ್ನೋದೇ ಪುಣ್ಯ. ಸೀತಾರಾಮದಲ್ಲಿ ಭಾರ್ಗವಿ ಬಗ್ಗೆ ರಾಮ್ಗೆ ವಿಷಯ ಸೀರಿಯಲ್ ಮುಗಿಯುವ ತನಕವೂ ಗೊತ್ತಾಗಿರಲಿಲ್ಲ. ಶ್ರೀರಸ್ತು ಶುಭಮಸ್ತುವಿನಲ್ಲಿ ಶಾರ್ವರಿ ಬಗ್ಗೆ ಎಲ್ಲರಿಗೂ ಗೊತ್ತಾದ ಬಳಿಕ ಕೊನೆಯಲ್ಲಿ ಮಾಧವ್ಗೆ ತಿಳಿದಿತ್ತು.
ಆದರೆ ಸದ್ಯ, ಬ್ರಹ್ಮಗಂಟುವಿನಲ್ಲಿ ಸೌಂದರ್ಯ ಬಗ್ಗೆ ಚಿರುಗೆ ವಿಷ್ಯ ಇನ್ನೂ ಗೊತ್ತಾಗಲೇ ಇಲ್ಲ. ಅದೇ ಇನ್ನೊಂದೆಡೆ, ಅಣ್ಣಯ್ಯ ಸೀರಿಯಲ್ನಲ್ಲಿ ಶಿವುಗೆ ಮಾವನ ಅರ್ಥಾತ್ ಪಾರು ಅಪ್ಪನ ಅಸಲಿಯತ್ತು ತಿಳಿಯದೇ ಹೋದರೆ, ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಶರತ್ಗೆ ಅಮ್ಮ ಮಾಳವಿಕಾ ಬಗ್ಗೆ ಇನ್ನೂ ಗೊತ್ತಾಗಲಿಲ್ಲ!
57
ಅಮ್ಮನ ಬಗ್ಗೆ ತಿಳಿದೇ ಇಲ್ಲ
ಇದೀಗ Naa Ninna Bidalaare Serialನಲ್ಲಿ ಮಾಯಾ ಒಳ್ಳೆಯವಳಾಗಿದ್ದಾಳೆ. ಅವಳಿಗೆ ಮಾಳವಿಕಾಳ ಮಾಟ, ಮಂತ್ರದ ಬಗ್ಗೆ ತಿಳಿದಿದೆ. ಅದನ್ನು ಶರತ್ಗೆ ಹೇಳಬೇಕು ಎಂದುಕೊಂಡು ಬಂದರೆ ಶರತ್, ಅವಳಿಗೆ ಬೈದು ಅಲ್ಲಿಂದ ಹೊರಟು ಹೋಗಿದ್ದಾನೆ.
67
ಬ್ರಹ್ಮಗಂಟು ಸೀರಿಯಲ್ನಲ್ಲಿ...
ಬ್ರಹ್ಮಗಂಟು ಸೀರಿಯಲ್ನಲ್ಲಿ, ಅತ್ತಿಗೆ ಸೌಂದರ್ಯಳನ್ನೇ ಅಮ್ಮ ಎಂದು ಪ್ರೀತಿಸುತ್ತಿದ್ದಾನೆ ಚಿರು. ಅವಳು ಕಂತ್ರಿ ಎನ್ನುವುದು ಎಷ್ಟೋ ಬಾರಿ ತಿಳಿಯಬೇಕಿತ್ತು. ದೀಪಾ ಹೇಳಿದರೂ ಕೇಳದೇ ಆಕೆಯನ್ನೇ ಸಾವಿನ ಬಾಯಿಗೂ ದೂಡಿ, ಈಗ ಗೋಳೋ ಎನ್ನುತ್ತಿದ್ದಾನೆ.
77
ಸೀರಿಯಲ್ ಪ್ರೇಮಿಗಳ ಪ್ರಾರ್ಥನೆ
ಇನ್ನು ಅಣ್ಣಯ್ಯ ಸೀರಿಯಲ್ನಲ್ಲಿ ಮಾವ ಎಂದರೆ ಶಿವುಗೆ ಪ್ರಾಣ. ಅವನ ನೀಚಬುದ್ಧಿ ಮಗಳು ಪಾರುಗೆ ಗೊತ್ತಾದರೂ ಶಿವುಗೆ ಇನ್ನೂ ಗೊತ್ತಾಗಲಿಲ್ಲ. ಇವೆಲ್ಲಾ ಕಾರಣದಿಂದ ಇದೀಗ ಸೀರಿಯಲ್ ಪ್ರೇಮಿಗಳು, ದೇವರೇ ಈ ಯುಗಾದಿಯ ಹೊಸ ವರ್ಷದಲ್ಲಾದರೂ ಈ ನಾಯಕರ ಮನಸ್ಥಿತಿಯನ್ನು ಬದಲು ಮಾಡಿ ಪುರುಷರ ಮರ್ಯಾದೆ ಉಳಿಸು ಎಂದು ಬೇಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.