Karna Serial: ಕರ್ಣನ ನೋಡಿ ನಿತ್ಯಾ ಹಾರ್ಟ್​ಬೀಟ್​ ಜೋರಾಯ್ತು: ಮನಸ್ಸು ತಾಳತಪ್ಪೋಯ್ತು! ನಿಧಿ ಕಥೆ?

Published : Feb 18, 2026, 10:20 PM IST

'ಕರ್ಣ' ಧಾರಾವಾಹಿಯಲ್ಲಿ, ನಿಧಿ ಮತ್ತು ಕರ್ಣ ತಮ್ಮ ಪ್ರೀತಿಯನ್ನು ನಿಧಿಯ ಅಕ್ಕ ನಿತ್ಯಾಳಿಂದ ಮುಚ್ಚಿಟ್ಟಿದ್ದಾರೆ. ಆದರೆ, ಕರ್ಣನ ಕಾಳಜಿಯಿಂದಾಗಿ ನಿತ್ಯಾಳಿಗೆ ತಿಳಿಯದಂತೆಯೇ ಅವನ ಮೇಲೆ ಪ್ರೀತಿ ಮೂಡುತ್ತಿದ್ದು, ಇದು ಅಕ್ಕ-ತಂಗಿಯರ ನಡುವೆ ಸಂಘರ್ಷಕ್ಕೆ ಕಾರಣವಾಗುವ ಸೂಚನೆ ನೀಡಿದೆ.

PREV
16
ನಿಧಿ-ಕರ್ಣನ ಲವ್​

ಕರ್ಣ ಸೀರಿಯಲ್​ (Karna Serial)ನಲ್ಲಿ ಇದುವರೆಗೂ ನಿಧಿ ಮತ್ತು ಕರ್ಣನ ಲವ್​ಸ್ಟೋರಿ ನಿತ್ಯಾಗೆ ಗೊತ್ತೇ ಆಗಲಿಲ್ಲ. ನಿಧಿಯ ಲೈಫ್​ ಒಂದು ಹಂತಕ್ಕೆ ಬಂದ ಮೇಲೆ ಈ ವಿಷ್ಯವನ್ನು ರಟ್ಟು ಮಾಡೋಣ ಎಂದು ಕರ್ಣ ಮತ್ತು ನಿಧಿ ಇದ್ದಾರೆ.

26
ವಿಷ್ಯ ಗೊತ್ತೇ ಇಲ್ಲ

ಆದರೆ ಅದರ ನಡುವೆಯೇ, ಕರ್ಣ ತೋರುವ ಕಾಳಜಿಗೆ ಇದಾಗಲೇ ನಿತ್ಯಾಳಿಗೆ ಕರ್ಣನ ಮೇಲೆ ಅರಿವೇ ಇಲ್ಲದಂತೆ ಲವ್​ ಶುರುವಾಗಿದೆ. ಅಷ್ಟಕ್ಕೂ ಅವಳಿಗೆ ಕರ್ಣ ತನ್ನ ತಂಗಿಯನ್ನೇ ಪ್ರೀತಿಸ್ತಾ ಇರೋ ವಿಷ್ಯ ಗೊತ್ತೇ ಇಲ್ವಲ್ಲಾ.

36
ನಿಧಿ ಬೇಸರ

ಇದೀಗ ಮೊದಲ ಬಾರಿಗೆ ಬೇಗ ಎದ್ದು ಕರ್ಣನಿಗಾಗಿ ಕಾಫಿ ಮಾಡಿಕೊಂಡು ಬಂದಿದ್ದಾಳೆ. ಹೇಗಿದೆ ಕಾಫಿ ಎಂದು ಕೇಳಿದ್ದಾಳೆ. ಕರ್ಣ ಸುಮ್ಮನಾದಾಗ, ಕಾಫಿ ಚೆನ್ನಾಗಿಲ್ಲ ಎಂದು ತಿಳಿದು ನಿಧಿ ಬೇಸರಪಟ್ಟುಕೊಂಡಿದ್ದಾಳೆ.

46
ಕರ್ಣನ ಹೊಗಳಿಕೆ

ಕೊನೆಗೆ, ಕರ್ಣ ಸೂಪರ್​ ಆಗಿದೆ. ಮೊದಲ ಬಾರಿಗೆ ಇಷ್ಟು ಚೆನ್ನಾಗಿ ಕಾಫಿ ಮಾಡಿದ್ದೀರಾ ಎಂದಾಗ ಕರ್ಣನ ಪ್ರೀತಿಯ ಮಾತು ಕೇಳಿ ನೀರಾಗಿ ಹೋಗಿದ್ದಾಳೆ ನಿತ್ಯಾ.

56
ದಾರಿ ನೋಡಿದ ನಿತ್ಯಾ

ಕರ್ಣ ತನಗೆ ಬೇರೆ ಕೆಲಸ ಇದೆ ಎಂದು ಹೊರಟಾಗ ಆತ ಹೊರಟ ದಾರಿಯನ್ನೇ ನೋಡುತ್ತಾ ನಿಂತಿದ್ದಾಳೆ ನಿತ್ಯಾ. ಅವಳಿಗೆ ಅರಿವೇ ಇಲ್ಲದೇ ಕರ್ಣನ ಮೇಲೆ ಲವ್ ಶುರುವಾದಂತಿದೆ. ಕರ್ಣ ತೋರಿಸ್ತಿರೋ ಪ್ರೀತಿಗೆ ಆಕೆ ಕರಗಿ ಹೋಗಿದ್ದಾಳೆ.

66
ಹೀಗೆ ಆಗೋದು ಬೇಡ

ಇನ್ನು ಹೀಗಾದರೆ ನಿಧಿಯ ಕಥೆ ಗೋವಿಂದ. ಹೀಗೆ ಆಗೋದು ಬೇಡ. ಯಾವತ್ತೂ ಕರ್ಣ ಮತ್ತು ನಿಧಿ ಒಂದಾಗಬೇಕು. ಕಥೆ ದಾರಿ ತಪ್ಪಬಾರದು ಎಂದು ಕಮೆಂಟ್​ಗಳಲ್ಲಿ ನೆಟ್ಟಿಗರು ಹೇಳುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories