Bigg Boss ದುಡ್ಡು ನಿರ್ಮಲಾ ಸೀತಾರಾಮನ್‌ಗೆ! ಶಾಸಕ ಪ್ರದೀಪ್‌ ಮಾತಿಗೆ ಗಿಲ್ಲಿ ನಟ ಹೇಳಿದ್ದೇನು? ದುಡ್ಡು ಬಂತಾ?

Published : Feb 18, 2026, 09:00 PM IST

ಬಿಗ್‌ಬಾಸ್‌ 12 ಗೆದ್ದು ಇತಿಹಾಸ ಸೃಷ್ಟಿಸಿರುವ ಗಿಲ್ಲಿ ನಟ, ಶಾಸಕ ಪ್ರದೀಪ್ ಈಶ್ವರ್ ಅವರ ತೆರಿಗೆ ಹೇಳಿಕೆಯಿಂದ ಉಂಟಾದ ಚರ್ಚೆಯ ಬಗ್ಗೆ ಮಾತನಾಡಿದ್ದಾರೆ. ತಮಗೆ ಇನ್ನೂ ಬಹುಮಾನದ ಹಣ ಬಂದಿಲ್ಲ ಮತ್ತು ಅದರಲ್ಲಿ ಜಮೀನು ಖರೀದಿಸುವ ಯೋಜನೆಗೆ ಮತ್ತಷ್ಟು ಹಣ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

PREV
16
ಬಿಗ್‌ಬಾಸ್‌ 12 ಇತಿಹಾಸ

ಬಿಗ್‌ಬಾಸ್‌ 12 (Bigg Boss 12) ರಲ್ಲಿ ಗಿಲ್ಲಿನಟ ವಿನ್‌ ಆಗಿ ಇತಿಹಾಸ ಸೃಷ್ಟಿಸಿದ್ದಾರೆ. ಹಿಂದೆಂದಿಗಿಂತಲೂ ಈ ಬಾರಿಯ ಬಿಗ್‌ಬಾಸ್‌ ಹೆಚ್ಚು ಸದ್ದು ಮಾಡಲು ಕಾರಣ, ಗಿಲ್ಲಿ ನಟ ಪಡೆದ ಮತಗಳು. ಈ ಬಾರಿ ಕೆಲವು ರಾಜಕೀಯ ನಾಯಕರು ಕೂಡ ಬಿಗ್‌ಬಾಸ್‌ ಸ್ಪರ್ಧಿಗಳ ಪರವಾಗಿ ಕಣಕ್ಕೆ ಇಳಿದಿದ್ದರು.

26
ಟ್ರೋಲ್‌ ಆಗಿದ್ದ ಶಾಸಕ ಪ್ರದೀಪ್‌ ಈಶ್ವರ್‌

ಬಿಗ್‌ಬಾಸ್‌ ವಿಷಯ ಸದನದಲ್ಲಿಯೂ ಸದ್ದು ಮಾಡಿತ್ತು. ಶಾಸಕ ಪ್ರದೀಪ್‌ ಈಶ್ವರ್‌ ಅವರು, ಈ ಬಾರಿ ಬಿಗ್‌ಬಾಸ್‌ ಗೆದ್ದದ್ದು ಗಿಲ್ಲಿ ನಟ ಅಲ್ಲ, ಬದಲಿಗೆ ನಿರ್ಮಲಾ ಸೀತಾರಾಮನ್‌. ಅವರಿಗೆ ಶೇಕಡಾ 60 ರಷ್ಟು ಟ್ಯಾಕ್ಸ್ ಕೊಡಬೇಕು ಎಂದಿದ್ದರು. ಆದರೆ ಅಸಲಿಗೆ ಶಾಸಕರಾಗಿ ಅವರಿಗೆ ತೆರಿಗೆ ಬಗ್ಗೆ ಅರಿವಿಲ್ಲದೇ ಇರುವುದಕ್ಕೆ ಸಾಕಷ್ಟು ಟ್ರೋಲ್‌ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಆಗಿತ್ತು. ಏಕೆಂದರೆ, ನಿಯಮದ ಪ್ರಕಾರ ಶೇಕಡಾ 60 ರಷ್ಟು ಟ್ಯಾಕ್ಸ್‌ ಅಲ್ಲ, ಬದಲಿಗೆ 15 ಲಕ್ಷ ರೂಪಾಯಿ ಟ್ಯಾಕ್ಸ್‌ ಕಟ್ಟಬೇಕಿದೆ.

36
ದುಡ್ಡಿನ್ನೂ ಬಂದಿಲ್ಲ

ಇದರ ಬಗ್ಗೆ ಇದೀಗ ಗಿಲ್ಲಿ ನಟ (Bigg Boss Gilli Nata) ಮಾತನಾಡಿದ್ದಾರೆ. ಬಾಸ್‌ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಅವರು, ಬಿಗ್‌ಬಾಸ್ ದುಡ್ಡು ಬಂದಿಲ್ಲ. ಇನ್ನೂ 15 ದಿನ ಆಗಬಹುದೇನೋ. ಅದರಲ್ಲಿ ಒಂದಿಷ್ಟು ಟ್ಯಾಕ್ಸ್‌ ಕಟ್‌ ಆಗುತ್ತದೆ ಎಂದಿದ್ದಾರೆ.

46
ಸದನದಲ್ಲಿ ಚರ್ಚೆ

ಬಳಿಕ ಪ್ರದೀಪ್‌ ಈಶ್ವರ್‌ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಗಿಲ್ಲಿ ನಟ, ಈ ಬಾರಿಯ ಬಿಗ್‌ಬಾಸ್‌ ಸದನದಲ್ಲಿಯೂ ಚರ್ಚೆಯಾಗುವ ಮಟ್ಟಿಗೆ ಹೋಯಿತು ಎನ್ನುವುದೇ ಖುಷಿ. ಇಂಥದ್ದೊಂದು ಷೋ ಅಲ್ಲಿಯೂ ಚರ್ಚೆ ಮಾಡುವಂತೆ ಆಗಿರುವುದಕ್ಕೆ ಖುಷಿಯಾಗಿದೆ ಎಂದರು.

56
20 ಎಕರೆ ಜಮೀನು

ಇದೇ ವೇಳೆ ಬಿಗ್‌ಬಾಸ್‌ ದುಡ್ಡಿನಲ್ಲಿ 20 ಎಕರೆ ಜಮೀನು ಪಡೆದುಕೊಳ್ಳುವ ಮಾತಿಗೆ ನಕ್ಕ, ಗಿಲ್ಲಿ ನಟ, ಒಂದು ಎಕರೆ ಜಮೀನಿಗೆ ಕನಿಷ್ಠ ಐವತ್ತು ಲಕ್ಷ ಇದೆ. ಇಪ್ಪತ್ತು ಎಕರೆಗೆ ದುಡ್ಡು ಎಲ್ಲಿಂದ ತರಲಿ ಎಂದು ಪ್ರಶ್ನಿಸಿದ್ದಾರೆ.

66
ದುಡ್ಡಿನಿಂದ ಏನ್‌ ಮಾಡ್ತಾರೆ ಗಿಲ್ಲಿ?

ಅದೇ ರೀತಿ, ಬಿಗ್‌ಬಾಸ್‌ನಿಂದ ಬಂದ ಹಣದಲ್ಲಿ ಜಮೀನು ಖರೀದಿ ಮಾಡಿ ವ್ಯವಸಾಯ ಮಾಡುವ ಹಂಬಲವಿದೆ. ಅದಕ್ಕೆ ಇನ್ನೊಂದಿಷ್ಟು ದುಡ್ಡನ್ನು ಸೇರಿಸಬೇಕು ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories