ನಟನೆಯಿಂದ ವಿರಾಮ ಪಡೆದು ಉದ್ಯಮಿಯಾಗಿರುವ ನಟಿ ಮಯೂರಿ, ತಮ್ಮ ವಿಚ್ಛೇದನದ ವದಂತಿಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಖಾಸಗಿತನವನ್ನು ಗೌರವಿಸುವಂತೆ ಕೋರಿರುವ ಅವರು, ಮಗ ಆರವ್‌ನ ಪಾಲನೆಯೇ ಸದ್ಯ ತಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಿರುತೆರೆಯಿಂದ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದ ಹುಬ್ಬಳ್ಳಿ ಮೂಲದ ಮಯೂರಿ, ಮದುವೆ ಮತ್ತು ಮಗನ ನಂತರ ಬಿಗ್ ಬಾಸ್ ಮೂಲಕ ಮತ್ತೆ ಸುದ್ದಿಯಾದರು. ಇತ್ತೀಚೆಗೆ 'ನನ್ನ ದೇವರು' ಧಾರಾವಾಹಿ ಮೂಲಕ ಕಮ್‌ಬ್ಯಾಕ್ ಮಾಡಿದ್ದರೂ, ಅದು ನಿರೀಕ್ಷಿತ ಯಶಸ್ಸು ಕಾಣದೆ ಬೇಗನೆ ಮುಕ್ತಾಯವಾಯಿತು.
26
ಕ್ಲಿನಿಕ್ ನಡೆಸುತ್ತಿರುವ ಮಯೂರಿ
ಸದ್ಯ ನಟನೆಯಿಂದ ಕೊಂಚ ಬ್ರೇಕ್ ಪಡೆದಿರುವ ಮಯೂರಿ ಅವರು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ಸಂಬಂಧಿಸಿದ (Skin & Hair Clinic) ಕ್ಲಿನಿಕ್ ಒಂದನ್ನು ನಡೆಸುತ್ತಾ ಉದ್ಯಮಿಯಾಗಿಯೂ ಗುರುತಿಸಿಕೊಂಡಿದ್ದಾರೆ.
36
ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ
ಆಗಾಗ ಕೇಳಿಬರುತ್ತಿರುವ ಡಿವೋರ್ಸ್ ವಿಚಾರದ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ನಾನು ಎಲ್ಲಿಯೂ ಡಿವೋರ್ಸ್ ಬಗ್ಗೆ ನಾನಾಗಿ ಹೇಳಿಕೆ ನೀಡಿಲ್ಲ. ನನ್ನ ರಿಲೇಶನ್‌ಶಿಪ್ ಸ್ಟೇಟಸ್ ಬಗ್ಗೆ ಸದ್ಯಕ್ಕೆ ಮಾತನಾಡಲು ಇಷ್ಟವಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. 2020ರಲ್ಲಿ ಮದುವೆ ಆಗಿರುವ ಮಯೂರಿ ಅವರ ಡಿವೋರ್ಸ್ ವಿಚಾರ ಬಹಳ ಬಾರಿ ಚರ್ಚೆಗೆ ಬರುತ್ತಿದೆ.
ತಮ್ಮ ಐದು ವರ್ಷದ ಮಗ ಆರವ್ ಮತ್ತು ಆತನ ತಂದೆಯ ನಡುವೆ ಉತ್ತಮ ಸಂಬಂಧವಿದೆ ಎಂದು ಮಯೂರಿ ತಿಳಿಸಿದ್ದಾರೆ. "ಅವನ ಅಪ್ಪ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ" ಎಂದು ಹೇಳುವ ಮೂಲಕ ಮಗನ ವಿಷಯದಲ್ಲಿ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ.
56
ವೈಯಕ್ತಿಕ ಜೀವನದ ಖಾಸಗಿತನ
"ವೈಯಕ್ತಿಕ ಜೀವನದ ಕೆಲವು ವಿಷಯಗಳು ನಮ್ಮಲ್ಲಿಯೇ ಇರಬೇಕು. ನಟಿಯಾಗಿ ನಾನು ಸಮಾಜಕ್ಕೆ ಮಾದರಿಯಾಗಿರಬೇಕು, ನನ್ನ ಮಗ ಖುಷಿಯಿಂದ ಬೆಳೆಯುತ್ತಿದ್ದಾನೆ ಎಂಬುದು ಮುಖ್ಯ" ಎನ್ನುತ್ತಾ ತಮ್ಮ ಪ್ರೈವಸಿಯನ್ನು ಕಾಪಾಡಿಕೊಳ್ಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
66
ಮಗನ ಸಂಸ್ಕಾರ
ತಮಗೆ ಮಗನ ರೂಪದಲ್ಲಿ ತನ್ನ ತಂದೆಯೇ ಮರಳಿ ಬಂದಿದ್ದಾರೆ ಎಂದು ಭಾವುಕರಾದ ಮಯೂರಿ, ಮಗ ಆರವ್‌ಗೆ ಹಾಡು, ನೃತ್ಯ, ಮತ್ತು ಮಂತ್ರಪಠನೆ ಸೇರಿದಂತೆ ಎಲ್ಲಾ ರೀತಿಯ ಕಲೆ ಹಾಗೂ ಸಂಸ್ಕಾರಗಳನ್ನು ನೀಡಿ ಶಿಸ್ತಿನಿಂದ ಬೆಳೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.