Karna Serial ರೋಚಕ ಟ್ವಿಸ್ಟ್​: ಶ್ರೀರಸ್ತು ಶುಭಮಸ್ತು ತುಳಸಿ ಆಗ್ತಾಳಾ ಕರ್ಣನ ಅಮ್ಮ ಮಾಲತಿ

Published : Jun 11, 2026, 05:56 PM IST

'ಕರ್ಣ' ಧಾರಾವಾಹಿಯಲ್ಲಿ, ತನ್ನ ಅತ್ತೆ ಮಾಲತಿಯು ಮಾವ ರಮೇಶ್‌ನಿಂದ ಅನುಭವಿಸುತ್ತಿರುವ ನೋವನ್ನು ಕಂಡ ಸೊಸೆ ನಿಧಿ, ಆಕೆಯ ಕನಸುಗಳನ್ನು ನನಸಾಗಿಸಲು ಮುಂದಾಗಿದ್ದಾಳೆ. ಮಾವನ ಕಣ್ತಪ್ಪಿಸಿ ಅತ್ತೆಗೆ ಕಾರು ಚಾಲನೆ ಕಲಿಸುವ ಮೂಲಕ ನಿಧಿ, ಅತ್ತೆಯ ಬದುಕಿನಲ್ಲಿ ಹೊಸ ಬದಲಾವಣೆ ತರಲು ಹೊರಟಿದ್ದಾಳೆ.

PREV
16
ಕರ್ಣ-ನಿಧಿ ಮದುವೆ

ಕರ್ಣ ಸೀರಿಯಲ್​ (Karna Serial)ನಲ್ಲಿ ನಿಧಿ ಮತ್ತು ಕರ್ಣನ ಮದುವೆ ಅಂತೂ ಆಗಿದೆ. ವರ್ಷದಿಂದ ಫ್ಯಾನ್ಸ್​ ಕಾಯ್ತಿದ್ದ ಆ ಘಳಿಗೆ ಬಂದಿದೆ. ಈಗೇನಿದ್ರೂ ಕರ್ಣನ ಸಾಲದ ಹೊಸ ಟೆನ್ಷನ್​ ಶುರುವಾಗಿದೆ.

26
ಪತಿಯೇ ಪರದೈವ

ಇತ್ತ ಕರ್ಣನ ವಿಲನ್​ ಅಪ್ಪ ರಮೇಶ್​ನಿಂದ ಟಾರ್ಚರ್​  ಸಹಿಸಿಕೊಂಡು ಬಂದವಳು ಕಣ್ಣನ ಅಮ್ಮ ಮಾಲತಿ. ಟಿಪಿಕಲ್​ ಭಾರತೀಯ ನಾರಿ ಹೀಗೆಯೇ ಇರಬೇಕು ಎಂದು ಹೇಳ್ತಾರಲ್ಲ, ಹಾಗೆ ಇದ್ದಾಳೆ ಈ ಪತ್ನಿ. ಗಂಡನ ಎಲ್ಲಾ ಟಾರ್ಚರ್​ ಸಹಿಸಿಕೊಂಡು ಪತಿಯೇ ಪರದೈವ ಎಂದು ದಿನನಿತ್ಯವೂ ನರಕ ಅನುಭವಿಸುತ್ತಿದ್ದಾಳೆ.

36
ರೋಸಿ ಹೋದ ನಿಧಿ

ಮಾವ ರಮೇಶ್​ ಕೊಡ್ತಿರೋ ಟಾರ್ಚರ್​ ನೋಡಿ ನೋಡಿ ನಿಧಿ ರೋಸಿ ಹೋಗಿದ್ದಾಳೆ. ಅತ್ತೆಯ ಬಳಿ ಮಾತನಾಡುವಾಗ ಆಕೆಗೆ ಪೈಲಟ್​ ಆಗುವ ಕನಸು ಇತ್ತು. ಡಬಲ್​ ಗ್ರಾಜುಯೇಟ್​ ಎಂದೆಲ್ಲಾ ಗೊತ್ತಾಗಿದೆ. ಇಷ್ಟಾದರೂ ಇಷ್ಟೊಂದು ನೋವು ಸಹಿಸಿಕೊಂಡಿರೋದು ನನ್ನಿಂದ ನೋಡಲು ಆಗ್ತಿಲ್ಲ ಎಂದಿರೋ ನಿಧಿ ದೊಡ್ಡ ಸಾಹಸಕ್ಕೆ ಕೈಹಾಕಿದ್ದಾಳೆ.

46
ಅತ್ತೆಯ ಕನಸು ಬೆನ್ನಟ್ಟಿ...

ಅತ್ತೆಯ ಕನಸನ್ನು ನನಸು ಮಾಡಲು ಮೊದಲಿಗೆ ಕಾರಿನ ಡ್ರೈವಿಂಗ್​ ಕಲಿಸಲು ಮುಂದಾಗಿದ್ದಾಳೆ ನಿಧಿ. ಅತ್ತೆಯನ್ನು ಸಂಪೂರ್ಣ ಬದಲು ಮಾಡುವುದು ಅವಳ ಗುರಿ.

56
ಶ್ರೀರಸ್ತು ಶುಭಮಸ್ತು ರಿಪೀಟ್ಸ್​

ಇದನ್ನು ನೋಡಿದ ವೀಕ್ಷಕರು ಶ್ರೀರಸ್ತು ಶುಭಮಸ್ತುವನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿ ಕೂಡ ವಿಧವೆ ತುಳಸಿಯ ಸೊಸೆ  ಸಿರಿ, ಅತ್ತೆಯನ್ನು ಸಂಪೂರ್ಣ ಬದಲು ಮಾಡಿದ್ದಳು. ಅತ್ತೆಯ ಎಲ್ಲಾ ಕನಸುಗಳನ್ನೂ ನನಸು ಮಾಡಿ ಕೊನೆಗೆ ಮತ್ತೊಂದು ಮದುವೆಯನ್ನೂ ಮಾಡಿಸಿದ್ದಳು.

66
ಮಾವನ ವಿರುದ್ಧ ಗೆಲ್ತಾಳಾ?

ಆದರೆ, ಇಲ್ಲಿ ಸ್ವಲ್ಪ ವ್ಯತ್ಯಾಸ ಎಂದರೆ ಮಾಲತಿಗೆ ಗಂಡ ಇದ್ದಾನೆ. ಆದರೆ ತುಳಸಿಯ ಸೊಸೆಯಂತೆಯೇ ಇಲ್ಲಿ ಕೂಡ ಸೊಸೆಯಾಗಿರುವ ನಿಧಿಯೇ ಅತ್ತೆಗೆ ಕಾವಲಾಗಿ ನಿಲ್ಲುತ್ತಾಳೆ. ಮಾವನ ಅರಿವಿಗೆ ಬಾರದಂತೆ ಅತ್ತೆಯನ್ನು ಹೇಗೆ ರೆಡಿ ಮಾಡ್ತಾಳೆ ಎನ್ನೋದು ಈಗಿರುವ ಕುತೂಹಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories