ಭೂಮಿಕಾ ಮೇಡಂ ಮಗುನೇ ಮಿಂಚು… ಪಾರುನಿಂದ ರಿವೀಲ್ ಆಗುತ್ತಾ ಮಹಾ ಸತ್ಯ?

Published : Jun 11, 2026, 02:52 PM IST

Amruthadhaare: ಅಮೃತಧಾರೆ ಧಾರಾವಾಹಿಯ ಬಿಗ್ಗೆಸ್ಟ್ ಸೀಕ್ರೇಟ್, ಅಣ್ಣಯ್ಯ ಧಾರಾವಾಹಿಯ ಪಾರುನಿಂದ ರಿವೀಲ್ ಆಗುತ್ತಾ? ಮಿಂಚೂನೆ ಭೂಮಿಕಾ ಮೇಡಂ ಮಗಳು ಎನ್ನುವ ಒಡಲ ಸತ್ಯ ಡಾಕ್ಟರ್ ಪಾರು ಭೂಮಿಕಾಗೆ ತಿಳಿಸುವ ಹೊತ್ತು ಇದೀಗ ಬಂದಿದೆ. ಸದ್ಯದಲ್ಲಿ ರಿವೀಲ್ ಆಗುತ್ತೆ ದೊಡ್ಡ ಸೀಕ್ರೆಟ್. 

PREV
15
ಅಮೃತಧಾರೆ ಸೀರಿಯಲ್

ಅಮೃತಧಾರೆ ಧಾರಾವಾಹಿಯಲ್ಲಿ ಸದ್ಯ ಪ್ರಸಾರವಾಗುತ್ತಿರುವ ಎಪಿಸೋಡ್ ಪ್ರಕಾರ ಈಗ ಮಿಂಚುವನ್ನು ಕಿಡ್ನಾಪರ್ ಜೊತೆ ಹೋರಾಡಿ, ಮಿಂಚುವಿಗೆ ಯಾವುದೇ ಅಪಾಯ ಆಗದ ಹಾಗೆ ಕರೆದುಕೊಂಡು ಬಂದಿದ್ದಾಳೆ ಭೂಮಿಕಾ. ಆದರೆ ಈಗ ತಮ್ಮ ಮಗಳ ಹುಡುಕಾಟ ಮಾತ್ರ ಮುಂದುವರೆದಿದೆ.

25
DNA ಟೆಸ್ಟ್ ಮಾಡಲು ಹೇಳಿದ ಗೌತಮ್

ಇತ್ತೀಚೆಗೆ ಪ್ರಸಾರವಾದ ಪ್ರೊಮೋದಲ್ಲಿ ತೋರಿಸಿದಂತೆ, ಜೆಡಿ ಕಳುಹಿಸಿದ ಫೇಕ್ ಅಪ್ಪ-ಅಮ್ಮ ಮಿಂಚು ನಮ್ಮ ಮಗಳು ಎಂದಿದ್ದಾಳೆ. ಆದರೆ ಗೌತಮ್, ಇಲ್ಲ ಮಿಂಚು ನಮ್ಮದೇ ಮಗಳು, ಬೇಕಾದ್ರೆ DNA ಟೆಸ್ಟ್ ಎಂದು ಸಹ ಹೇಳಿದ್ದಾರೆ. ಆದರೆ ಇದೀಗ ಮತ್ತೊಂದು ಪ್ರೊಮೋ ರಿಲೀಸ್ ಆಗಿದ್ದು, ಅದು ಇನ್ನೊಂದು ಟ್ವಿಸ್ಟ್ ರಿವೀಲ್ ಮಾಡಿದೆ.

35
ಪಾರು ಸತ್ಯ ರಿವೀಲ್ ಮಾಡ್ತಾಳ?

ಇನ್ನೊಂದು ಕಡೆ ಅಣ್ಣಯ್ಯ ಧಾರಾವಾಹಿ ಪಾರು, ಇನ್ನೊಂದು ಅವಳಿ ಮಕ್ಕಳ ಡೆಲಿವರಿ ಮಾಡುವ ಸಮಯದಲ್ಲಿ ಭೂಮಿಕಾ ಮೇಡಂ ನೆನಪು ಮಾಡಿಕೊಳ್ಳುತ್ತಾಳೆ. ಭೂಮಿಕಾ ಮೇಡಂಗೂ ಅವಳಿ ಮಕ್ಕಳಾಗಿತ್ತು, ಆದರೆ ಒಂದು ಮಗು ಕಾಣೆಯಾಗಿತ್ತು, ಆದರೆ, ಆ ಮಗುವಿನ ಕೈಯಲ್ಲಿ ತ್ರಿಶೂಲದ ಮಚ್ಚೆ ಇತ್ತು ಅನ್ನೋದನ್ನು ನೆನಪಿಸಿಕೊಳ್ಳುತ್ತಾಳೆ.

45
ಭೂಮಿಕಾಗೆ ಕರೆ ಮಾಡಿದ ಪಾರು

ಮಗುವಿನ ಬಗ್ಗೆ ತಿಳಿಯಲು ಭೂಮಿಕಾಗೆ ಫೋನ್ ಮಾಡುವ ಪಾರು, ಮಗುವಿನ ಬಗ್ಗೆ ವಿಚಾರಿಸುತ್ತಾಳೆ. ಮಗುವಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಭೂಮಿಕಾ ಹೇಳುತ್ತಾಳೆ. ಆ ಸಂದರ್ಭದಲ್ಲಿ ಪಾರು ಮೇಡಂ ಖಂಡಿತವಾಗಿಯೂ ನಿಮ್ಮ ಮಗು ಶೀಘ್ರದಲ್ಲಿ ನಿಮ್ಮ ಕೈ ಸೇರಲಿದೆ ಎನ್ನುತ್ತಾಳೆ.

55
ಭೂಮಿಕಾಗೆ ಡೆಲಿವರಿ ಮಾಡಿಸಿದ್ದ ಕರ್ಣ-ಪಾರು

ಅಂದ ಹಾಗೆ ಶಾಕುಂತಲಾ ಮೋಸದಾಟದಿಂದ ಕಾಡಿನಲ್ಲಿ ಕಳೆದು ಹೋಗಿದ್ದ ಭೂಮಿಕಾಗೆ ಡೆಲಿವರಿ ಮಾಡಿಸಿದ್ದು ಡಾಕ್ಟರ್ ಕರ್ಣ ಮತ್ತು ಪಾರು. ಹಾಗಾಗಿ ಅವರಿಂದಲೇ ಭೂಮಿಕಾ-ಗೌತಮ್ ಮಗು ಮಿಂಚು ಎನ್ನುವ ವಿಷಯ ರಿವೀಲ್ ಆಗುವ ಎಲ್ಲಾ ಸಾಧ್ಯತೆ. ಇದೆ. ಮುಂದೇನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories