ಕರ್ಣ ಸೀರಿಯಲ್‌ನಲ್ಲಿ ಕರ್ಣ-ನಿತ್ಯಾ ಮದುವೆಯಿಂದ ತಪ್ಪಿಸಿಕೊಳ್ಳಲು ಯೋಚಿಸುತ್ತಿದ್ದರೆ, ಇತ್ತ ನಿಧಿ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಕುರುಡಿಯೊಬ್ಬಳಿಗೆ ಸಹಾಯ ಮಾಡಲು ಹೋಗಿ, ಆಕೆಯ ಮೋಸದ ಬಲೆಗೆ ಬಿದ್ದು ಅಪಾಯಕಾರಿ ಜಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ.
ಕರ್ಣ ಸೀರಿಯಲ್‌ನಲ್ಲಿ ಕರ್ಣ ಮತ್ತು ನಿತ್ಯಾಳ ಮದುವೆಗೆ ಎಲ್ಲಾ ಸಿದ್ಧತೆ ನಡೆದಿದೆ. ಎರಡೇ ದಿನಗಳಲ್ಲಿ ಮದುವೆ ಎಂದು ಕಳ್ಳ ಜ್ಯೋತಿಷಿ ಭವಿಷ್ಯ ಹೇಳಿ ಹೋಗಿ ಆಗಿದೆ. ಈ ಮದುವೆಯಿಂದ ಹೇಗೆ ತಪ್ಪಿಸಿಕೊಳ್ಳೋದು ಎಂದು ಕರ್ಣ ಮತ್ತು ನಿತ್ಯಾ ಪ್ಲ್ಯಾನ್ ಮಾಡುತ್ತಿದ್ದಾರೆ.
27
ತೇಜಸ್ ಎಂಟ್ರಿ
ಅದರ ನಡುವೆಯೇ, ತೇಜಸ್ ಎಂಟ್ರಿಯಾಗಿದೆ. ರಮೇಶ್ ಪ್ಲ್ಯಾನ್ ಮಾಡಿ ತೇಜಸ್‌ನನ್ನು ಎಸ್ಕೇಪ್ ಆಗುವಂತೆ ಮಾಡುತ್ತಾನೆ. ತೇಜಸ್ ಎಸ್ಕೇಪ್ ಆಗಿ ಹೊರಗಡೆ ಬರುತ್ತಾನೆ. ಅಲ್ಲಿ ಅವನನ್ನು ನಿಧಿ ನೋಡುತ್ತಾಳೆ. ಮುಂದೇನೋ ಗೊತ್ತಿಲ್ಲ.
37
ಸಮಸ್ಯೆಯಲ್ಲಿ ನಿಧಿ
ಆದರೆ ಇದೀಗ ನಿಧಿ ಇನ್ನೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಳೆ. ಕುರುಡಿಯೊಬ್ಬಳಿಗೆ ಡ್ರಾಪ್ ಕೊಡಲು ಹೋಗಿ ಮಹಾ ವಂಚನೆಯಲ್ಲಿ ಬಿದ್ದಿದ್ದಾಳೆ.
ಅಷ್ಟಕ್ಕೂ ಇದು ರಮೇಶನ ಪ್ಲ್ಯಾನೋ ಗೊತ್ತಿಲ್ಲ. ಒಟ್ಟಿನಲ್ಲಿ ಕುರುಡಿಯ ವೇಷದಲ್ಲಿ ಬಂದ ಹುಡುಗಿಯೊಬ್ಬಳು ನಿಧಿಯನ್ನು ಮೋಸದ ಸುಳಿಯಲ್ಲಿ ಸಿಲುಕಿಸಿದ್ದಾಳೆ. ತನಗೆ ಡ್ರಾಪ್ಕೊಡುವಂತೆ ಹೇಳಿದಾಗ ನಿಧಿ ಡ್ರಾಪ್ ಕೊಟ್ಟಿದ್ದಾಳೆ.
57
ಬ್ಯಾಗ್ನಲ್ಲಿ ಹಾಕಿದ್ದೇನು?
ಆಗ ಗುಟ್ಟಾಗಿ ಆಕೆ ನಿಧಿಯ ಬ್ಯಾಗ್ನಲ್ಲಿ ಏನೋ ಹಾಕಿದ್ದಾಳೆ. ಕೊನೆಗೆ ಡ್ರಾಪ್ಮಾಡಿದ ಜಾಗ ನೋಡಿದ ನಿಧಿಗೆ ಈ ಜಾಗ ಸರಿಯಿಲ್ಲ ಎನ್ನಿಸಿದೆ. ಈ ಬಗ್ಗೆ ಕುರುಡಿಯನ್ನು ಕೇಳಿದ್ದಾಳೆ.
67
ಒಳಗೆ ಕರೆದುಕೊಂಡು ಹೋದ ಕುರುಡಿ
ಆದರೆ ಹಾರಿಕೆ ಉತ್ತರ ಕೊಟ್ಟ ಆಕೆ, ನನಗೆ ಒಳಗಡೆವರೆಗೆ ಕರೆದುಕೊಂಡು ಹೋಗು ಎಂದಿದ್ದಾಳೆ. ಭಯ ಪಡುತ್ತಲೇ ನಿಧಿ ಕರೆದುಕೊಂಡು ಹೋಗಿದ್ದಾಳೆ.
77
ನಿಧಿ ಟ್ರ್ಯಾಪ್
ಆ ಜಾಗ ನೋಡಿದ್ರೆ ಇದು ರೆಡ್ಲೈಟ್ ಏರಿಯಾ ಎನ್ನುವುದು ಕಾಣಿಸುತ್ತದೆ. ಆ ಕುರುಡಿಯಾರು, ನಿಧಿಯನ್ನು ಟ್ರ್ಯಾಪ್ ಮಾಡಿದವರು ಯಾರು ಎನ್ನುವ ಕುತೂಹಲವಿದೆ.