ಬಿಗ್ಬಾಸ್ನಿಂದ ಹೊರಬಂದ ನಂತರ ಡಾಗ್ ಸತೀಶ್ ಸರಣಿ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಸಹ ಸ್ಪರ್ಧಿ ಮಂಜು ಭಾಷಿಣಿ, ತನ್ನ ಖ್ಯಾತಿ ತಿಳಿದ ನಂತರ ಮಾಲ್ವೊಂದರಲ್ಲಿ ತನ್ನ ಹಿಂದೆ ಓಡಾಡಿದರು ಎಂದು ಹೇಳಿದ್ದಾರೆ. ಸತೀಶ್ ಅವರ ಈ ಹೇಳಿಕೆಗೆ ಮಂಜು ಭಾಷಿಣಿ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್ಬಾಸ್ (Bigg Boss)ನಿಂದ ಬಂದ ಮೇಲೆ ಡಾಗ್ ಸತೀಶ್ ಸಂದರ್ಶನಗಳು ಹೆಚ್ಚಾಗಿವೆ. ವಯಸ್ಸಿಗೆ ಬಂದ ಮಗ ಇದ್ದರೂ ತಮ್ಮನ್ನು ತಾವು ಸುರಸುಂದರಾಂಗ, ಎಲ್ಲ ಹುಡುಗಿಯರೂ ನನ್ನ ಹಿಂದೆನೇ ಬೀಳ್ತಾರೆ ಎಂದು ವಿವಿಧ ಮೀಡಿಯಾಗಳಲ್ಲಿ ಹೇಳುತ್ತಿರುವ ಡಾಗ್ ಸತೀಶ್, ಬಾಯಿ ಬಿಟ್ಟರೆ ನೂರಾರು ಕೋಟಿಯಲ್ಲಿಯೇ ಮಾತನಾಡುತ್ತಾರೆ.
27
ಹಳೆಯ ಫೋಟೋಗಳಿಂದ ಟ್ರೋಲ್
ಕಾಲೇಜು ದಿನಗಳಲ್ಲಿ ಹುಡುಗಿಯರು ನನ್ನ ಹಿಂದೆನೇ ಇರ್ತಿದ್ರು, ನನ್ನನ್ನು ಆಮೀರ್ ಖಾನ್ ಎನ್ನುತ್ತಿದ್ದರು ಎಂದೆಲ್ಲಾ ಹೇಳುವ ಡಾಗ್ ಸತೀಶ್ ಅವರ ಹಳೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಸಾಕಷ್ಟು ಮಂದಿ ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ ಇವ್ಯಾವುದಕ್ಕೂ ಸತೀಶ್ ಅವರು ಡೋಂಟ್ ಕೇರ್.
37
ಮಂಜು ಭಾಷಿಣಿ ಕುರಿತು...
ಇದೀಗ, gjkannada ಎನ್ನುವ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಡಾಗ್ ಸತೀಶ್ ಅವರು ಪುಟ್ಟಕ್ಕನ ಮಕ್ಕಳು ಬಂಗಾರಮ್ಮ ಖ್ಯಾತಿಯ ಬಿಗ್ಬಾಸ್ ಸ್ಪರ್ಧಿ ಮಂಜು ಭಾಷಿಣಿ (Bigg Boss Manju Bhashini) ಬಗ್ಗೆ ಮಾತನಾಡಿದ್ದಾರೆ.
ಬಿಗ್ಬಾಸ್ ಒಳಗೆ ಇರುವಾಗ ನಾನು ಯಾರು, ನಾನು ಎಷ್ಟು ಫೇಮಸ್ ಎನ್ನೋದು ಅವರಿಗೆ ಗೊತ್ತಿರಲಿಲ್ಲ. ನನ್ನ ವಿರುದ್ಧ ಮಾತನಾಡುತ್ತಿದ್ದರು. ಆದರೆ ಹೊರಗೆ ಬಂದಾಗ ಗೂಗಲ್ ಸರ್ಚ್ ಮಾಡಿ ನೋಡಿದಾಗ ನನ್ನ ಬಗ್ಗೆ ಅವರಿಗೆ ತಿಳಿದು, ಏನ್ ಸಾರ್ ನೀವು ಇಷ್ಟು ಫೇಮಸ್ ಅನ್ನೋದೇ ಗೊತ್ತಿರಲಿಲ್ಲ ಎಂದರು ಎಂದಿದ್ದಾರೆ ಡಾಗ್ ಸತೀಶ್.
57
ನಾನೇ ಅವರಿಗೆ ಬಾಸ್ ಆದೆ
ಬಿಗ್ಬಾಸ್ ಮನೆಯಲ್ಲಿ ಇರುವಾಗ ಅವರು ಬಾಸ್ ರೀತಿ ಆಡಿದ್ರು, ಹೊರಕ್ಕೆ ಬಂದ ಮೇಲೆ ನಾನೇ ಅವರಿಗೆ ಬಾಸ್ ಆದೆ. ಮಾಲ್ ಒಂದರಲ್ಲಿ ನಾನು ಇಂಟರ್ವ್ಯೂ ಕೊಡುತ್ತಿದ್ದಾಗ, ನನಗಾಗಿ ಕಾದು ನಾನು ಬಂದ ಮೇಲೆ ನನ್ನ ಹಿಂದೆ ಮುಂದೆನೇ ಮಂಜು ಭಾಷಿಣಿ ಓಡಾಡಿದ್ರು ಎಂದಿದ್ದಾರೆ.
67
ಮೇಲೆ- ಕೆಳಗೆ ಬರ್ತಿದ್ರು
ನಾನು ಕೆಳಗೆ ಹೋದ್ರೆ ಕೆಳಗೆ ಬರ್ತಿದ್ರು, ಮೇಲೆ ಹೋದ್ರೆ ಮೇಲೆ ಬರ್ತಿದ್ರು. ನನ್ನ ಘನತೆ ಅಂಥದ್ದು, ನಾನ್ಯಾರು ಎಂದು ಬಿಗ್ಬಾಸ್ ಮನೆಯಲ್ಲಿ ಇರುವಾಗ ಯಾರಿಗೂ ಗೊತ್ತಾಗಿಲ್ಲ. ಹೊರಗೆ ಬಂದ ಮೇಲೆ ನನ್ನ ಖ್ಯಾತಿಯ ಬಗ್ಗೆ ತಿಳಿಯುತ್ತಿದೆ ಎಂದಿದ್ದಾರೆ.
77
ನಟಿ ಫ್ಯಾನ್ಸ್ ಗರಂ
ಇದನ್ನು ಕೇಳಿ ಮಂಜು ಭಾಷಿಣಿ ಅವರ ಅಭಿಮಾನಿಗಳು ಫುಲ್ ಗರಂ ಆಗಿದ್ದಾರೆ. ಅವರೇನಾದರೂ ಈ ವಿಡಿಯೋ ನೋಡಿದ್ರೆ ನಿಮ್ ಕಥೆ ಅಷ್ಟೇ ಎನ್ನುತ್ತಿದ್ದಾರೆ. ಮಾತನಾಡುವ ಭರಾಟೆಯಲ್ಲಿ ಅತಿಯಾಗಿ ಮಾತನಾಡಬೇಡಿ ಎಂದು ಕೆಲವರು ಕ್ಲಾಸ್ ತೆಗೆದುಕೊಂಡಿದ್ದಾರೆ.ಇನ್ನು ಸ್ವಲ್ಪ ದಿನ ನಟಿಯ ಫ್ಯಾನ್ಸ್ ಕಣ್ಣಿಗೆ ಕಾಣಿಸದಂತೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಕಾಣಿಸಿಕೊಂಡರೆ ಅಷ್ಟೇ ಕಥೆ ಎನ್ನುತ್ತಿದ್ದಾರೆ.